ಓಲಾ, ಉಬರ್ ದರ ನಿಗದಿ; ಹೈಕೋರ್ಟಿಗೆ ಸರಕಾರ ಮಾಹಿತಿ

ಓಲಾ, ಉಬರ್ ದರ ನಿಗದಿ; ಹೈಕೋರ್ಟಿಗೆ ಸರಕಾರ ಮಾಹಿತಿ

Updated : 22.11.2022

ಬೆಂಗಳೂರು: ಮೊಬೈಲ್ ಅ್ಯಪ್ ಆಧಾರಿತ ಓಲಾ, ಉಬರ್ ಸೇವೆಗಳಲ್ಲಿ ಆಟೋಗಳ ಬಳಕೆಗೆ ದರ ನಿಗದಿಗೆ ಕುರಿತಂತೆ ಅಹವಾಲು ಕೇಳಲಾಗಿದೆ. ನವೆಂಬರ್ 25ರ ಒಳಗಾಗಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ.

ಆ್ಯಪ್ ಆಧಾರಿತ ಒಲಾ, ಉಬರ್ ಸಾರಿಗೆ ಸೇವೆಯಲ್ಲಿ ಆಟೋ ರಿಕ್ಷಾಗಳಿಗೆ ನಿರ್ಬಂಧ ವಿಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅಲ್ಲದೆ, ದರ ಹೆಚ್ಚಳಕ್ಕೆ ಕೋರಿ ಓಲಾ, ಉಬರ್ ಸಂಸ್ಥೆಗಳು ಮಧ್ಯಂತರ ಅರ್ಜಿ ಸಲ್ಲಿಸಿತ್ತು.

© Copyright 2022, All Rights Reserved Kannada One News