ಮತದಾರರ ಮಾಹಿತಿಗೆ ಕನ್ನ ಹಾಕಿರುವುದು ನಾವಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ

ಮತದಾರರ ಮಾಹಿತಿಗೆ ಕನ್ನ ಹಾಕಿರುವುದು ನಾವಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ

Updated : 19.11.2022

ಬೆಂಗಳೂರು: ಮತದಾರರ ಮಾಹಿತಿಗೆ ಕನ್ನ ಹಾಕಿರುವುದು ನಾವಲ್ಲ, ಮೈತ್ರಿ ಸರ್ಕಾರದ ತಪ್ಪನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ಸಚಿವ ವಿ‌.ಸೋಮಣ್ಣ ಹೇಳಿದ್ದಾರೆ.

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದು, ಶೀಘ್ರವೇ ತಪ್ಪಿತಸ್ಥರು ಯಾರು ಎಂಬುದು ತಿಳಿಯಲಿದೆ. ಎಲ್ಲವನ್ನೂ ನಂಬಲು ಜನರು ದಡ್ಡರಲ್ಲ ಎಂದು ಸಚಿವ ವಿ‌.ಸೋಮಣ್ಣ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

© Copyright 2022, All Rights Reserved Kannada One News