ಕೇರಳ ಹೈಕೋರ್ಟ್ ಆದೇಶ ಶ್ಲಾಘನೀಯ: ಸಾಮಾಜಿಕ ಕಾರ್ಯಕರ್ತೆ ಮಂಜುಳಾ ತೆಲಗಡೆ ಅವರ ಲೇಖನ

Related Articles

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

ಕೇರಳ ಹೈಕೋರ್ಟ್ ಆದೇಶ ಶ್ಲಾಘನೀಯ: ಸಾಮಾಜಿಕ ಕಾರ್ಯಕರ್ತೆ ಮಂಜುಳಾ ತೆಲಗಡೆ ಅವರ ಲೇಖನ

Updated : 27.07.2022

ನಿನ್ನೆ ಬಂದ ಕೇರಳ ಹೈಕೋರ್ಟ್ ನ ತೀರ್ಮಾನವನ್ನು ಗಮನಿಸಿದಾಗ ಇಂದಿನ ಸಂದರ್ಭಕ್ಕೆ ಯೋಚಿತ ನಿರ್ಧಾರ ಎಂದು ಶ್ಲಾಘಿಸಲೇಬೇಕು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಈ ರೀತಿಯ ಕಾನೂನುಗಳ ಅವಶ್ಯಕವಾಗಿದೆ ಎಂಬುದನ್ನು ಸರ್ಕಾರ ಮತ್ತು ಸಮಾಜ ಅರ್ಥಮಾಡಿಕೊಳ್ಳಬೇಕಾಗಿದೆ. ಈ ಸಮಾಜದಲ್ಲಿ ಅತಿಮುಖ್ಯವಾಗಿ ತಂದೆ ಯಾರು ಎಂದು ಹೇಳುವುದು ತಾಯಿ ಒಂದು ಮಗುವಿನ ಹುಟ್ಟು ಇಬ್ಬರಿಂದಾ ಎನ್ನುವದಾದರೆ ಕೇವಲ ಒಬ್ಬರ ಹೆಸರನ್ನ ಮಗುವಿನ ಹಿಂದೆ-ಮುಂದೆ ಸೇರಿಸುವುದು ಎಷ್ಟು ನ್ಯಾಯಸಮ್ಮತವಾಗಿ. ಗಂಡು ಮನೆ ಯಜಮಾನ ಎಂದು ಕರೆಯುವುದು ಮನುಸ್ಮೃತಿಯ ಭಾಗವಷ್ಟೆ. ಆದರೆ ಈಗ ನಾವು ಸಂವಿಧಾನದ ಕಾನೂನು ನಡೆಗಳನ್ನು ಅನುಸರಿಸಬೇಕಿದೆ. ಅದೇ ಸಂವಿಧಾನದ ಸಹಾಯದಿಂದ ಅಧಿಕಾರಕ್ಕೆ ಬಂದಿರುವ ಸರಕಾರಗಳು ಯಾಕೆ ಈ ಮನು ಧೋರಣೆಗಳನ್ನು ತೋರಿಸಬೇಕು.   

ಸಮಾಜದ ತುಳಿತಕ್ಕೊಳಗಾಗಿ ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಯ ವ್ಯವಸ್ಥೆಗೆ ಬಲಿಯಾದ ದೇವದಾಸಿ ಮತ್ತು ಸೆಕ್ಸ್ ವರ್ಕರ್ ಗಳಾಗಿ ಕತ್ತಲೆ ಬದುಕು ಸಾಗುಸಿತ್ತಿರುವ ಮಹಿಳೆಯರ ಮಕ್ಕಳ ಹೆಸರಿನ ಜೊತೆ ಯಾರ ಹೆಸರನ್ನು ಈ ಸಮಾಜ ಕೊಡಲು ಬಯಸುತ್ತಿದೆ. ಮಹಿಳೆಯನ್ನು ತನ್ನ ಅದೀನದ ಆಳ್ವಿಕೆಗೆ ಬಳಸಿಕೊಳ್ಳುವ ಪುರುಷ ಸಮಾಜ ಮಗುವಿಗೆ ತನ್ನ ಹೆಸರನ್ನು ಸೂಚಿಸಲು ಬಯಸುವುದೇ? ನಮ್ಮ ಸುತ್ತಲೂ ಕೌಟುಂಬಿಕ ದೌರ್ಜನ್ಯದಿಂದ ಗಂಡನ ಜೊತೆ ವಿಚ್ಛೇದನ ಪಡೆದುಕೊಂಡು ಹೆಣ್ಣು ತಾನೊಬ್ಬಳೇ ಧೈರ್ಯವಾಗಿ ಬದುಕು ಸಾಗಿಸಲು ಮುಂದೆ ಸಾಗುತ್ತಿರುವಾಗ ತನ್ನ ಮಕ್ಕಳಿಗೆ ತನ್ನ ಹೆಸರಿನ ಬದಲಾಗಿ ಮತ್ತೆ ಮಕ್ಕಳನ್ನು ನೋಡಿಕೊಳ್ಳದೇ ಜವಾಬ್ದಾರಿಯಿಲ್ಲದೆ ಬದುಕುವಂತಹ ಪುರುಷನ ಹೆಸರನ್ನು ಸೇರಿಸುವಾಗ ಅವಳಿಗಾದ ದೌರ್ಜನ್ಯ ನೋವುಗಳು ಅವಳಿಗೆ ಮತ್ತೆ ಮರುಕಳಿಸುವುದು ಎಂಬುದನ್ನು ನಮ್ಮ ಕಾನೂನುಗಳು, ಸರ್ಕಾರಗಳು ಪರಿಗಣಿಸಬೇಕಾಗಿದೆ.  

