ಪಿಎಫ್ಐ-ಎಸ್.ಡಿ.ಪಿ.ಐ ಕಚೇರಿಗಳ ಮೇಲೆ ದಾಳಿ: ಕ್ರಮದ ಹಿಂದೆ ಅಪರಾಧಗಳ ಹಿನ್ನೆಲೆ ಪರಿಗಣನೆ: ಧರ್ಮ, ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಅಲ್ಲ: ಆರಗ ಜ್ಞಾನೇಂದ್ರ

Related Articles

ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಸಂಕಷ್ಟ: ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ಎಚ್ಚರಿಕೆ

ಜಮ್ಮು-ಕಾಶ್ಮೀರ ಕಾರಾಗೃಹ ಡಿಜಿ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು: ಮನೆ ಸಹಾಯಕನೇ ಮುಖ್ಯ ಆರೋಪಿ, ಹತ್ಯೆ ಹೊಣೆ ಹೊತ್ತುಕೊಂಡ ಪಿಎಎಫ್ಎಫ್ ಸಂಘಟನೆ

ಅಮೆರಿಕಾದಲ್ಲಿ 8 ತಿಂಗಳ ಮಗುವಿನ ಸಹಿತ ಭಾರತ ಮೂಲದ ಕುಟುಂಬ ಅಪಹರಣ

ವಿಜಯಪುರ: ಕೆಎಸ್ಸಾರ್ಟಿಸಿ ನೌಕರ ಆತ್ಮಹತ್ಯೆ

ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯ ಹತ್ಯೆ

ಬಿಬಿಎಂಪಿ ಮುಖ್ಯ ಆಯುಕ್ತರ ಚಿತ್ರ ಬಳಸಿ ವಂಚನೆ: ಎಫ್‍ಐಆರ್ ದಾಖಲು

ದಕ್ಷಿಣ ಕನ್ನಡ: ಅ.5ಕ್ಕೆ ಉಚಿತ 'ಅಭಾ ಕಾರ್ಡ್‌' ಉಚಿತ ನೋಂದಣಿ

ಉತ್ತರಾಖಂಡ್‌: ಹಿಮಕುಸಿತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು

ಎಸ್ಸಿ ಯುವಕನ ಜೊತೆ ಒಕ್ಕಲಿಗ ಯುವತಿ ನಾಪತ್ತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಳ್ತಂಗಡಿಯಲ್ಲಿ RSSನಿಂದ ಶಸ್ತ್ರಾಸ್ತ ಪೂಜೆ: ಸಿಪಿಐ(ಎಂ) ಖಂಡನೆ

ಪಿಎಫ್ಐ-ಎಸ್.ಡಿ.ಪಿ.ಐ ಕಚೇರಿಗಳ ಮೇಲೆ ದಾಳಿ: ಕ್ರಮದ ಹಿಂದೆ ಅಪರಾಧಗಳ ಹಿನ್ನೆಲೆ ಪರಿಗಣನೆ: ಧರ್ಮ, ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಅಲ್ಲ: ಆರಗ ಜ್ಞಾನೇಂದ್ರ

Updated : 22.09.2022

ಬೆಂಗಳೂರು: ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ, ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಹ, ಅಲ್ಪಸಂಖ್ಯಾತ, ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ, ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ, ಇಂದು ಮಾತನಾಡಿದ ಸಚಿವರು, ಸಮಾಜದಲ್ಲಿ, ಶಾಂತಿ ಸುವ್ಯವಸ್ಥೆ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಯೊಂದಿಗೆ, ಎಲ್ಲರೂ ಸಹಕರಿಸಬೇಕು, ಎಂದು ಹೇಳಿದ್ದಾರೆ.

ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರ ವಿರುದ್ಧವೇ ಆಗಲಿ, ಕ್ರಮ ಜರುಗಿಸಲಾಗುತ್ತದೆ ಎಂದ ಸಚಿವರು, ಖಚಿತ ಮಾಹಿತಿ ಮೇರೆಗೆ ಎನ್ ಐ ಎ ಸಿಬ್ಬಂದಿಗಳು, ಹಲವು ಕಡೆ ಶೋಧ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಪೊಲೀಸರು, ಇಬ್ಬರು ವ್ಯಕ್ತಿಗಳು, ಭಯೋತ್ಪಾದಕ ಸಂಘಟನೆ ಜತೆ, ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ತನಿಖೆಯನ್ನು ಚುರುಕಿನಿಂದ ನಡೆಸಿರುವ ಶಿವಮೊಗ್ಗ, ಪೊಲೀಸರ, ಕಾರ್ಯ ಕ್ಷಮತೆಯ ಬಗ್ಗೆ, ಅಭಿನಂದಿಸುತ್ತೇನೆ, ಎಂದೂ ಸಚಿವರು ಹೇಳಿದರು.

ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪೇ- ಸಿಎಮ್ ಅಭಿಯಾನದ ಬಗ್ಗೆ, ಕಟುವಾಗಿ ಪ್ರತಿಕ್ರಿಯಿಸಿದ ಸಚಿವರು, ಜನರು ಪಕ್ಷದಿಂದ ದೂರವಾಗುತ್ತಿದ್ದು, ಇದರಿಂದ ಹತಾಶರಾದ ಕಾಂಗ್ರೆಸ್ ನಾಯಕರು, ಇಂಥಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರೂ ಮಾಜಿ ವಿಧಾನ ಸಭಾ ಸ್ಪೀಕರ್ ಸಹ ಆಗಿದ್ದ, ಕಾಂಗ್ರೆಸ್ ನಾಯಕರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಹೇಳಿದ್ದು, ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡಿದೆ ಎಂದು ಹೇಳಿದರು.

© Copyright 2022, All Rights Reserved Kannada One News