ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

Related Articles

ಟಿಪ್ಪು ಪ್ರತಿಮೆ ನೂರಡಿ ಸಾಕಾ...?: ಎಡಿಟರ್ ಸ್ಪೆಷಲ್

ತನ್ನ ಸಮಯ ಪ್ರಜ್ಞೆಯಿಂದ ತಂದೆಯ ಜೀವ ಉಳಿಸಿದ್ದ ಬಾಲಕಿಗೆ 'ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ'

ಇಂದು ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆ ದಿನ

ಲಾಲು ಪ್ರಸಾದ್ ಯಾದವ್ ಗೆ ಮೂತ್ರಪಿಂಡ ದಾನ ಮಾಡಲು ಮುಂದಾದ ಮಗಳು

ಕಾವಿಯೊಳಗೊಬ್ಬ ಕಾಮಪಿಶಾಚಿ…!: ಎಡಿಟರ್‌ ಸ್ಪೆಷಲ್

ಮಂತ್ರ ಮಾಂಗಲ್ಯ: ಹಳ್ಳಿರಂಗ ವಿದ್ಯಾರ್ಥಿಗಳ ಓದಿಗೆ ಧನ ಸಹಾಯ ನೀಡಿದ ನವ ದಂಪತಿ

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

Updated : 29.09.2022

ಎಐಸಿಸಿ ಸಾರಥಿ ಪಟ್ಟಕ್ಕೇರಲು ತುದಿಗಾಲಲ್ಲಿ ನಿಂತಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧ್ಯಕ್ಷೀಯ ರೇಸ್ ನಿಂದ ಹೊರಬಿದ್ದಿದ್ದಾರೆ. ಆದ್ರೂ ರಾಜಸ್ಥಾನದ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಈ ನಡುವೆ ಅಧ್ಯಕ್ಷೀಯ ರೇಸ್‌ನಲ್ಲಿ ಮತ್ತಷ್ಟು ಘಟಾನುಘಟಿಗಳ ಪ್ರವೇಶವಾಗಿದೆ. ಎಐಸಿಸಿ ಅಧ್ಯಕ್ಷ ಚುನಾವಣೆ ಹತ್ತಿರವಾಗ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬೇಗುದಿ ಧಗಧಗಿಸಿತ್ತು. ಶಶಿ ತರೂರ್ ನಾಮಪತ್ರ ಸಲ್ಲಿಸಿದ ಬಳಿಕ ಈ ಗುದ್ದಾಟ ಮತ್ತೊಂದು ಲೆವಲ್‌ಗೆ ಹೋಗಿ ಮುಟ್ಟುತ್ತಿದೆ. ಅದರಲ್ಲೂ ಅಧ್ಯಕ್ಷೀಯ ಚುಣಾವಣೆಗಾಗಿ ನಾನೂ ರೆಡಿ ಎಂದು ಮುಂದೆ ಬಂದಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತೆ ಉಲ್ಟಾ ಹೊಡೆದಿದ್ದಾರೆ. ಸಚಿನ್ ಪೈಲೆಟ್‌ಗೆ ಪಟ್ಟ ಕಟ್ಟುತ್ತಾರೆಂಬ ಆತಂಕದಲ್ಲಿದ್ದ ಗೆಹ್ಲೋಟ್ ಅಧ್ಯಕ್ಷೀಯ ರೇಸ್‌ನಿಂದಲೂ ಹೊರಬಿದ್ದಿದ್ದಾರೆ.

