'ಹೆಡ್ ಬುಷ್' ಸಿನಿಮಾದ ಪ್ರದರ್ಶನಕ್ಕೆ ಅಡ್ಡಿ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Related Articles

ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ: ಅಮೀರ್ ಖಾನ್

‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನ.25ಕ್ಕೆ ಬಿಡುಗಡೆ

ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ವೀರ ದಾಸ್ ಅವರ ಬೆಂಗಳೂರು ಶೋ ರದ್ದಾದ ಬಳಿಕ ಕೋಲ್ಕತ್ತಾಗೆ ಆಹ್ವಾನಿಸಿದ ಟಿಎಂಸಿ

ʼದಿ ಕೇರಳ ಸ್ಟೋರಿʼ ಸಿನಿಮಾ: ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

ಹಿರಿಯ ನಟ ಟಿ.ಎಸ್. ಲೋಹಿತಾಶ್ವ ನಿಧನ

ನಾಳೆ ́ಬೈ2 ಕಾಫಿ́ ನಾಟಕ ಪ್ರದರ್ಶನ

ಶಾಲಾ ಮಕ್ಕಳಿಗೆ 'ಗಂಧದ ಗುಡಿ' ಉಚಿತ ಪ್ರದರ್ಶನ ನೀಡಲು ಮನವಿ

‘ಉತ್ತರಕಾಂಡ’ ಸಿನೆಮಾದಲ್ಲಿ ಧನಂಜಯ್‌–ರಮ್ಯಾ ಜೋಡಿ

ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲುವ ಸಾಮರ್ಥ್ಯ ನನಗಿದೆ. ಆದರೆ, ನನಗೆ ಆ ಆಸೆ ಇರಲಿಲ್ಲ: ಝೈದ್ ಖಾನ್

'ಹೆಡ್ ಬುಷ್' ಸಿನಿಮಾದ ಪ್ರದರ್ಶನಕ್ಕೆ ಅಡ್ಡಿ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Updated : 29.10.2022

ಡಾಲಿ ಧನಂಜಯ್ ರವರು ಉದಯೋನ್ಮುಖ ನಟ. ಅವರ ಬೆಳವಣಿಗೆಯನ್ನು ಸಹಿಸಲಾರದ ಕೆಲವು ಕಿಡಿಗೇಡಿಗಳು ಅವರ 'ಹೆಡ್ ಬುಷ್' ಸಿನಿಮಾದ ಪ್ರದರ್ಶನಕ್ಕೆ ಅಡ್ಡಿಪಡಿಸಿ, ಅವಮಾನಿಸುತ್ತಿದ್ದಾರೆ. ಕಿಡಿಗೇಡಿಗಳು ಕೂಡಲೇ ಧನಂಜಯ್‌ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಧನಂಜಯ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. 

ತಿಪಟೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಮಾತನಾಡಿದ ಯುವ ಮುಖಂಡ ಹರೀಶ್ ಯಗಚೀಕಟ್ಟೆ, "ಧನಂಜಯ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸಿರುವುದು ಖಂಡನೀಯ. ಧನಂಜಯ್ ವಿರುದ್ಧ ಪಿತೂರಿಗಳು ನಡೆಯುತ್ತಿವೆ. ಇಂತಹ ಕುತಂತ್ರಗಳು ಮುಂದುವರೆದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು. 

"ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಅಭಿಮಾನಿ ಅನುಷ್ ಶಿವಯ್ಯ ಒತ್ತಾಯಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಡಾಲಿ ಧನಂಜಯ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಭರತ್, ಹೇಮೇಶ್, ಹರೀಶ್ ಯಗಚೀಕಟ್ಟೆ, ಮೋಹನ್ ಬಾಬು, ಸುದರ್ಶನ್, ಚಂದನ್, ಅನುಶ್ ಶಿವಯ್ಯ, ಕಾರ್ತಿಕ್ ಸೇರಿದಂತೆ ಅನೇಕರು ಇದ್ದರು.

© Copyright 2022, All Rights Reserved Kannada One News