ನಾನು ಸಿಎಂ, ದೇಶ ಬಿಟ್ಟು ಹೋಗುವವನಲ್ಲ: ಜಾರ್ಖಂಡ್ ಸಿಎಂ ಸೊರೇನ್

ನಾನು ಸಿಎಂ, ದೇಶ ಬಿಟ್ಟು ಹೋಗುವವನಲ್ಲ: ಜಾರ್ಖಂಡ್ ಸಿಎಂ ಸೊರೇನ್

Updated : 17.11.2022

ರಾಂಚಿ: ಜಾರ್ಖಂಡ್‌ನಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಗಣಿಗಾರಿಕೆ ಸಂಬಂಧ ನನ್ನ ವಿರುದ್ಧ ಹೊರಿಸಲಾದ ಆರೋಪಗಳು ಆಧಾರರಹಿತವಾಗಿವೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಗುರುವಾರ ಹೇಳಿದ್ದಾರೆ.

ಗಣಿಗಾರಿಕೆ ಗುತ್ತಿಗೆ ನೀಡಿದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸೊರೇನ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆ ಎದುರಿಸುತ್ತಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸೊರೇನ್, ವಿರೋಧ ಪಕ್ಷಗಳ ಷಡ್ಯಂತ್ರಕ್ಕೆ ನನ್ನನ್ನು ಬಲಿಪಶು ಮಾಡಲಾಗಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಲಾಗಿದೆ ಎಂದು ಆರೋಪಿಸಿದರು.

ವಿವರವಾದ ತನಿಖೆಯ ಬಳಿಕವಷ್ಟೇ ಏಜೆನ್ಸಿಗಳು ಅಂತಿಮ ತೀರ್ಮಾನಕ್ಕೆ ಬರಬೇಕು. ನಾನೊಬ್ಬ ಮುಖ್ಯಮಂತ್ರಿ. ಸಮನ್ಸ್ ನೀಡುವ ರೀತಿ ನೋಡಿದರೆ ನಾನೇನು ದೇಶ ಬಿಟ್ಟು ಓಡಿ ಹೋಗುವವನಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

© Copyright 2022, All Rights Reserved Kannada One News