ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

Updated : 30.08.2022

ಕರ್ನಾಟಕದ ರಾಜಕಾರಣದಲ್ಲಿ ಜನಸೇವೆ ಎಂಬ ಪದವು ಈಗ ಅರ್ಥ ಕಳೆದುಕೊಂಡಿದೆ. ಚುನಾಯಿತ ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ನಡುವಿನ ಒಡನಾಟವು ಕಡಿಮೆಯಾಗುತ್ತಿರುವುದು ಬಹುತೇಕರ ಅನುಭವಕ್ಕೂ ಬಂದಿರುತ್ತದೆ.

ಆದರೆ ಇದೇ ನಮ್ಮ ಕರ್ನಾಟಕದಲ್ಲಿ, ವಿಭಿನ್ನ ಸರಳ ವ್ಯಕ್ತಿತ್ವದ ಟಿ.ಆರ್. ಶಾಮಣ್ಣ ಎಂಬ ನಾಯಕರಿದ್ದರು ಎಂಬುದನ್ನು ಹಳಬರು ಮರೆಯುತ್ತಿದ್ದಾರೆ. ಹೊಸಬರು, ಅಂದರೆ ಈಗಿನ ಯುವಪೀಳಿಗೆಯವರಲ್ಲಿ ಶಾಮಣ್ಣನವರ ಬಗ್ಗೆ ಆರಿವಿರುವವರ ಸಂಖ್ಯೆಯೂ ಕಡಿಮೆ.
 ಬೆಂಗಳೂರಿನ ಕಾರ್ಪೋರೇಟರ್ ಆಗಿ, ಶಾಸಕರಾಗಿ ನಂತರ ತಮ್ಮ ರಾಜಕೀಯ ಬದುಕಿನ ಉತ್ತುಂಗ‌  ಸಾಧನೆ‌‌ಯೆಂಬಂತೆ 1980-84 ರ ಏಳನೇ ಲೋಕಸಭೆಯ ಸದಸ್ಯರಾಗಿಯೂ ಶಾಮಣ್ಣನವರನ್ನು ಬೆಂಗಳೂರು ದಕ್ಷಿಣ ಸಂಸತ್ ಕ್ಷೇತ್ರದ‌ ಮತದಾರರು ಆಯ್ಕೆ ಮಾಡಿ ಕಳಿಸಿದ್ದರು.
ಹಣ‌ ಹಂಚದ, ಜಾತಿ ಕಾರ್ಡ್ ಬಳಸದ, ಸರಳ‌  ಸಜ್ಜನ ಮನುಷ್ಯನಾಗಿ ಟಿ.ಆರ್.ಶಾಮಣ್ಣ ಬದುಕಿ ಬಾಳಿದರು.ಬೆಂಗಳೂರು ವಾಸಿಗಳು ಬಳಸುತ್ತಿದ್ದ ಸೈಕಲ್ ಗಳಿಗೆ ತೆರಿಗೆ ಹಾಕಲು ಕಾರ್ಪೋರೇಷನ್ನಿನವರು ಸೆಸ್ ವಿಧಾನ ಕಂಡುಕೊಂಡರು.
ಸಹಜವಾಗಿಯೇ ಜನಸಾಮಾನ್ಯರಿಗೆ  ಸೈಕಲ್ ತೆರಿಗೆಯ ರೂಪದ ಈ ಹಣ  ವಸೂಲಿ ಇಷ್ಟವಾಗಲಿಲ್ಲ, ಆ ವಿವಾದದಲ್ಲಿ ಜನರ ಪರ ನಿಂತ‌  ಶಾಮಣ್ಣ ನಂತರ ಬೆಂಗಳೂರು ನಗರಪಾಲಿಕೆ ತನ್ನ ಆ ವಸೂಲಿ ಧೋರಣೆಯ ಹಿಂಪಡೆಯುವಂತೆ ಮಾಡಿದ್ದರು.ಜನನಾಯಕ ಶಾಮಣ್ಣನವರು ಕುಡಿಯುವ ನೀರು, ರಸ್ತೆ, ಆಸ್ತಿ ತೆರಿಗೆ ಮುಂತಾದ ವಿಚಾರಗಳಲ್ಲಿ ಗಮನ ಹರಿಸುತ್ತಾ ಸರ್ಕಾರವು ಸದಾ ಕಾಲ ಜನರ ಒಳಿತಿನ ಕೆಲಸ ಮಾಡುವಂತೆ ನಿಗಾ ವಹಿಸುತ್ತಿದ್ದರು. ಚುನಾವಣೆ ಗೆಲ್ಲಲು ಹಣ, ಮದ್ಯ, ಜಾತಿ ಗುಂಪು ಇವುಗಳ  ಬದಲಾಗಿ ಜನರೇ ತಮ್ಮ ಅರ್ಹ  ನಾಯಕನನ್ನು ಆರಿಸಿಕೊಳ್ಳುವಂತ ವಾತಾವರಣವು ಆಗ ಇತ್ತು, ಶಾಮಣ್ಣನವರ ಪಾರದರ್ಶಕ ಪ್ರಾಮಾಣಿಕ ವ್ಯಕ್ತಿತ್ವವೇ ಅದಕ್ಕೆ ಕಾರಣವಾಗಿತ್ತು.

ಶಾಮಣ್ಣನವರ ಒಡನಾಡಿಗಳು ಅನೇಕರು ಈಗಲೂ ಇದ್ದಾರೆ. ಹಲವು ದಶಕಗಳ ಕಾಲ ಜೊತೆಗಿದ್ದ  ಚಾಮರಾಜಪೇಟೆಯ ಶಿವಣ್ಣನವರು ನಂದಿನಿ ಬೂತ್ ಹೊಂದಿದ್ದಾರೆ. ತಮ್ಮ ಬದುಕು ಕಟ್ಟಿಕೊಳ್ಳಲು ಶಾಮಣ್ಣನವರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಶಿವಣ್ಣನವರು ಹೇಳುವುದೇನೆಂದರೆ

' ರಾಜಕಾರಣಿಗಳು ಜನರೊಂದಿಗೆ ಬೆರೆತು ಅವರ ಕಷ್ಟ-ಸುಖಗಳಲ್ಲಿ ಭಾಗಿಯಾದರೆ ಜನ ಅಂತವರ ಕೈ ಬಿಡುವುದಿಲ್ಲ, ಶಾಮಣ್ಣನವರ ಬದುಕೇ ಅದಕ್ಕೆ ಸಾಕ್ಷಿ '

ಟಿ.ಆರ್. ಶಾಮಣ್ಣ ಕರ್ನಾಟಕ ರೂಪಿಸಿದ ಉತ್ತಮ ಜನನಾಯಕರಲ್ಲಿ ಒಬ್ಬರು.
ಅವರ ನಿಧನದ  ಮುವತ್ತ ಮೂರನೇ ವರ್ಷದ ಈ ಸಂದರ್ಭವು ಅವರ ಜೀವನ ಮೌಲ್ಯಗಳನ್ನು ಸ್ಮರಿಸುವ ಸಂದರ್ಭವೂ ಆಗಬೇಕಿದೆ

-ಹರೀಶ್ ಕಳಸೆ
ಬೆಂಗಳೂರು

© Copyright 2022, All Rights Reserved Kannada One News