ಕರೂರ್ ವೈಶ್ಯ ಬ್ಯಾಂಕ್ ಲಾಭ ಹೆಚ್ಚಳ

ಕರೂರ್ ವೈಶ್ಯ ಬ್ಯಾಂಕ್ ಲಾಭ ಹೆಚ್ಚಳ

Updated : 26.07.2022

ಬೆಂಗಳೂರು: ಕರೂರ್ ವೈಶ್ಯ ಬ್ಯಾಂಕ್‌ನ ಜೂನ್ ತ್ರೈಮಾಸಿಕದ ಲಾಭವು ಶೇಕಡ 110ರಷ್ಟು ಹೆಚ್ಚಾಗಿದ್ದು,  229 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌  109 ಕೋಟಿ ಲಾಭ ಗಳಿಸಿತ್ತು.

ಜೂನ್‌ 30ರ ವೇಳೆಗೆ ಬ್ಯಾಂಕ್‌ನ ಒಟ್ಟು ಎನ್‌ಪಿಎ ಪ್ರಮಾಣವು ಶೇ 5.21ಕ್ಕೆ ಇಳಿಕೆಯಾಗಿದೆ. ಇದು ಹಿಂದಿನ ವರ್ಷದ ಜೂನ್‌ ಕೊನೆಯಲ್ಲಿ ಶೇ 7.97ರಷ್ಟು ಇತ್ತು. ನಿವ್ವಳ ಎನ್‌ಪಿಎ ಪ್ರಮಾಣವು ಜೂನ್ ಅಂತ್ಯಕ್ಕೆ ಶೇ 1.91ರಷ್ಟು ಇದೆ ಎಂದು ಪ್ರಕಟಣೆ ತಿಳಿಸಿದೆ.

ಬ್ಯಾಂಕ್‌ನ ಠೇವಣಿಗಳ ಮೊತ್ತವು ಜೂನ್ ತ್ರೈಮಾಸಿಕದಲ್ಲಿ ಶೇ.11ರಷ್ಟು ಹೆಚ್ಚಾಗಿದ್ದು,  71,168 ಕೋಟಿಗೆ ತಲುಪಿದೆ. ಚಾಲ್ತಿ ಖಾತೆ, ಉಳಿತಾಯ ಖಾತೆ ಹಾಗೂ ಸಣ್ಣ ಮೊತ್ತದ ಅವಧಿ ಠೇವಣಿಗಳು ಒಟ್ಟು ಠೇವಣಿಗಳ ಮೊತ್ತ ಹೆಚ್ಚಳಕ್ಕೆ ಕೊಡುಗೆ ನೀಡಿವೆ.

© Copyright 2022, All Rights Reserved Kannada One News