Flash News:
ಕೊಡಗು: ಸಾಕಾನೆ ದಾಳಿಗೆ ಕಾರ್ಮಿಕ ಬಲಿ

ಕೊಡಗು: ಸಾಕಾನೆ ದಾಳಿಗೆ ಕಾರ್ಮಿಕ ಬಲಿ

Updated : 29.09.2022

ಮಡಿಕೇರಿ: ಸಾಕಾನೆ ದಾಳಿಗೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ಇಂದು ಬೆಳಿಗ್ಗೆ ದುಬಾರೆ ಹಾಡಿಯಲ್ಲಿ ನಡೆದಿದೆ.

ದುಬಾರೆ ಹಾಡಿ ನಿವಾಸಿ  ಬಸಪ್ಪ (28) ಮೃತ ದುರ್ದೈವಿ. ಮನೆಯಿಂದ ನಡೆದು ಹೋಗುತ್ತಿದ್ದ ವೇಳೆ ಸಾಕಾನೆ ದಾಳಿ ಮಾಡಿದೆ. ಈ ಸಂದರ್ಭ ಸ್ಥಳಕ್ಕೆ ತೆರಳಿದ ಮಾವುತನ ಮೇಲೂ ದಾಳಿ ಮಾಡಿದ್ದು, ಮಾವುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಂತಾಜನಕ ಸ್ಥಿತಿಯಲ್ಲಿದ್ದ ಬಸಪ್ಪನನ್ನು ಉಪವಲಯ ಅರಣ್ಯಾಧಿಕಾರಿ ರಂಜನ್ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮೃತ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

© Copyright 2022, All Rights Reserved Kannada One News