ಏಷ್ಯಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ತಂಡ

Related Articles

ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ಕ್ರಿಕೆಟ್ ತಂಡವನ್ನು ಚೋಕರ್ಸ್ ಎಂದ ಕಪಿಲ್ ದೇವ್

ಟೀ20 ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ: ಫೈನಲ್‌ಗೆ ತಲುಪಿದ ಇಂಗ್ಲೆಂಡ್-ಪಾಕ್!

ಅತ್ಯಾಚಾರ ಆರೋಪ: ದನುಷ್ಕಾ ಗುಣತಿಲಕರನ್ನು ಅಮಾನತುಗೊಳಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಟಿ-20 ವಿಶ್ವಕಪನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು, ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಐಪಿಎಸ್ ಅಧಿಕಾರಿ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಂಎಸ್ ಧೋನಿ

‘ಖೇಲ್ ರತ್ನ’ ಪ್ರಶಸ್ತಿಗೆ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಹೆಸರು ಶಿಫಾರಸು

ಬೈಜುಸ್ ನ ಜಾಗತಿಕ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ನೇಮಕ

ಟಿ20 ವಿಶ್ವಕಪ್‌| ಟಾಸ್‌ ಗೆದ್ದ ಬಾಂಗ್ಲಾದೇಶ: ಭಾರತ ಬ್ಯಾಟಿಂಗ್

ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ 3 ರನ್ ಅಂತರದ ಜಯ ಸಾಧಿಸಿದ ಬಾಂಗ್ಲಾದೇಶ

ಪುರುಷ, ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ವೇತನ: ಬಿಸಿಸಿಐ ಘೋಷಣೆ

ಏಷ್ಯಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ತಂಡ

Updated : 04.11.2022

ದಕ್ಷಿಣ ಕೊರಿಯಾ: ಸೌರಷ್‌ ಘೋಷಾಲ್‌ ಅವರನ್ನೊಳಗೊಂಡ ಭಾರತ ಪುರುಷರ ತಂಡವು ಏಷ್ಯನ್‌ ಸ್ಕ್ವಾಷ್‌ ತಂಡ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಇದೇ ಮೊದಲ ಬಾರಿ ಈ ಸಾಧನೆ ಮಾಡಿದ ಶ್ರೇಯ ಗಳಿಸಿದೆ.

ಶುಕ್ರವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 2–0ಯಿಂದ ಕುವೈತ್ ತಂಡವನ್ನು ಪರಾಭವಗೊಳಿಸಿತು.

ಮೊದಲ ಪಂದ್ಯದಲ್ಲಿ ಭಾರತದ ರಮಿತ್ ಟಂಡನ್‌ 11-5, 11-7, 11-4ರಿಂದ ಅಲಿ ಅಲಮೇಜಿ ಎದುರು ಗೆದ್ದು ಮುನ್ನಡೆ ತಂದುಕೊಟ್ಟರು. ಬಳಿಕ ಸೌರವ್‌ 11-9, 11-2, 11-3ರಿಂದ ಅಮ್ಮಾರ್ ಅಲ್ಟಾಮಿಮಿ ಅವರನ್ನು ಪರಾಭವಗೊಳಿಸಿದರು.

ಇವೆರಡೇ ಪಂದ್ಯಗಳಲ್ಲಿ ಫಲಿತಾಂಶ ನಿರ್ಧಾರವಾದ್ದರಿಂದ ಅಭಯ್ ಸಿಂಗ್ ಮತ್ತು ಫಲಾಹ್ ಮೊಹಮ್ಮದ್ ನಡುವಣ ಹಣಾಹಣಿ ನಡೆಯಲಿಲ್ಲ.

ಹಿಂದಿನ ಎರಡು ಆವೃತ್ತಿಗಳಲ್ಲಿ ಬೆಳ್ಳಿ ಪದಕ ‌ಜಯಿಸಿದ್ದ ಭಾರತ ಈ ಬಾರಿ ಶ್ರೇಷ್ಠ ಸಾಮರ್ಥ್ಯದ ಮೂಲಕ ಚಿನ್ನ ಒಲಿಸಿಕೊಂಡಿತು. ಎ ಗುಂಪಿನಲ್ಲಿ ಕತಾರ್, ಪಾಕಿಸ್ತಾನ, ಕುವೈತ್, ದಕ್ಷಿಣ ಕೊರಿಯಾ ಮತ್ತು ಚೀನಾ ತೈಪೆ ತಂಡಗಳನ್ನು ಸೋಲಿಸಿ ಅಗ್ರಸ್ಥಾನ ಗಳಿಸಿದ್ದ ಭಾರತ, ನಾಲ್ಕರ ಘಟ್ಟದಲ್ಲಿ 2–1ರಿಂದ ಮಲೇಷ್ಯಾ ತಂಡವನ್ನು ಮಣಿಸಿತ್ತು.

ಭಾರತ ಮಹಿಳಾ ತಂಡವು ಸೆಮಿಫೈನಲ್‌ನಲ್ಲಿ 1–2ರಿಂದ ಮಲೇಷ್ಯಾ ಎದುರು ಸೋತು ಕಂಚು ತನ್ನದಾಗಿಸಿಕೊಂಡಿತು. ಬಿ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದ್ದ ಭಾರತ ತಂಡವು ಇರಾನ್‌ ಹಾಗೂ ಸಿಂಗಪುರ ವಿರುದ್ಧ 3–0ಯಿಂದ ಗೆದ್ದರೆ, ಹಾಂಗ್‌ಕಾಂಗ್ ಎದುರು 0–3ರಿಂದ ಸೋಲು ಕಂಡಿತ್ತು.

© Copyright 2022, All Rights Reserved Kannada One News