ಅಡುಗೆ ಎಣ್ಣೆ ದರ 12 ರೂ. ಇಳಿಕೆಗೆ ನಿರ್ಧಾರ!

ಅಡುಗೆ ಎಣ್ಣೆ ದರ 12 ರೂ. ಇಳಿಕೆಗೆ ನಿರ್ಧಾರ!

Updated : 05.08.2022

ನವದೆಹಲಿ: ಜಾಗತಿಕ ಬೆಲೆ ಇಳಿಕೆಯ ಲಾಭವನ್ನು ಸಾಮಾನ್ಯ ಜನರಿಗೂ ವರ್ಗಾಯಿಸಲು ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ಸಭೆ ನಡೆಸಿ, ಅಡುಗೆ ಎಣ್ಣೆಯ ಬೆಲೆಯನ್ನು 10-12 ರೂ. ವರೆಗೆ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಏಕೆಂದರೆ ಅಡುಗೆ ಎಣ್ಣೆ ತಯಾರಕ ಕಂಪನಿಗಳು ಜಾಗತಿಕ ಬೆಲೆಗಳೊಂದಿಗೆ ಸರಿದೂಗಿಸಿ, ಸಾಮಾನ್ಯ ಜನರು ಬಳಸುವ ಅಡುಗೆ ಎಣ್ಣೆಯ ದರವನ್ನು ಕಡಿತಗೊಳಿಸಲು ಒಪ್ಪಿಕೊಂಡಿವೆ. 

ಭಾರತ ತನ್ನ ಎರಡನೇ ಮೂರು ಭಾಗದಷ್ಟು ಅಡುಗೆ ಎಣ್ಣೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಮೂಲಕ ಭಾರತ ಅಡುಗೆ ಎಣ್ಣೆಯ ಪ್ರಮುಖ ಆಮದುದಾರನಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಇಂಡೋನೇಷ್ಯಾ ತಾಳೆ ಎಣ್ಣೆಯ ರಫ್ತನ್ನು ನಿಷೇಧಿಸಿದ್ದು, ಭಾರೀ ಬೆಲೆ ಏರಿಕೆಗೆ ಕಾರಣವಾಗಿತ್ತು.


© Copyright 2022, All Rights Reserved Kannada One News