ಮಲಯಾಳಂ ನಟ ಶರತ್ ಚಂದ್ರನ್ ಇನ್ನಿಲ್ಲ

ಮಲಯಾಳಂ ನಟ ಶರತ್ ಚಂದ್ರನ್ ಇನ್ನಿಲ್ಲ

Updated : 30.07.2022

 ‘ಅಂಗಮಾಲಿ ಡೈರೀಸ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದಿದ್ದ  ಶರತ್ ಚಂದ್ರನ್  (37) ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಅಂಗಮಾಲಿ ಡೈರೀಸ್’, 2017ರಲ್ಲಿ ತೆರೆಗೆ ಬಂದಿದ್ದ ‘ಒರು ಮೆಕ್ಸಿಕನ್ ಅಪರಾಥ’, 2017ರಲ್ಲಿ ರಿಲೀಸ್ ಆಗಿದ್ದ ‘ಸಿಐಎ: ಕಾಮ್ರೇಡ್ ಇನ್ ಅಮೇರಿಕಾ’, 2021ರಲ್ಲಿ ಬಿಡುಗಡೆಯಾಗಿದ್ದ ‘ಒರು ತಾತ್ವಿಕ ಅವಲೋಕನಮ್’ ಮುಂತಾದ ಚಿತ್ರಗಳಲ್ಲಿ ಶರತ್ ಚಂದ್ರನ್ ಅಭಿನಯಿಸಿದ್ದರು.


‘ಅಂಗಮಾಲಿ ಡೈರೀಸ್’ ಚಿತ್ರದಲ್ಲಿ ಶರತ್ ಚಂದ್ರನ್ ಜೊತೆಗೆ ಆಂಥೋನಿ ವರ್ಗೀಸ್ ಕೂಡ ಅಭಿನಯಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶರತ್ ಚಂದ್ರನ್ ಅವರ ಫೋಟೋವನ್ನು ಹಂಚಿಕೊಂಡು ಆಂಥೋನಿ ವರ್ಗೀಸ್ ಸಂತಾಪ ಸೂಚಿಸಿದ್ದಾರೆ. ತಾರೆಯರು ಹಾಗೂ ಅಭಿಮಾನಿಗಳು ಶರತ್ ಚಂದ್ರನ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

© Copyright 2022, All Rights Reserved Kannada One News