ದೇಶದಲ್ಲಿ 17 ಸಾವಿರ ಕೋವಿಡ್ ಪ್ರಕರಣ ಪತ್ತೆ: ನಾಲ್ಕು ತಿಂಗಳಲ್ಲೇ ಗರಿಷ್ಠ

ದೇಶದಲ್ಲಿ 17 ಸಾವಿರ ಕೋವಿಡ್ ಪ್ರಕರಣ ಪತ್ತೆ: ನಾಲ್ಕು ತಿಂಗಳಲ್ಲೇ ಗರಿಷ್ಠ

Updated : 24.06.2022

ಹೊಸದಿಲ್ಲಿ: ದೇಶದಲ್ಲಿ ಗುರುವಾರ 17 ಸಾವಿರಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು 124 ದಿನಗಳಲ್ಲೇ ಗರಿಷ್ಠ ಸಂಖ್ಯೆಯಾಗಿದೆ. ಕೋವಿಡ್-19 ಟೆಸ್ಟಿಂಗ್ ಹೆಚ್ಚಿರುವುದು ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದು, ದೇಶಾದ್ಯಂತ ಗುರುವಾರ 17,200 ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರವರಿ 4ರ ಬಳಿಕ ಗರಿಷ್ಠ ಅಂದರೆ 1934 ಪ್ರಕರಣಗಳು ವರದಿಯಾಗಿದ್ದು, ಒಂಬತ್ತು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 5218 ಪ್ರಕರಣಗಳು ವರದಿಯಾಗಿದ್ದು, ಇದು ಕೂಡಾ ಫೆಬ್ರವರಿ 11ರ ಬಳಿಕ ಒಂದೇ ದಿನ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ.

ದೇಶದಲ್ಲಿ ಮಂಗಳವಾರ ಕಡಿಮೆ ಸಂಖ್ಯೆಯ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ ಬುಧವಾರ ಕಡಿಮೆ ಪ್ರಕರಣಗಳು ದಾಖಲಾಗಿದ್ದವು. ಇದರಿಂದಾಗಿ ದೇಶದಲ್ಲಿ ಪ್ರಕರಣಗಳ ಧನಾತ್ಮಕತೆ ದರ ಶೇಕಡ 4.3ಕ್ಕೆ ಹೆಚ್ಚಿತ್ತು. ಬುಧವಾರ 13316 ಪ್ರಕರಣಗಳು ಬೆಳಕಿಗೆ ಬಂದಿದ್ದವು ಎಂದು timesofindia.com ವರದಿ ಮಾಡಿದೆ.

© Copyright 2022, All Rights Reserved Kannada One News