Flash News:
ಅಡ್ಡ ಮತದಾನ: ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್‌

ಅಡ್ಡ ಮತದಾನ: ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್‌

Updated : 04.10.2022

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆಂದು ಜೆಡಿಎಸ್‌ ದೂರು ಕೊಟ್ಟ ಹಿನ್ನೆಲೆಯಲ್ಲಿ  ಜೆಡಿಎಸ್‌ನ ಕೋಲಾರದ ಶಾಸಕ ಶ್ರೀನಿವಾಸಗೌಡ ಮತ್ತು ಗುಬ್ಬಿ ಶಾಸಕ ಎಸ್‌.ಆರ್‌.
ಶ್ರೀನಿವಾಸ್‌(ವಾಸು) ಅವರಿಗೆ  ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ನೋಟಿಸ್‌ ನೀಡಿದ್ದಾರೆ.

‘ಜೆಡಿಎಸ್‌ ದೂರಿಗೆ ಉತ್ತರ ನೀಡುವಂತೆ ಸೆ.22 ರಂದೇ ನೋಟಿಸ್‌ ಜಾರಿ ಮಾಡಲಾಗಿದೆ. ನೋಟಿಸ್‌ ತಲುಪಿದ ನಂತರ ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ’ ಎಂದು ವಿಶಾಲಾಕ್ಷಿ ‘ಪ್ರಜಾವಾಣಿಗೆ ತಿಳಿಸಿದರು.

‘ನಿಗದಿತ ಅವಧಿಯಲ್ಲಿ ಉತ್ತರ ನೀಡದೇ ಇದ್ದರೆ, ಎರಡನೇ ಬಾರಿಗೆ ನೋಟಿಸ್‌ ಕೊಡಬಹುದು. ಉತ್ತರ ಪಡೆಯಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಆಗಲೂ ಉತ್ತರ ನೀಡದೇ ಇದ್ದರೆ ಕಾನೂನು ಕ್ರಮಕ್ಕೆ ಅವಕಾಶ ಇರುತ್ತದೆ. ಸಾಮಾನ್ಯವಾಗಿ ಶಾಸಕರು ನೋಟಿಸ್‌ಗೆ ಉತ್ತರ ನೀಡುತ್ತಾರೆ’ ಎಂದು ಅವರು ತಿಳಿಸಿದರು.

© Copyright 2022, All Rights Reserved Kannada One News