'ಜೈ ಭೀಮ್' ಚಿತ್ರತಂಡದ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

'ಜೈ ಭೀಮ್' ಚಿತ್ರತಂಡದ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

Updated : 12.08.2022

ಹೊಸದಿಲ್ಲಿ: ತಮಿಳಿನ ಖ್ಯಾನ ನಟ ಸೂರ್ಯ ಅಭಿನಯದ ಜೈಭೀಮ್ ಚಿತ್ರತಂಡದ ಮೇಲೆ ದಾಖಲಾಗಿದ್ದ ಎಫ್ಐಆರ್ ಅನ್ನು ಶುಕ್ರವಾರ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆಂಬ ಆರೋಪದ ಮೇಲೆ ಜೈ ಭೀಮ್ (Jai Bhim) ಚಲನಚಿತ್ರದ ನಾಯಕನಟ ಸೂರ್ಯ (Suriya) ಮತ್ತು ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ವಿರುದ್ಧ  ದಾಖಲಿಸಲಾಗಿದ್ದ ಈ ಎಫ್‍ಐಆರ್ (FIR) ಕೇವಲ ಊಹೆಯ ಆಧಾರದಲ್ಲಿ ದಾಖಲಿಸಲಾಗಿದೆ ಎಂದು ಹೇಳಿರುವ ಜಸ್ಟಿಸ್ ಎನ್. ಸತೀಶ್ ಕುಮಾರ್, ಅದನ್ನು ವಜಾಗೊಳಿಸಿದ್ದಾರೆ.

ವಕೀಲರು ಹಾಗೂ ರುದ್ರ ವಣ್ಣಿಯಾರ್ ಸೇನೆಯ ಅಧ್ಯಕ್ಷರೂ ಆಗಿರುವ ಕೆ.ಸಂತೋಷ್ ಎಂಬವರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಸೆಕ್ಷನ್ 295ಎ ಅನ್ವಯ ಚೆನ್ನೈಯ ವೆಲಚ್ಚೇರಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಚಿತ್ರದ ಖಳನಾಯಕ ಗುರುಮೂರ್ತಿಯ ಪಾತ್ರವು ವಣ್ಣಿಯಾರ್ ಸಂಘಂ ಇದರ ಮಾಜಿ ನಾಯಕ ಗುರುನಾಥನ್ ಅವರ ಹೆಸರನ್ನು ಆಧರಿಸಿದೆ ಹಾಗೂ ಚಿತ್ರದಲ್ಲಿ ವಣ್ಣಿಯಾ ಸಂಘಂ ಕ್ಯಾಲೆಂಡರ್ ಅನ್ನೂ ಬಳಸಲಾಗಿದೆ ಹಾಗೂ ಈ ಮೂಲಕ ಸಮುದಾಯ ಮತ್ತದರ ನಾಯಕರ ಘನತೆಯನ್ನು ಕುಗ್ಗಿಸುವ ಯತ್ನ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

© Copyright 2022, All Rights Reserved Kannada One News