ನವದೆಹಲಿ: ಮಾಸ್ಕ್‌ ಕಡ್ಡಾಯ ಮುಂದುವರಿಕೆ

ನವದೆಹಲಿ: ಮಾಸ್ಕ್‌ ಕಡ್ಡಾಯ ಮುಂದುವರಿಕೆ

Updated : 19.10.2022

ನವದೆಹಲಿ: ಒಮೈಕ್ರಾನ್‌ನ ಕೋವಿಡ್ ಹೊಸ ರೂಪಾಂತರ ತಳಿಯು ದೇಶದ ವಿವಿಧೆಡೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಕೋವಿಡ್‌ ನಿರ್ಬಂಧ ಕ್ರಮಗಳನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು ಕೋವಿಡ್‌ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು ಎಂದು ಆರೋಗ್ಯ ಸಚಿವಾಲಯದ ಹೇಳಿಕೆಯು ತಿಳಿಸಿದೆ.

ಹೊಸ ರೂಪಾಂತರ ತಳಿಯಿಂದಾಗಿ ವಿವಿಧ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿದೆ. ದೇಶಕ್ಕೆ ಜನರ ಪ್ರವೇಶ ಹಂತದಲ್ಲಿ ಪರೀಕ್ಷೆ ನಡೆಸುವುದು, ತಪಾಸಣೆಯನ್ನು ಚುರುಕುಗೊಳಿಸುವುದು ಸೇರಿದಂತೆ ನಿರ್ಬಂಧ ಕ್ರಮಗಳನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

© Copyright 2022, All Rights Reserved Kannada One News