ಎಐಸಿಸಿ ಅಧ್ಯಕ್ಷ ಪಟ್ಟಕ್ಕೇರಲು ಅನೇಕ ಹಿರಿಯ ನಾಯಕರು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ.. ಶಶಿ ತರೂರ್ ನಾಮ ಪತ್ರ ಸಲ್ಲಿಸಿ ಆಗಿದೆ. ಆದ್ರೆ ಅಶೋಕ್ ಗೆಹ್ಲೋಟ್ ಹಿಂದೆ ಸರಿಯುತ್ತಿದ್ದಂತೆ ಅಧ್ಯಕ್ಷೀಯ ರೇಸ್‌ನಲ್ಲಿ ಕಾಂಗ್ರೆಸ್‌ನ ಅನೇಕ ಹಿರಿಯರ ಹೆಸರು ಕೇಳಿ ಬರ್ತಿದೆ. ಎಐಸಿಸಿ ಅಧ್ಯಕ್ಷ ಗದ್ದುಗೆ ಹಿಡಿಯಲು ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಮುಂದೆ ಬಂದಿದ್ದಾರೆ. ಮತ್ತೊಂದಡೆ ಕರ್ನಾಟಕ ಮೂಲದ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರೂ ಕೂಡ ಮುನ್ನೆಲೆಗೆ ಬಂದಿದೆ. ಸಾಕಷ್ಟು ನಾಯಕರು, ಹಾಗೂ ಕಾಂಗ್ರೆಸ್ ಹಿತೈಷಿಗಳು ಖರ್ಗೆ ಅವರಿಗೆ ಅಧ್ಯಕ್ಷೀಯ ಸ್ಥಾನ ನೀಡುವಂತೆ ಸಲಹೆ ನೀಡುತ್ತಿದ್ದಾರೆ.  

ಹೌದು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಲ್ಬಣಗೊಂಡ ಬಳಿಕ, ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಮುಂಚೂಣಿಗೆ ಬಂದಿದೆ. ಈ ವಿಚಾರವನ್ನು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ. ಅಲ್ಲದೇ, ಈ ನಡುವೆ ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್, ಸೋನಿಯಾ ಗಾಂಧಿ ಭೇಟಿ ಮಾಡಿದ್ದಾರೆ. ಸದ್ಯ ಅಧ್ಯಕ್ಷೀಯ ಪಟ್ಟಕ್ಕಾಗಿ ರಾಜಸ್ಥಾನದಲ್ಲಿ ಸೃಷ್ಟಿಯಾಗಿರೋ ರಾಜಕೀಯ ಹೈಡ್ರಾಮಾಗೆ ಸೋನಿಯಾ ಗಾಂಧಿ ಅಲ್ಪ ವಿರಾಮ ಇಟ್ಟಿದ್ದಾರೆ. ಮತ್ತೊಂದಡೆ ಗೆಹ್ಲೋಟ್ ಪರ ಬ್ಯಾಟಿಂಗ್ ಮಾಡಿದ್ದ ಮೂವರು ಶಾಸರಿಗೆ ಶೋಕಾಸ್ ನೋಟಿಸ್ ಕೂಡ ನೀಡಿದ್ದಾರೆ.

ಒಟ್ಟಾರೆ,  ಅಧ್ಯಕ್ಷೀಯ ಚುನಾವಣೆ, ಕಾಂಗ್ರೆಸ್ನ್ನು ಮತ್ತಷ್ಟು ಇಬ್ಬಾಗ ಮಾಡ್ತಿರೋದು ನೋಡಿದ್ರೆ ಮನೆಯೊಂದು ಮೂರು ಬಾಗಿಲು ಎಂಬ ಮಾತು ನೆನಪಿಗೆ ಬರ್ತಿದೆ. ಅತ್ತ ಅಧ್ಯಕ್ಷರಾಗುವ ಅವಕಾಶ ಕಳೆದುಕೊಂಡಿರುವ ಗೆಹ್ಲೋಟ್‌, ಸಿಎಂ ಕುರ್ಚಿಯನ್ನಾದರೂ ಉಳಿಸಿಕೊಳ್ಳಲಿದ್ದರಾ ಅನ್ನೋದನ್ನ ಕಾದು ನೋಡಬೇಕಿದೆ.
© Copyright 2022, All Rights Reserved Kannada One News