ಬಿಜೆಪಿಯಲ್ಲಿ ಶಾಸಕರೇ ಕಣ್ಣೀರಿಡುವ ಸ್ಥಿತಿ ಸೃಷ್ಟಿಯಾಗಿದೆ: ಕುಮಾರಸ್ವಾಮಿ

ಬಿಜೆಪಿಯಲ್ಲಿ ಶಾಸಕರೇ ಕಣ್ಣೀರಿಡುವ ಸ್ಥಿತಿ ಸೃಷ್ಟಿಯಾಗಿದೆ: ಕುಮಾರಸ್ವಾಮಿ

Updated : 19.11.2022

ಮೈಸೂರು: ಬಿಜೆಪಿಯಲ್ಲಿ ಶಾಸಕರೇ ಕಣ್ಣೀರಿಡುವ ಸ್ಥಿತಿ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಮದಾಸ್-ಪ್ರತಾಪ್ ಸಿಂಹ ಗುಂಬಜ್ ಫೈಟ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಬಿಜೆಪಿಯಲ್ಲಿ ಶಾಸಕರೇ ಕಣ್ಣೀರಿಡುವ ಸ್ಥಿತಿ ಸೃಷ್ಟಿಯಾಗಿದೆ ಎಂದರೆ ಇನ್ನು ಜನಸಾಮಾನ್ಯರ ಅವಸ್ಥೆ ಏನಾಗಿರಬಹುದು ಎಂದು ಪ್ರಶ್ನಿಸಿದ್ದಲ್ಲದೆ, ಸಂಸದರು ಕಣ್ಣೀರು ಹಾಕಿಸಿರೋದನ್ನು ನೋಡಿದ್ದೇನೆ, ಇನ್ನು ಬಿಜೆಪಿ ನಂಬಿದ ಜನರ ಗತಿ ಏನು..?. ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ ಆದರೆ ಜನರಿಗೆ ನೆರಳು ಕೊಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


© Copyright 2022, All Rights Reserved Kannada One News