ಇಂಧನ ರಫ್ತಿನ ಮೇಲಿನ ತೆರಿಗೆ ಹೆಚ್ಚಳ!

ಇಂಧನ ರಫ್ತಿನ ಮೇಲಿನ ತೆರಿಗೆ ಹೆಚ್ಚಳ!

Updated : 19.08.2022

ನವದೆಹಲಿ: ಎರಡು ವಾರಗಳ ಹಿಂದೆ ಇಂಧನ ರಫ್ತು ತೆರಿಗೆಗಳನ್ನು ಸ್ವಲ್ಪಮಟ್ಟಿಗೆ ಕಡಿತಗೊಳಿಸಿದ್ದ ಕೇಂದ್ರ ಸರ್ಕಾರ, ಗುರುವಾರ ಹೆಚ್ಚಿಸಿದೆ. ಸ್ಥಳೀಯವಾಗಿ ಉತ್ಪಾದಿಸಲಾದ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆ (ವಿಂಡ್‌ಫಾಲ್‌ ಟ್ಯಾಕ್ಸ್‌) ಪ್ರಮಾಣವನ್ನು ಕಡಿತಗೊಳಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಜೆಟ್ ಇಂಧನದ ಮೇಲಿನ ರಫ್ತು ತೆರಿಗೆಯನ್ನು ಪ್ರತಿ ಲೀಟರ್‌ಗೆ ಶೂನ್ಯದಿಂದ 2ಗೆ ಏರಿಸಲಾಗಿದ್ದರೆ, ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ 5ಯಿಂದ 7ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.


© Copyright 2022, All Rights Reserved Kannada One News