ತಗ್ಗಿದ ಎಫ್‌ಪಿಐ ಒಳಹರಿವು

ತಗ್ಗಿದ ಎಫ್‌ಪಿಐ ಒಳಹರಿವು

Updated : 26.09.2022

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ವಿದೇಶಿ ಬಂಡವಾಳ (ಎಫ್‌ಪಿಐ) ಒಳಹರಿವಿನ ವೇಗವು ಸೆಪ್ಟೆಂಬರ್‌ನಲ್ಲಿ ತಗ್ಗಿದೆ. ಸೆಪ್ಟೆಂಬರ್‌ 1ರಿಂದ 23ರವರೆಗಿನ ಅವಧಿಯಲ್ಲಿ ₹ 8,638 ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಬಂಡವಾಳ ಹೂಡಿಕೆದಾರರು ಖರೀದಿಸಿದ್ದಾರೆ.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿರುವುದರಿಂದ ಹೂಡಿಕೆ ಕಡಿಮೆ ಮಾಡಿದ್ದಾರೆ.

ಅಮೆರಿಕದಲ್ಲಿ ಡಾಲರ್‌ ಮೌಲ್ಯ ವೃದ್ಧಿ ಆಗುತ್ತಿರುವುದು ಮತ್ತು ಬಾಂಡ್‌ ಗಳಿಕೆ ಹೆಚ್ಚಾಗುತ್ತಿರುವುದೇ ವಿದೇಶಿ ಹೂಡಿಕೆದಾರರು ಭಾರತದ ಬಂಡವಾಳ ಮಾರುಕಟ್ಟೆಗಳಲ್ಲಿ ಷೇರುಗಳನ್ನು ಮಾರಾಟ ಮಾಡಲು ಕಾರಣ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ವಿದೇಶಿ ಹೂಡಿಕೆದಾರರು ಆಗಸ್ಟ್‌ನಲ್ಲಿ ₹ 51,200 ಕೋಟಿಯಷ್ಟು ದಾಖಲೆಯ ಹೂಡಿಕೆ ಮಾಡಿದ್ದರು.

© Copyright 2022, All Rights Reserved Kannada One News