ಲಂಚದ ಹಣ ವಾಪಸ್ ಮಾಡುವ ವೇಳೆ ಇಬ್ಬರು ಕೆಎಎಸ್ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ

Related Articles

ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಸಂಕಷ್ಟ: ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ಎಚ್ಚರಿಕೆ

ಜಮ್ಮು-ಕಾಶ್ಮೀರ ಕಾರಾಗೃಹ ಡಿಜಿ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು: ಮನೆ ಸಹಾಯಕನೇ ಮುಖ್ಯ ಆರೋಪಿ, ಹತ್ಯೆ ಹೊಣೆ ಹೊತ್ತುಕೊಂಡ ಪಿಎಎಫ್ಎಫ್ ಸಂಘಟನೆ

ಅಮೆರಿಕಾದಲ್ಲಿ 8 ತಿಂಗಳ ಮಗುವಿನ ಸಹಿತ ಭಾರತ ಮೂಲದ ಕುಟುಂಬ ಅಪಹರಣ

ವಿಜಯಪುರ: ಕೆಎಸ್ಸಾರ್ಟಿಸಿ ನೌಕರ ಆತ್ಮಹತ್ಯೆ

ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯ ಹತ್ಯೆ

ಬಿಬಿಎಂಪಿ ಮುಖ್ಯ ಆಯುಕ್ತರ ಚಿತ್ರ ಬಳಸಿ ವಂಚನೆ: ಎಫ್‍ಐಆರ್ ದಾಖಲು

ದಕ್ಷಿಣ ಕನ್ನಡ: ಅ.5ಕ್ಕೆ ಉಚಿತ 'ಅಭಾ ಕಾರ್ಡ್‌' ಉಚಿತ ನೋಂದಣಿ

ಉತ್ತರಾಖಂಡ್‌: ಹಿಮಕುಸಿತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು

ಎಸ್ಸಿ ಯುವಕನ ಜೊತೆ ಒಕ್ಕಲಿಗ ಯುವತಿ ನಾಪತ್ತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಳ್ತಂಗಡಿಯಲ್ಲಿ RSSನಿಂದ ಶಸ್ತ್ರಾಸ್ತ ಪೂಜೆ: ಸಿಪಿಐ(ಎಂ) ಖಂಡನೆ

ಲಂಚದ ಹಣ ವಾಪಸ್ ಮಾಡುವ ವೇಳೆ ಇಬ್ಬರು ಕೆಎಎಸ್ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ

Updated : 22.09.2022

ಬೆಂಗಳೂರು: ಲಂಚದ ಹಣವನ್ನು ದೂರುದಾರರಿಗೆ ವಾಪಸ್ ಮಾಡುವಾಗ ಕೆಎಎಸ್‌ ಅಧಿಕಾರಿಗಳಿಬ್ಬರನ್ನು ಬುಧವಾರ ಲೋಕಾಯುಕ್ತ ಪೊಲೀಸರು  ಬಂಧಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ  ಎ.ಬಿ. ವಿಜಯಕುಮಾರ್‌ ಮತ್ತು ಅವರ ಭೂಮಾಪಕ  ರಘುನಾಥ್‌ ಬಂಧಿತರು ಎಂದು ತಿಳಿದು ಬಂದಿದೆ.

ಲಗ್ಗೆರೆಯಲ್ಲಿರುವ ಪುರಾತನವಾದ ದುಗ್ಗಲಮ್ಮ ದೇವಸ್ಥಾನದ 0.30 ಕುಂಟೆ ಜಮೀನಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಎನ್‌ಓಸಿಯನ್ನು ನೀಡಲು ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಎಬಿ ವಿಜಯ್ ಕುಮಾರ್ ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿ 2 ರಘುನಾಥ್ ಅವರು,  2.50 ಲಕ್ಷ ಲಂಚವನ್ನು ಸ್ವೀಕರಿಸಿದ್ದರೆನ್ನಲಾಗಿದೆ. ಬಳಿಕ ಲಂಚವನ್ನು ಪಡೆದು ನಿರಪೇಕ್ಷಣಾ ಪತ್ರವನ್ನು ನೀಡಿದ್ದರು.

ಈ ಕುರಿತು ಅರ್ಜಿದಾರರು ಕೆಐಎಡಿಬಿ ಉಪ ಆಯುಕ್ತರಿಗೆ ದೂರು ನೀಡಿದ್ದು,  ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ ದೂರುದಾರರನ್ನು ಸಂಪರ್ಕಿಸಿದ್ದ ಆರೋಪಿಗಳು, ಈ ದೂರನ್ನು ಹಿಂಪಡೆಯಲು ತಾವು ಲಂಚವಾಗಿ ಪಡೆದಿದ್ದ 2.50 ಲಕ್ಷದ ಜೊತೆ 50 ಸಾವಿರ ರೂ. ಹೆಚ್ಚುವರಿ ಹಣವನ್ನು ಸೇರಿಸಿ ಒಟ್ಟು 30 ಲಕ್ಷ ರೂಪಾಯಿ ಹಣವನ್ನು ನೀಡುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ ಎಂದು ಲೋಕಾಯುಕ್ತದ ಪ್ರಕಟನೆ ತಿಳಿಸಿದೆ.

© Copyright 2022, All Rights Reserved Kannada One News