ಸೆಪ್ಟೆಂಬರ್ 27 ರಿಂದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ವಿಚಾರಣೆ ನೇರ ಪ್ರಸಾರ!

Related Articles

ಭಾರತದ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ ಅಭ್ಯುದಯ್ ಮಿಶ್ರಾ ರಸ್ತೆ ಅಪಘಾತದಲ್ಲಿ ಮೃತ್ಯು

ಪಿಎಸ್ಐ ಹಗರಣ: ಪ್ರಮುಖ ಆರೋಪಿ ಹಾಸ್ಟೆಲ್ ವಾರ್ಡನ್ ಬಂಧನ

ತಮ್ಮ ತಂಗಿ ಜೊತೆ ಸ್ನೇಹದಲ್ಲಿದ್ದ ಯುವಕನ ಹತ್ಯೆ: ಆರೋಪಿಗಳ ಬಂಧನ

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 75 ಮಂದಿ ಪ್ರಯಾಣಿಸುತ್ತಿದ್ದ ದೋಣಿ: ಓರ್ವ ಅಧಿಕಾರಿ ಸೇರಿ ಹಲವರು ನಾಪತ್ತೆ

ಪ್ರವಾದಿ ಮುಹಮ್ಮದ್ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ: ಮುಖ್ಯಶಿಕ್ಷಕ ಅಮಾನತು

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

ಕೊಡಗು: ಸಾಕಾನೆ ದಾಳಿಗೆ ಕಾರ್ಮಿಕ ಬಲಿ

ಚಾಮರಾಜನಗರ: ‘ಭಾರತ್ ಜೋಡೋ’ ಫ್ಲೆಕ್ಸ್ ಹರಿದ ದುಷ್ಕರ್ಮಿಗಳು

ಕಾನೂನುಬದ್ಧ ಗರ್ಭಪಾತಕ್ಕೆ ಎಲ್ಲ ಮಹಿಳೆಯರು ಅರ್ಹ : ಸುಪ್ರೀಂಕೋರ್ಟ್

ಮಳಲಿ‌ ಮಸೀದಿ ವಿವಾದ: ಪ್ರಕರಣದ ತೀರ್ಪು ಅ.17 ಕ್ಕೆ ಮುಂದೂಡಿಕೆ

ಸೆಪ್ಟೆಂಬರ್ 27 ರಿಂದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ವಿಚಾರಣೆ ನೇರ ಪ್ರಸಾರ!

Updated : 21.09.2022

ನವದೆಹಲಿ: ಮುಂದಿನ ವಾರದಿಂದ ಸುಪ್ರೀಂ ಕೋರ್ಟ್‌ನಲ್ಲಿನ ಎಲ್ಲಾ ಸಾಂವಿಧಾನಿಕ ಪೀಠದ ವಿಚಾರಣೆಗಳನ್ನು ನೇರಪ್ರಸಾರ ಮಾಡಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.

ಮಂಗಳವಾರ ನಡೆದ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರ ಸಭೆಯಲ್ಲಿ, ಸೆಪ್ಟೆಂಬರ್ 27ರಿಂದ ಸಂವಿಧಾನ ಪೀಠದ ಪ್ರಕರಣಗಳ ನೇರ ಪ್ರಸಾರವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಮಂಗಳವಾರ ಸಂಜೆ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಯುಯು ಲಲಿತ್ ಅವರು ಕರೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 

ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ನೇರಪ್ರಸಾರ ವೀಕ್ಷಿಸಲು ಶೀಘ್ರದಲ್ಲೇ ಸಾಧ್ಯವಾಗಲಿದೆ. ಸಂವಿಧಾನ ಪೀಠದಲ್ಲಿ ನಡೆಯುತ್ತಿರುವ ಪ್ರಕರಣಗಳೊಂದಿಗೆ ನೇರ ಪ್ರಸಾರ ಪ್ರಾರಂಭವಾಗುತ್ತದೆ. ನಂತರ ಇತರ ಪ್ರಕರಣಗಳಿಗೂ ಆರಂಭಿಸಲಾಗುವುದು ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಅಲ್ಲದೇ 2018ರಲ್ಲಿ ಪ್ರಕರಣವೊಂದರ ವಿಚಾರಣೆಯ ನೇರ ಪ್ರಸಾರವನ್ನು ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ನಂತರ ನ್ಯಾಯಾಲಯದ ನೋಂದಣಿ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಲು ಕೇಳಲಾಗಿತ್ತು. ಕೊರೋನಾ ಸಮಯದಲ್ಲಿ ಸುಪ್ರೀಂ ಕೋರ್ಟ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯನ್ನು ಪ್ರಾರಂಭಿಸಿತು. ಆದರೆ ಅದನ್ನು ಸಾಮಾನ್ಯ ಜನರಿಗೆ ನೇರ ಪ್ರಸಾರ ಮಾಡಲಿಲ್ಲ. ಇದೀಗ ನ್ಯಾಯಾಲಯದ ಆದೇಶದ 4 ವರ್ಷಗಳ ನಂತರ ಕಾಲ ಕೂಡಿಬಂದಿದೆ.

ಆರಂಭದಲ್ಲಿ ಈ ಪ್ರಸಾರವನ್ನು YouTube ನಲ್ಲಿ ಮಾಡಲಾಗುತ್ತದೆ. ಬಳಿಕ ಸುಪ್ರೀಂ ಕೋರ್ಟ್ ಕೂಡ ಇದಕ್ಕಾಗಿ ತನ್ನ ವೆಬ್ ಸೇವೆ ಆರಂಭಿಸಲಿದೆ. ಇದಕ್ಕೂ ಮೊದಲು ಆಗಸ್ಟ್ 26ರಂದು, ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಅವರಿಗೆ ಬೀಳ್ಕೊಡುವ ವಿಧ್ಯುಕ್ತ ಪೀಠದ ಕಲಾಪಗಳನ್ನು ನೇರ ಪ್ರಸಾರ ಮಾಡಿತ್ತು. ಈಗ ಪ್ರಾಯೋಗಿಕ ಆಧಾರದ ಮೇಲೆ ಸಂವಿಧಾನ ಪೀಠದ ವಿಚಾರಣೆಯ ನೇರ ಪ್ರಸಾರವಿದೆ. ನಂತರ ಅದನ್ನು ಇತರ ಪ್ರಕರಣಗಳಿಗೂ ವಿಸ್ತರಿಸಬಹುದು.

ಪ್ರಸ್ತುತ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು ಸಾಮಾನ್ಯ ವರ್ಗದಿಂದ ಬಡವರಿಗೆ 10 ಪ್ರತಿಶತ ಮೀಸಲಾತಿ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಇದಾದ ಬಳಿಕ ಈ ಪೀಠವು ಆಂಧ್ರಪ್ರದೇಶದಲ್ಲಿ ಹಿಂದುಳಿದ ವರ್ಗಗಳೆಂದು ಘೋಷಿಸಿ ಇಡೀ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಲಿದೆ.

© Copyright 2022, All Rights Reserved Kannada One News