ಡಿಜಿಟಲ್ ಪಾವತಿಯನ್ನು ಸಾರ್ವಜನಿಕರ ಒಳಿತಾಗಿ ನೋಡುತ್ತೇವೆ: ನಿರ್ಮಲಾ ಸೀತಾರಾಮನ್

ಡಿಜಿಟಲ್ ಪಾವತಿಯನ್ನು ಸಾರ್ವಜನಿಕರ ಒಳಿತಾಗಿ ನೋಡುತ್ತೇವೆ: ನಿರ್ಮಲಾ ಸೀತಾರಾಮನ್

Updated : 27.08.2022

ಹೊಸದಿಲ್ಲಿ: ಡಿಜಿಟಲ್ ಪಾವತಿಗಳ (Digital Payments)ಮೇಲೆ ಶುಲ್ಕ ವಿಧಿಸಲು ಇದು ಸರಿಯಾದ ಸಮಯವಲ್ಲ ಎಂದು ಕೇಂದ್ರ ಸರಕಾರದ ಅಭಿಪ್ರಾಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman)ಶುಕ್ರವಾರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೀತಾರಾಮನ್, "ನಾವು ಡಿಜಿಟಲ್ ಪಾವತಿಯನ್ನು ಸಾರ್ವಜನಿಕರ ಒಳಿತಾಗಿ ನೋಡುತ್ತೇವೆ. ಜನರು ಅದನ್ನು ಮುಕ್ತವಾಗಿ ಬಳಸಲು ಸಾಧ್ಯವಾಗುತ್ತದೆ.  ಇದರಿಂದ ಭಾರತೀಯ ಆರ್ಥಿಕತೆಯ ಡಿಜಿಟಲೀಕರಣವು ಆಕರ್ಷಕವಾಗುತ್ತದೆ. ಅಲ್ಲದೆ, ಡಿಜಿಟಲೀಕರಣದ ಮೂಲಕ ನಾವು ಪಾರದರ್ಶಕತೆಯ ಮಟ್ಟವನ್ನು ಸಾಧಿಸುತ್ತೇವೆ. ಇದು ತುಂಬಾ ಅಗತ್ಯವಿದೆ"ಎಂದರು.

"ಆದ್ದರಿಂದ, ಡಿಜಿಟಲ್ ಪಾವತಿಗಳ ಮೇಲೆ  ಶುಲ್ಕ ವಿಧಿಸಲು ಇದು ಸರಿಯಾದ ಸಮಯವಲ್ಲ ಎಂದು ನಾವು ಈಗಲೂ  ಭಾವಿಸುತ್ತೇವೆ. ಮುಕ್ತ ಡಿಜಿಟಲ್ ವಹಿವಾಟುಗಳು, ಡಿಜಿಟಲೀಕರಣ ಹಾಗೂ ಸುಲಭವಾಗಿ ಬಳಕೆಯನ್ನು ಸಕ್ರಿಯಗೊಳಿಸುವ ಪ್ಲಾಟ್‌ಫಾರ್ಮ್‌ಗಳತ್ತ ನಾವು ಹೆಚ್ಚು ಹೆಚ್ಚು ಉತ್ತೇಜಿಸುತ್ತಿದ್ದೇವೆ’’ಎಂದು ಸಚಿವರು ಹೇಳಿದರು.


© Copyright 2022, All Rights Reserved Kannada One News