Flash News:
ತಮ್ಮ ತಂಗಿ ಜೊತೆ ಸ್ನೇಹದಲ್ಲಿದ್ದ ಯುವಕನ ಹತ್ಯೆ: ಆರೋಪಿಗಳ ಬಂಧನ

ತಮ್ಮ ತಂಗಿ ಜೊತೆ ಸ್ನೇಹದಲ್ಲಿದ್ದ ಯುವಕನ ಹತ್ಯೆ: ಆರೋಪಿಗಳ ಬಂಧನ

Updated : 29.09.2022

ತಮ್ಮ ಸಹೋದರಿಯೊಂದಿಗೆ ಸ್ನೇಹದಲ್ಲಿದ್ದಾನೆ ಎಂದು ಆರೋಪಿಸಿ 19 ವರ್ಷದ ಯುವಕನನ್ನು ಆತನ ಇಬ್ಬರು ಸ್ನೇಹಿತರು ಸೇರಿ ಹತ್ಯೆ ನಡೆಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ ಎಂದು ದಿ ಸಿಯಾಸತ್‌ ಡೈಲಿ ವರದಿ ಮಾಡಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯು ರಾಜ್ಯದ ರೂಟು ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತ ಯುವಕನನ್ನು ಶಹಬಾಜ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಓಂಪ್ರಕಾಶ್ ಮಹೊತೊ (25) ಮತ್ತು ಸುಶಾಂತ್ ನಾಯಕ್ (25) ಎಂದು ಗುರುತಿಸಲಾಗಿದೆ. ಕೊಲೆಗೂ ಮೊದಲು ಶಹಬಾಜ್‌ ಆರೋಪಿಗಳೊಂದಿಗೆ ಹೊರಗೆ ಹೋಗಿದ್ದರು ಎಂದು ವರದಿಯಾಗಿದೆ. ಅಲ್ಲಿ ಆರೋಪಿಗಳಿಬ್ಬರೂ ಶಹಬಾಜ್ ಅವರ ತಲೆಗೆ ಹೊಡೆದಿದ್ದು, ಪರಿಣಾಮವಾಗಿ ಸ್ಥಳದಲ್ಲೆ ನಿಧನರಾಗಿದ್ದಾರೆ.

ಕೊಲೆಯ ಮರುದಿನ ಶಹಬಾಜ್‌‌ ಅವರ ತಂದೆ ಮಂಡರ್ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಪರಾಧವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಓಂಪ್ರಕಾಶ್ ಮತ್ತು ಸುಶಾಂತ್‌ ಅವರನ್ನು ಸೆ.27ರಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ), 34, 120 (ಬಿ) ಅಡಿಯಲ್ಲಿಎಫ್‌ಐಆರ್ ದಾಖಲಿಸಿದ್ದಾರೆ.

ಶಹಬಾಜ್ ಅವರು ತನ್ನ ಸಹೋದರಿ ಶಿಖಾಳೊಂದಿಗೆ ಸ್ನೇಹ ಬೆಳೆಸಿದ್ದು ಸುಶಾಂತ್‌‌ ನಾಯಕ್‌ಗೆ ಒಪ್ಪಿಗೆ ಇರಲಿಲ್ಲ ಎಂದು ಪ್ರಕರಣದ ತನಿಖಾಧಿಕಾರಿ ಸಬ್-ಇನ್ಸ್‌ಪೆಕ್ಟರ್ ಸನ್ನಿ ಡೇವಿಸ್ ಬಾರಾ ಅವರು ಹೇಳಿದ್ದಾರೆ ಎಂದು ಸಿಯಾಸತ್‌ ಡೈಲಿ ಹೇಳಿದ್ದಾರೆ.

© Copyright 2022, All Rights Reserved Kannada One News