ಮಕ್ಕಳಿಗೆ ತಮ್ಮ ತಂದೆ ನಡುದಾರಿಯಲ್ಲಿ ಬಿಟ್ಟು ಹೋದರು ಎಂಬ ನೋವನ್ನು ತಡೆದುಕೊಳ್ಳುವ ಮೊದಲೇ ಸರ್ಕಾರಗಳು ಹಾಕಿರುವಂತಹ ಎಷ್ಟು ಫಾರಂಗಳಲ್ಲಿ ತಂದೆ ಹೆಸರನ್ನೇ ಸೂಚಿಸಬೇಕು ಎಂದು ಹಾಕುವಾಗ ಒಂದು ಸಣ್ಣ ಸೂಕ್ಷ್ಮತೆಯು ಇಲ್ಲದಿರುವಂತಹ ಸ್ಥಿತಿಯಲ್ಲಿ ನಮ್ಮ ವ್ಯವಸ್ಥೆಯ ನಡೆದು ಬಂದಿದೆಯೆಂಬುದನ್ನು ನೋಡಬಹುದಾಗಿದೆ. ಜೊತೆಗೆ ಇದನ್ನು
ಮೀರಿಕೊಂಡು ಬದುಕು ಬದಲಿಸಿಕೊಳ್ಳಲು ಹೊರಟ ಯುವಜನರು ತಮ್ಮ ತಾಯಿ ಹೆಸರನ್ನು ತಮ್ಮ ಹೆಸರಿನೊಂದಿಗೆ ಸ್ವ-ಇಚ್ಛೆಯಿಂದ ಸರ್ಕಾರ ಮತ್ತು ಸರ್ಕಾರೇತರ ಕಾಲಂಗಳಲ್ಲಿ ಬಳಸಲು ಬಯಸಿದಾಗ ತಂದೆ ಹೆಸರು ಮೊದಲು ಕೇಳುವ ಪ್ರಕ್ರಿಯೆ  ಅವರ ನಿರ್ಧಾರಗಳನ್ನು ಗಟ್ಟಿಗೊಳಿಸಕೊಳ್ಳವ ಮೊದಲೆ ಸೋಲನ್ನು ಅನುಭವಿಸುವಂತೆ ಮಾಡಿಬಿಡುತ್ತವೆ.

ಕೇರಳ ಹೈಕೋರ್ಟ್ ನ ಈ ನಿರ್ಧಾರ ಪ್ರತಿಯೊಂದು ಸನ್ನಿವೇಶಗಳನ್ನು ಕೂಲಂಕುಶವಾಗಿ ಪರಿಗಣಿಸಿದಾಗ ಒಂದು ಮಗುವಿನ ಜನನಕ್ಕೆ ಹೆಣ್ಣೆ ಕಾರಣವಾಗಿರುವುದರಿಂದ ಹೆಣ್ಣಿನ ಐಡೆಂಟಿಟಿಯನ್ನು ಮಗುವಿನೊಂದಿಗೆ ಮೊದಲು ನಿರ್ಧರಿಸಬೇಕಾಗಿದೆ ಜೊತೆಗೆ ಇದು ಎಲ್ಲಾ ಸರ್ಕಾರ ಮತ್ತು ಸರ್ಕಾರೇತರಗಳ ಕಾಲಂಗಳಲ್ಲಿ ಬರುವಂತೆ ಮಾಡಲು ಮುಖ್ಯವಾಹಿನಿಗಳು ಕಾರ್ಯನಿರ್ವಹಿಸಬೇಕಾಗಿದೆ.

- ಮಂಜುಳಾ ತೆಲಗಡೆ (ಸಾಮಾಜಿಕ ಕಾರ್ಯಕರ್ತೆ)

ಕೇರಳ ಹೈಕೋರ್ಟ್ ಮಹತ್ವದ ತೀರ್ಪು

© Copyright 2022, All Rights Reserved Kannada One News