ದೇಶದ ಮೂರು ಕಡೆ ಮಂಕಿಪಾಕ್ಸ್ ಕ್ಲಸ್ಟರ್: ವೈದ್ಯಕೀಯ ಸಂಶೋಧನಾ ಮಂಡಳಿ

ದೇಶದ ಮೂರು ಕಡೆ ಮಂಕಿಪಾಕ್ಸ್ ಕ್ಲಸ್ಟರ್: ವೈದ್ಯಕೀಯ ಸಂಶೋಧನಾ ಮಂಡಳಿ

Updated : 18.09.2022

ಹೊಸದಿಲ್ಲಿ: ಕೇರಳ ಹಾಗೂ ದೆಹಲಿಯಲ್ಲಿ ಮೂರು ಮಂಕಿಪಾಕ್ಸ್ (monkeypox) ಕ್ಲಸ್ಟರ್‌ ಗಳು ಪತ್ತೆಯಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

ಮೊದಲ ಕ್ಲಸ್ಟರ್ ಕೇರಳದಲ್ಲಿ (ಎನ್5) ಹಾಗೂ ಎರಡನೇ ಕ್ಲಸ್ಟರ್ ದೆಹಲಿಯಲ್ಲಿ (ಎನ್2) ಪತ್ತೆಯಾಗಿದೆ. ಇವೆರಡೂ ಯುಎಸ್‍ಎ-2022 ಓಎನ್6740511 ವೈರಸ್ ಜತೆ ಹಾಗೂ ದೆಹಲಿಯ ಕ್ಲಸ್ಟರ್ ಯುಎಸ್‍ಎ-2022 ಓಎನ್6754381 ಜತೆ ಸಂಬಂಧ ಹೊಂದಿದೆ. ಮೂರನೇ ಕ್ಲಸ್ಟರ್ ಬ್ರಿಟನ್, ಅಮೆರಿಕ ಮತ್ತು ಥಾಯ್ಲೆಂಡ್ ಪ್ರಬೇಧಗಳನ್ನು ಹೊಂದಿದೆ ಎಂದು ಐಸಿಎಂಆರ್ (ICMR) ಅಧ್ಯಯನ ಹೇಳಿದೆ.

ಭಾರತದಲ್ಲಿ ಪತ್ತೆಯಾದ ಎಲ್ಲ ಮಂಕಿಪಾಕ್ಸ್ ವೈರಸ್ (ಎಂಪಿಎಕ್ಸ್‌ವಿ) ಸೀಕ್ವೆನ್ಸ್‌ಗಳು ಕ್ಲೇಡ್ ಎಲ್‍ಎಲ್‍ಬಿಯ ಎ2 ಲೈನೇಜ್‍ನ ಜೆನೋಮ್‍ಗಳನ್ನು ಶೇಕಡ 90% ದಿಂದ 99% ರಷ್ಟು ಹೊಂದಿವೆ ಎಂದು ಅಧ್ಯಯನ ವರದಿ ಸ್ಪಷ್ಟಪಡಿಸಿದೆ.

2022ರ ಜುಲೈ- ಆಗಸ್ಟ್‌ ನಲ್ಲಿ 18 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 96 ಮಂದಿ ಶಂಕಿತ ರೋಗಿಗಳ ಓರೊಪೈಂಜಿಯಲ್ ಸ್ವ್ಯಾಬ್ (ಓಪಿಎಸ್), ನಾಸೊಪೈಂಜಿಯಲ್ ಸ್ವ್ಯಾಬ್ (ಎನ್‍ಪಿಎಸ್), ಲೆಸಿಯಾನ್ ಕ್ರಸ್ಟ್ ಹಾಗೂ ಲೆಸಿಯಾನ್ ಫ್ಲೂಯಿಡ್‍ಗಳನ್ನು ಪುಣೆಯ ಐಸಿಎಂಆರ್-ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು.

ವಿದೇಶಿ ಪ್ರಯಾಣ ಇತಿಹಾಸ ಇಲ್ಲದ ದೆಹಲಿಯ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರಲ್ಲಿ ಮಂಕಿಪಾಕ್ಸ್ ದೃಢಪಟ್ಟಿದ್ದು, ಯುಎಇಯಿಂದ ಆಗಮಿಸಿದ್ದ ಕೇರಳದ ಐದು ಮಂದಿಯಲ್ಲಿ ಕೂಡಾ ಮಂಕಿಪಾಕ್ಸ್ ದೃಢಪಟ್ಟಿದೆ ಎಂದು timesofindia.com ವರದಿ ಮಾಡಿದೆ. 

© Copyright 2022, All Rights Reserved Kannada One News