ಹಾಸನದ ಕಲಾಭವನದಲ್ಲಿ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ರಂಗಪ್ರಯೋಗ

ಹಾಸನದ ಕಲಾಭವನದಲ್ಲಿ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ರಂಗಪ್ರಯೋಗ

Updated : 24.07.2022

ಹಾಸನ: ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ರಂಗಪ್ರಯೋಗವು ದಿನಾಂಕ 25-07-2022ರ  ಸೋಮವಾರ ಸಂಜೆ 6-30ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ.

ಪೂಜಾ ರಘು ಅವರು ಅಭಿನಯಿಸಿರುವ ಈ ಏಕವ್ಯಕ್ತಿ ರಂಗಪ್ರಯೋಗವು ‘ರಂಗಹೃದಯ’ ಪ್ರಸ್ತುತಿ ಪಡಿಸುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀವಿದ್ಯಾ ಫೌಂಡೇಷನ್ ಸಹಯೋಗದೊಂದಿಗೆ ಪ್ರದರ್ಶನಗೊಳ್ಳಲಿದೆ.

“ರಂಗಹೃದಯ" ಅತೀವವಾದ ನಾಟಕ ಸೆಳೆತದಿಂದಾಗಿ ಹುಟ್ಟಿಕೊಂಡ ತಂಡ, ಹಾಸನದ ರಂಗಭೂಮಿಯನ್ನು ಚೇತೋಹಾರಿಯಾಗಿ ಇಟ್ಟುಕೊಳ್ಳುವಲ್ಲಿ ರಂಗಹೃದಯ ತಂಡದ ಪಾತ್ರ ಪ್ರಮುಖವಾದದ್ದು.

ಅಜೇಯಸಿಂಹ ನಿರ್ದೇಶನದಲ್ಲಿ "ಆಷಾಢದ ಒಂದು ದಿನ", ವಿ.ಆರ್‌.ಕಾರ್ಪೆಂಟರ್ ನಿರ್ದೇಶನದಲ್ಲಿ “ಒಂದು ಶಹರದ ಸುತ್ತ" ಉಲಿವಾಲ ಮೋಹನ್ ಕುಮಾರ್ ನಿರ್ದೇಶನದಲ್ಲಿ "ನಿಲುವಂಗಿಯ ಕನಸು". ರಂಗಪ್ರಯೋಗಗಳು ಹಾಸನದಲ್ಲೇ ಅಲ್ಲದೆ ನಾಡಿನ ನಾನಾ ಕಡೆ ಪ್ರದರ್ಶನ ನೀಡಿ ತಮ್ಮ ಛಾಪನ್ನು ಮೂಡಿಸಿವೆ. ಈ ತಂಡದಲ್ಲಿ ರಂಗಾಸಕ್ತರಿದ್ದಾರೆ. ಆದರೆ ಯಾವುದೇ ಸಂಸ್ಥೆಯಿಂದ ತರಬೇತಿ ಪಡೆದವರಿಲ್ಲ. ಈ ಕಾರಣಕ್ಕೆ ರಂಗಭೂಮಿಗೆ ತನ್ನದೇ ನೋಟದ ಕಾಣೆಯನ್ನು ನೀಡಲು ರಂಗಹೃದಯಕ್ಕೆ ಸಾಧ್ಯವಾಗಿದೆ. ಹವ್ಯಾಸಿ ತಂಡಕ್ಕೆ ಇರಬೇಕಾದ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಲೇ ಹವ್ಯಾಸದ ಮಹತ್ವವನ್ನು ಅದರ ಗುಣಮಟ್ಟದ ಮೂಲಕ ತೋರಿಸಿಕೊಟ್ಟ ಮಹತ್ವದ ರಂಗತಂಡ "ರಂಗಹೃದಯ"

ಈಗ ತಾಯಿಯಾಗುವುದೆಂದರ” ಮೂಲಕ ಹಾಸನದಲ್ಲಿ ಮೊಟ್ಟಮೊದಲ ಬಾರಿಗೆ ಏಕವ್ಯಕ್ತಿ ರಂಗಪ್ರಯೋಗವನ್ನು ರಂಗರೂಪಕ್ಕೆ ತರುತ್ತಿದೆ. ಇದು ಹಾಸನದ ಮಟ್ಟಿಗೆ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಹಲವಾರು ರಂಗಕರ್ಮಿಗಳಿಂದ, ಹಲವಾರು ರಂಗಾಸಕ್ತರಿಂದ ತಾನೂ ಕಲಿಯುತ್ತಾ ಇತರೆ ರಂಗತಂಡಗಳಿಗೆ ಮಾದರಿಯಾಗುತ್ತಾ ತನ್ನ ನಡೆಯನ್ನು ರೂಪಿಸಿಕೊಂಡಿದೆ.


© Copyright 2022, All Rights Reserved Kannada One News