ಪ್ರೀತಿಯೆಂಬುದು ನನ್ನ ಬಹುದೊಡ್ಡ ದೌರ್ಬಲ್ಯ: ಮೌನೇಶ್ ನವಲಹಳ್ಳಿ ಅವರ ಕವಿತೆ

ಪ್ರೀತಿಯೆಂಬುದು ನನ್ನ ಬಹುದೊಡ್ಡ ದೌರ್ಬಲ್ಯ: ಮೌನೇಶ್ ನವಲಹಳ್ಳಿ ಅವರ ಕವಿತೆ

Updated : 14.08.2022


ನಾನೇನು ನೆಟ್ಟಗಿರುವ ಮನುಷ್ಯನಲ್ಲಾ
ಆದರೆ ಬಳ್ಳಿಯಂತೆ ನುಲಿಯುವುದಿಲ್ಲಾ
ಬಂದಂತೆ ನೆಡೆಯುತ್ತೇನೆ
ತ್ರಾಣಕ್ಕೆ ನಿತ್ರಾಣಕ್ಕೆ  ಒಳಗಾಗುತ್ತೇನೆ

ಇರುವೆಯಂತವ ನನ್ನ
ಪಾಡಿಗೆ ಹಾಡುತ್ತಾ ಗೂಡಿಗೋಡುವ ಸಾಲಿನಲ್ಲಿರುವವ
ಸಾಯುವ ಬುಗಿಲಿಗೆ ಕಚ್ಚಬಹುದು
ಮಾರಣಾಂತಿಕವಂತೂ ಅಲ್ಲವೇ ಅಲ್ಲ


ಬರುವೆ ನಾನು
ಪ್ರೀತಿಯೆಂಬುದು ನನ್ನ ಬಹುದೊಡ್ಡ ದೌರ್ಬಲ್ಯ
ಕರೆದೊಡನೆ ತಡಮಾಡದೆ  ಓಗೊಡುವೆನು
ಹೃದಯದ ಪಾತ್ರೆಯಿಡಿದು ಭಿಕ್ಷೆಗಲ್ಲಾ

ನಿಲ್ಲುವೆನು ನಿನ್ನಲ್ಲೆ
ಅಲುಗಾಡಲಾದೀತೆ ಒಂದೇ ಪ್ರಾಣವಿದೆ
ಸಂಚರಿಸುವೆ ನಿನ್ನೊಳ ಹೊರ  ಪರಂತು
ಮನಸ್ಸಿಗೆ ಮೂಗಿಲ್ಲಾ ಸೆಳೆವಿನ್ನೆಂತು

ಅರಿದೆನು ಉರಿದಂತೆಲ್ಲಾ
ಕಿಡಿಯನ್ನು ಕಾಳ್ಗಿಚ್ಚಿಗೂ ಕಣ್ಬೆಳಕಿನ ಬಳೆಕೆಗೂ
ನಿಂದನೆ ವಂದನೆಗಳನು  ನೆದರಿಗೆ ಇಳಿದಗೆದೆಸೆದು
ಇಳೆಯ ಮರದಂತೆ ಋತುಮಾನದಂತೆ

ಇನ್ನೇನಿದೆ ನಿಲ್ದಾಣ
ಮೆಲ್ಲಗೆ  ತಡಕಾಡುತ್ತಾ  ಬಾಗಿಲಿಗೆ ನಿಂತು
ನಿರ್ವಾಹಕನೂ ಚಾಲಕನ  ತಡೆಗೆ  ಕೈಚೀಲವಿಡಿದು ಥಟ್ಟನೆ
ಇಳಿಯುವುದೊಂದೆ ಬಾಕಿ ನನ್ನೂರು ಬಂದೊಡನೆ.

-ಮೌನೇಶ್ ನವಲಹಳ್ಳಿ

© Copyright 2022, All Rights Reserved Kannada One News