ಇಂದು ದೀನ ದಲಿತೋದ್ಧಾರಕ ಮಹಾತ್ಮ ಕುದ್ಮುಲ್ ರಂಗರಾವ್ ಅವರ ಜನ್ಮ ದಿನಾಚರಣೆ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಇಂದು ದೀನ ದಲಿತೋದ್ಧಾರಕ ಮಹಾತ್ಮ ಕುದ್ಮುಲ್ ರಂಗರಾವ್ ಅವರ ಜನ್ಮ ದಿನಾಚರಣೆ

Updated : 29.06.2022

ಮಹಾನಗರ: ಭಾರತ ಕಂಡ ಮಹಾನ್ ಮಾನವತಾವಾದಿ, ಶಿಕ್ಷಣ ಪ್ರೇಮಿ, ಸಮಾಜ ಸುಧಾರಕ, ಮಹಿಳಾ ಸಬಲೀಕರಣ ರೂವಾರಿ, ದಲಿತೋದ್ಧಾರಕ, ಸ್ವಾತಂತ್ರ್ಯ ಹೋರಾಟಗಾರ ಕುದ್ಮುಲ್ ರಂಗರಾವ್ ಅವರ (ಜೂ.29ರಂದು) ಜನ್ಮ ದಿನಾಚರಣೆಯನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ.

ಹುಟ್ಟಿನಿಂದ ಇವರು ಬ್ರಾಹ್ಮಣರಾಗಿದ್ದರೂ ತಮ್ಮ ಬಹುಮುಖಿ ಕೊಡುಗೆಗಳಿಂದ ಎಲ್ಲರಿಂದಲೂ ಮಹಾತ್ಮರೆಂಬ ಗೌರವಕ್ಕೆ ಭಾಜನರಾಗಿದ್ದಾರೆ. ಇವರು ಕೇರಳದ ಕಾಸರಗೋಡಿನ ಕುದ್ಮುಲ್ ಎಂಬ ಸಣ್ಣ ಹಳ್ಳಿಯಲ್ಲಿ ಜೂನ್ 29, 1859ರಂದು ದೇವಪ್ಪಯ್ಯ ಮತ್ತು ಗೌರಿ ದಂಪತಿಗಳ ಪುತ್ರರಾಗಿ ಜನಿಸಿದರು.


ಸಮಾಜ ಸುಧಾರಣೆಗೆ ವಿಶೇಷ ಮಹತ್ವ ನೀಡಿ ಮಂಗಳೂರಿನಲ್ಲಿ ರಾಷ್ಟ್ರದ ಅಪ್ರತಿಮ ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯರು ಆರಂಭಿಸಿದ ಬ್ರಹ್ಮ ಸಮಾಜ ಶಾಖೆಯನ್ನು 1870ರಲ್ಲಿ ಆರಂಭಿಸಿದರು.

ಹಿಂದೂ ವರ್ಣವ್ಯವಸ್ಥೆ, ಅಸಮಾನತೆ ಮತ್ತು ಅಸ್ಪೃಶ್ಯತೆಗಳಿಂದ ಜಿಗುಪ್ಸೆಗೊಂಡ ಕುದ್ಮುಲ್ ರಂಗರಾವ್ ಕರಾವಳಿ ಕರ್ನಾಟಕದಲ್ಲಿ ಸಮಾಜ ಸುಧಾರಣೆಗೆ ಹಲವಾರು ವೈರುಧ್ಯಗಳು ಮತ್ತು ಅಪಾಯಗಳ ನಡುವೆಯೂ ಮುಂದಾದರು. ದಲಿತರು, ಹಿಂದುಳಿದವರು ಮತ್ತು ಶೋಷಿತ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗಿರುವುದರಿಂದ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿಲ್ಲವೆಂದು ಕುದ್ಮುಲ್ ರಂಗರಾವ್ ಬಲವಾಗಿ ಪ್ರತಿಪಾದಿಸಿದರು.

ಇವರು ಮಂಗಳೂರು ನಗರದಲ್ಲಿ ಸ್ಥಾಪಿಸಿರುವ ದಲಿತ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯವನ್ನು ಇಂದು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿದೆ. ದಲಿತ ಅಧಿಕಾರಿಯೊಬ್ಬರು ಕಾರಿನಲ್ಲಿ ಬರುವಾಗಿ ಮೇಲೆದ್ದ ಧೂಳು ನನ್ನ ತಲೆಯ ಮೇಲೆ ಬಿದ್ದಾಗ ನನಗೆ ಅತೀವ ಆನಂದವುಂಟಾಗುತ್ತದೆ ಎಂದು ಹೇಳಿದ ಕುದ್ಮುಲ್ ರಂಗರಾವ್ ಅಂತಹ ಮಹಾತ್ಮರು ಇಂದು ಸಿಗುವುದುಂಟೆ? ಗಾಂಧಿ ಮತ್ತು ಕುದ್ಮುಲ್ ರಂಗರಾಯರ ಸಾಮಾಜಿಕ ಮತ್ತು ಆರ್ಥಿಕ ವಿಚಾರಧಾರೆಗಳು ಒಂದೇ ಆಗಿದ್ದು ಮಾನವೀಯ ನೆಲೆಗಟ್ಟನ್ನು ಹೊಂದಿವೆ.

ಇಂದು ಹಿಂದುತ್ವದ ಪ್ರಯೋಗಶಾಲೆಯಾಗಿ ಪರಿವರ್ತನೆಗೊಳ್ಳುತ್ತಿರುವ ಭಾರತವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಇಂತಹ ಮಹಾತ್ಮರು ಮತ್ತೊಮ್ಮೆ ಹುಟ್ಟಿ ಬರಬೇಕು. ಭಾರತಕ್ಕೆ ತಾಲಿಬಾನಿಗಳು ಬೇಡ, ಕುದ್ಮುಲ್ ರಂಗರಾವ್, ಅಂಬೇಡ್ಕರ್ ರಂತವರು ಬೇಕು.

© Copyright 2022, All Rights Reserved Kannada One News