Flash News:
ಇಂದು ಉಮರ್ ಖಾಲಿದ್ ಹುಟ್ಟಿದ ದಿನವಂತೆ: ಶಿವಸುಂದರ್ ಅವರ ಕವಿತೆ

ಇಂದು ಉಮರ್ ಖಾಲಿದ್ ಹುಟ್ಟಿದ ದಿನವಂತೆ: ಶಿವಸುಂದರ್ ಅವರ ಕವಿತೆ

Updated : 11.08.2022

ಜೈಲಿನಲ್ಲಿರುವ ಹೋರಾಟಗಾರ ಉಮರ್‌ ಖಾಲಿದ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಚಿಂತಕ ಶಿವಸುಂದರ್ ಅವರು ಬರೆದ ಅರ್ಥಪೂರ್ಣ ಕವಿತೆ ನಿಮ್ಮ ಓದಿಗಾಗಿ.

ನಾನು ಉಮರ್ ಖಾಲಿದ್
ಅರ್ಥ: ಬದುಕು ವಿಶಾಲ ಬಯಲು
ಏಕಲವ್ಯ , ಶಂಭೂಕರ ಒಕ್ಕಲು
ಬುದ್ಧ ಬಸವ ಅಂಬೇಡ್ಕರರ ಬಳಗ..

ಹೌದು ,
ನಾನೊಬ್ಬ ಭಯೋತ್ಪಾದಕ
ದ್ವೇಶದ ಕೋಟೆಯಲ್ಲಿ
ಪ್ರೀತಿಯ ಸ್ಪೋಟಕ ಅಡಗಿಸಿಟ್ಟ
ದ್ವೇಶದ್ರೋಹಿ

ಸುಳ್ಳಿನ ಸಂದೂಕದಲ್ಲಿ
ಸತ್ಯದ ಕಿಡಿಯನ್ನು ಬಚ್ಚಿಟ್ಟ
ವಿಫಲ ಸಂಚುಕೋರ
ಭೀಭತ್ಸ ಮೌನದ ಬೀದಿಗಳಲ್ಲಿ
ಮಾತಿನ ಮೊಟ್ಟೆ ಒಡೆಯಲು
ಗುಟ್ಟು ಕಾವು ಕೊಟ್ಟ
ಗಲಭೆಕೋರ

ಬಲ್ಲೆ ..ಬಲ್ಲೆ
ಇರುಳ ದೀರ್ಘ ಬಲ್ಲೆ
ಉಮರ್ ಖೈದಾದರೂ
ಉಮಂಗ್ ಬಿಡಲೊಲ್ಲೆ...
ಸೂರ್ಯನನ್ನು ಸೆರೆಗೆ ದೂಡಿ
ಹಗಲ ತೊಗಲ ಕಳಚಿದರೂ
ಉರಿವುದು ಸುಡುವ ಬೆಳಕಿನಲ್ಲೇ
ಇರುಳ ದೊರೆಗಳೇ... ಬರೆದುಕೊಳ್ಳಿ ...
ನನ್ನ ಹೆಸರು ಸುಂದರ ಸತ್ಯ
ನಾನು ಉಮರನ ಒಕ್ಕಲು
ವಿಳಾಸ ವಿಶಾಲ ಬಯಲು
- ಶಿವಸುಂದರ್

© Copyright 2022, All Rights Reserved Kannada One News