Flash News:
ಮಾನವೀಯತೆಯಿಂದ ಉಕ್ರೇನ್ ತೊರೆಯಲು ನಿರಾಕರಿಸಿದ ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ

ಮಾನವೀಯತೆಯಿಂದ ಉಕ್ರೇನ್ ತೊರೆಯಲು ನಿರಾಕರಿಸಿದ ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ

Updated : 27.02.2022

ಚಂಡಿಗಡ: ಉಕ್ರೇನ್‌ನಲ್ಲಿ ಯುದ್ಧ ಪೀಡಿತ ದೇಶದಿಂದ ತೆರವುಗೊಳ್ಳುವ ಅವಕಾಶ ಸಿಕ್ಕರೂ  ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹರ್ಯಾಣದ ವಿದ್ಯಾರ್ಥಿನಿಯೊಬ್ಬಳು ಆ ದೇಶವನ್ನು ತೊರೆಯಲು ನಿರಾಕರಿದ್ದಾಳೆ. ಕಾರಣವೇನು ಗೊತ್ತೆ? ಮಾನವೀಯತೆ!
ಈ ಯುವತಿ ಯುದ್ಧದ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು, ಸಹಾನುಭೂತಿಯ ಸೇವೆಗಳನ್ನು ಮಾಡುತ್ತಿದ್ದಾಳೆ ಎಂದು tribuneindia.com ವರದಿ ಮಾಡಿದೆ.

ವಿದ್ಯಾರ್ಥಿನಿಯು ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದ ಮನೆಯ ಮಾಲಕರು ರಶ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ತನ್ನ ದೇಶಕ್ಕೆ ಸೇವೆ ಸಲ್ಲಿಸಲು ಉಕ್ರೇನಿಯನ್ ಸೈನ್ಯಕ್ಕೆ ಸ್ವಯಂಪ್ರೇರಣೆಯಿಂದ ಸೇರಿದ್ದಾರೆ. ಭಾರತದ ವಿದ್ಯಾರ್ಥಿನಿ ತನ್ನ ಮೂರು ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಮನೆಯ ಮಾಲಕರ ಪತ್ನಿಗೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದಾಳೆ  ಎಂದು ವರದಿಯಾಗಿದೆ.

ನಾನು ಬದುಕಬಹುದು ಅಥವಾ ಬದುಕದಿರಬಹುದು, ಆದರೆ ನಾನು ಈ ಮಕ್ಕಳನ್ನು ಹಾಗೂ ಅವರ ತಾಯಿಯನ್ನು ಇಂತಹ ಪರಿಸ್ಥಿತಿಯಲ್ಲಿ ಬಿಡುವುದಿಲ್ಲ ಎಂದು ಹರ್ಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ಮೂಲದ ನೇಹಾ ಶಿಕ್ಷಕಿಯಾಗಿರುವ ತನ್ನ ತಾಯಿಗೆ ಹೇಳಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಭಾರತೀಯ ಸೇನೆಯಲ್ಲಿದ್ದ ತಂದೆಯನ್ನು ನೇಹಾ ಕಳೆದುಕೊಂಡಿದ್ದರು. ಕಳೆದ ವರ್ಷ ಅವರು ಉಕ್ರೇನ್‌ನ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು.

© Copyright 2022, All Rights Reserved Kannada One News