ಕಮಲಾ ಹಂಪನಾ ಪ್ರಶಸ್ತಿಗೆ ಲೇಖಕ ಪದ್ಮಪ್ರಸಾದ್‌ ಆಯ್ಕೆ

ಕಮಲಾ ಹಂಪನಾ ಪ್ರಶಸ್ತಿಗೆ ಲೇಖಕ ಪದ್ಮಪ್ರಸಾದ್‌ ಆಯ್ಕೆ

Updated : 11.11.2022

ತುಮಕೂರು: ‘ನಾಡೋಜ ಡಾ.ಕಮಲಾ ಹಂಪನಾ ಸಾಹಿತ್ಯ ವೇದಿಕೆ’ ನೀಡುವ 2022ನೇ ಸಾಲಿನ ದತ್ತಿ ಪ್ರಶಸ್ತಿಗೆ ಲೇಖಕ ಡಾ.ಎಸ್.ಪಿ.ಪದ್ಮಪ್ರಸಾದ್ ಆಯ್ಕೆಯಾಗಿದ್ದಾರೆ. 

ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಇದೇ 12ರಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಲೇಖಕಿಯರ ಸಂಘದ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

© Copyright 2022, All Rights Reserved Kannada One News