ಮಂತ್ರ ಮಾಂಗಲ್ಯ: ಹಳ್ಳಿರಂಗ ವಿದ್ಯಾರ್ಥಿಗಳ ಓದಿಗೆ ಧನ ಸಹಾಯ ನೀಡಿದ ನವ ದಂಪತಿ

ಮಂತ್ರ ಮಾಂಗಲ್ಯ: ಹಳ್ಳಿರಂಗ ವಿದ್ಯಾರ್ಥಿಗಳ ಓದಿಗೆ ಧನ ಸಹಾಯ ನೀಡಿದ ನವ ದಂಪತಿ

Updated : 22.10.2022

ತುಮಕೂರಿನ ರವೀಂದ್ರ ರೆಡ್ಡಿ ಹಾಗೂ ಸರ್ವ ಮಂಗಳಾರವರು ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದೊಂದಿಗೆ  ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದು, ಈ ವೇಳೆ ತಮಗೆ ಬಂದ ರೂ.13000/ ಮುಯ್ಯಿಯನ್ನು  ಈ ವರ್ಷದ ಪ್ರಜಾವಾಣಿ ಸಾಧಕ ಪ್ರಶಸ್ತಿ ಪಡೆದ,  ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ಲ ಗ್ರಾಮದ ಹಳ್ಳಿರಂಗ ಮಕ್ಕಳ ಓದಿಗೆ ನೀಡುವುದರ ಮೂಲಕ ಇಂದಿನ ಯುವ ಪೀಳಿಗೆಗೆ ಹೊಸ ಮಾದರಿಯೊಂದನ್ನು ಕಟ್ಟಿಕೊಟ್ಟಿದ್ದಾರೆ.