ನಕಲಿ ಲೋನ್ ಆ್ಯಪ್‌ಗಳ ವಿರುದ್ಧ ಸೂಕ್ತ ಕ್ರಮ: ನಿರ್ಮಲಾ ಸೀತಾರಾಮನ್

ನಕಲಿ ಲೋನ್ ಆ್ಯಪ್‌ಗಳ ವಿರುದ್ಧ ಸೂಕ್ತ ಕ್ರಮ: ನಿರ್ಮಲಾ ಸೀತಾರಾಮನ್

Updated : 03.08.2022

ನವದೆಹಲಿ: ದೇಶದ ಹೊರಗಡೆ ಸರ್ವರ್ ಮತ್ತು ನಿಯಂತ್ರಣ ಹೊಂದಿರುವ ಹಾಗೂ ನಕಲಿ ಲೋನ್ ಆ್ಯಪ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೇಶದಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಆ್ಯಪ್‌ಗಳು ಮತ್ತು ಅವುಗಳ ಕಾರ್ಯನಿರ್ವಹಣೆಗೆ ಅನುಕೂಲ ಕಲ್ಪಿಸಿರುವ ಭಾರತೀಯರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಬಂಧನೆಗಳನ್ನು ಉಲ್ಲಂಘಿಸಿ ಸಾಲ ನೀಡುವ ಚೀನಾ ಮೂಲದ ಹಲವು ನಕಲಿ ಆ್ಯಪ್‌ಗಳು ದೇಶದಲ್ಲಿ ಕಾರ್ಯಾಚರಿಸುತ್ತಿವೆ. ಅವುಗಳ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ನಕಲಿ ಲೋನ್ ಆ್ಯಪ್ ವಿರುದ್ಧ ಕ್ರಮ ಕೈಗೊಳ್ಳಲು ಹಣಕಾಸು ಸಚಿವಾಲಯದ ಜತೆಗೆ ವಿದೇಶಾಂಗ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹಿತ ಸಂಬಂಧಿತ ಎಲ್ಲ ಇಲಾಖೆ ಮತ್ತು ಸಚಿವಾಲಯಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

© Copyright 2022, All Rights Reserved Kannada One News