ಅಮೆರಿಕ ಡಾಲರ್ ವಿರುದ್ಧ ಇತರ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್

ಅಮೆರಿಕ ಡಾಲರ್ ವಿರುದ್ಧ ಇತರ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್

Updated : 25.09.2022

ಹೊಸದಿಲ್ಲಿ: ಅಮೆರಿಕದ ಡಾಲರ್ ವಿರುದ್ಧ ಇತರ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿಯು "ಉತ್ತಮವಾಗಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

"ಭಾರತೀಯ ಕರೆನ್ಸಿ ಇತರ ಕರೆನ್ಸಿಗಳಂತೆ ಏರಿಳಿತ ಅಥವಾ ಚಂಚಲತೆಗೆ ಒಳಗಾಗದೇ ಉಳಿದಿದೆ " ಎಂದು ಸೀತಾರಾಮನ್ ಪುಣೆಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು

ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನಿರ್ಮಾಲಾ ಹೇಳಿದ್ದಾರೆ ಎಂದು  ಎಎನ್‌ಐ ವರದಿ ಮಾಡಿದೆ

ಡಾಲರ್ ಎದುರು ರೂಪಾಯಿ ಮೌಲ್ಯವು ದಾಖಲೆಯ 81.23ಕ್ಕೆ ಕುಸಿದ ಒಂದು ದಿನದ ನಂತರ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ.

© Copyright 2022, All Rights Reserved Kannada One News