ನೋವಿನ ಅಲೆಗಳು- ತೌಸೀಫ್ ಅವರ ಕವಿತೆ

ನೋವಿನ ಅಲೆಗಳು- ತೌಸೀಫ್ ಅವರ ಕವಿತೆ

Updated : 24.07.2022

ನೋವಿನ ಅಲೆಗಳು
ಉದ್ರೇಕಕಾರಿಯಾಗಿ
ಬೀಸುತ್ತಿದೆ ಎದೆಯಂಗಳಕ್ಕೆ.
ತುಸು  ಬಿಡದೆ ಉಲ್ಬಣಗೊಳ್ಳುತ್ತಿರುವ
ನೋವು ಜೀವನದ ನೆಮ್ಮದಿಯನ್ನು
ಬಂಧಿಯಾಗಿಸಿದೆ‌‌‌.!

ಎದೆಗಂಟಿದ ನೋವು
ಸುಡುತ್ತಿರುವ ಬೆಂಕಿ
ಎರಡು ಒಂದೇ ಮುಖ
ದಹಿಸುವಾಗೆಲ್ಲ ನೆಮ್ಮದಿಯೇ
ಇಲ್ಲಿ ಬೂದಿಯಾಗುವುದು.

ಹಣತೆ ಸೋರುವ ಪ್ರಕಾಶ
ಬೆಳಕ ನೀಡುವ ಚಂದಿರ
ಪ್ರಕಾಶವಾಗಿಯೇ ಇರುತ್ತಿತ್ತು
ಗಾಳಿ ಬೀಸಿದರೆ ಹಣತೆಯಲ್ಲಿ ಪ್ರಕಾಶವಿಲ್ಲ
ಸೂರ್ಯನ ಆಗಮನವಾದರೆ
ಚಂದಿರನ ಬೆಳಕಿಲ್ಲ.

ಸಂತೋಷ,ನೆಮ್ಮದಿಯನ್ನು
ನೀನಷ್ಟೇ ಕೂಡಿಸಿಬಿಡು
ಇಲ್ಲಿ ಅದನ್ನು ಕಳೆಯ ತಕ್ಕ
ಜನರೇ ಇರುವುದು.
ನೋವುಗಳು ನಗುಮುಖದಲ್ಲಿ
ಪ್ರತಿಬಿಂಬಿಸಬೇಕಿತ್ತು ಅಷ್ಟೇ ನನ್ನ ಬಯಕೆ!

ಇಲ್ಲಿ ಜನರಿಗೆ ಹಿತವಾದ ಸಾಂತ್ವನ
ಅಷ್ಟೇ ನೀಡಲು ಸಾಧ್ಯ.!
ಬಾಳಬಂಡಿ ಉಮ್ಮಳಿಕೆಯೊಂದಿಗೆ
ಉರುಳುತ್ತಿದೆ.
ಜೀವನ ಬರೀ ಹತಾಶೆಯೊಂದಿಗೆ
ಸಾಗುತ್ತಿವೆ..!

~ತೌಸೀಫ್

© Copyright 2022, All Rights Reserved Kannada One News