ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

Updated : 06.09.2022

'ಗೌರಿ ಲಂಕೇಶ್ ಅವರನ್ನು ಕೊಂದವರು ಜೈಲಿನಲ್ಲಿದ್ದಾರೆ, ನೊಂದವರು ಇಲ್ಲಿ ಸೇರಿದ್ದೇವೆ. ಆದರೆ ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ' ಎಂದು ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿದ್ದಾರೆ.

ಸನಾತನವಾದಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಅಗಲಿ ಐದು ವರ್ಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ 'ಗೌರಿ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗೌರಿ, ತೀಸ್ತಾ ಮತ್ತು ಅರುಂಧತಿ ರಾಯ್ ಅವರನ್ನು ಇಂದು ನೋಡಿದೆ. ನನ್ನ ಇಂದಿನ ಪ್ರಯಾಣ ಬಹಳ ಚೆನ್ನಾಗಿತ್ತು. ಗೌರಿ ಲಂಕೇಶ್ ಅವರ ಸಮಾಧಿ ನೋಡುವುದಕ್ಕೆ ಹೋದಾಗ ಚಾಮರಾಜಪೇಟೆಯ ಈದ್ಗಾ ಮೈದಾನ ಗಮನಿಸಿದೆ. ಅಲ್ಲಿ ಪೊಲೀಸರ ಕಾವಲಿತ್ತು. ಇಂತಹ ವಾತಾವರಣ ನಮಗೆ ಬರುತ್ತದೆ ಎಂಬುವುದರ ಎಚ್ಚರಿಕೆ ಧ್ವನಿ ಗೌರಿಯಾಗಿದ್ದರು. ಅತ್ಯಾಚಾರ ಮಾಡುವವರಿಗೆ ನಾವು ಇದ್ದೇವೆ ಇನ್ನೂ ಮಾಡಿ ಎಂಬ ಸಂದೇಶ ಬಿಲ್ಕೀಸ್ ಬಾನು ಪ್ರಕರಣದಲ್ಲಿ ನಡೆದಿದೆ. ಎಲ್ಲ ಹೋರಾಟಗಳಲ್ಲಿ ಭಾಗವಹಿಸಿರುವ ತೀಸ್ತಾ ಸೆಟಲ್ವಾಡ್ ಬಂಧನದಲ್ಲಿದ್ದರು. ಅವರು ಜೈಲಿನಿಂದ ಹೊರಗಡೆ ಬಂದ ಮೇಲೆ ಹತಾಶರಾಗಿ ಮಾತನಾಡಿಲ್ಲ. ಈ ಮೂವರು ಹೆಣ್ಣು ಮಕ್ಕಳು ನಮಗೆ ಆಶಾದಾಯಕವಾಗಿ ಕಾಣಿಸುತ್ತಾರೆ. ಇವರನ್ನು ನೋಡಿ ನಾವು ಹೋರಾಟದ ಕಿಚ್ಚು ಪಡೆದುಕೊಳ್ಳಬೇಕು ಎಂದು ಪ್ರಕಾಶ್ ರಾಜ್ ಹೇಳಿದರು.

ನಾವು ನಮ್ಮ ಸ್ವಪ್ರತಿಷ್ಠೆ ಮರೆತು ಗೌರಿ ಮತ್ತೂ ಇತರರು ತೋರಿಸಿಕೊಟ್ಟ ಹೋರಾಟದ ಆಶಯಗಳನ್ನು ಮುಂದುವರೆಸಿಕೊಂಡು ಹೋಗಬೇಕು. ನಮ್ಮಲ್ಲಿ ಕೆಲವರು ಅವರ ಹೋರಾಟವನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಅವರ ಬಗ್ಗೆ ನನಗೆ ಗೊತ್ತಿದೆ. ಅದಕ್ಕೆ ನಾನು ಈಗ ದೇಶ ಸುತ್ತುತ್ತಾ ಜನರ ನಡುವೆ ಹೋಗುತ್ತಿದ್ದೇನೆ. ಬದಲಾವಣೆಗೆ ಸ್ವಲ್ಪ ಸಮಯ ಮತ್ತು ಬದ್ಧತೆ ಬೇಕು ಎಂದು ಹೇಳಿದರು.

ಈ ಸಭಾಂಗಣ ತುಂಬಿರುವುದು ಸಂತಸವಾಗುತ್ತಿದೆ. ಐದು ವರ್ಷದ ಹಿಂದೆ ಈ ಸಮಯದಲ್ಲಿ ಆಕೆ ಇನ್ನೂ ಸತ್ತಿರ್ಲಿಲ್ಲ. ಪ್ರತಿ ವರ್ಷ ಆಕೆಯ ನೆನಪಿನ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ಆಕೆ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು ಎಂಬ ಕುತೂಹಲ ಇದೆ. ಶಿವಮೊಗ್ಗ ಮತ್ತೊಂದು ಮಂಗಳೂರು ಆಗುತ್ತಿದೆ. ಅಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಗೌರಿ ಏನು ಹೇಳುತ್ತಿದ್ದಳೋ ಎಂಬ ಕುತೂಹಲ ಇದೆ. ಶಾಂತಿಯುತವಾಗಿ ಇದ್ದ ನಮ್ಮ ಊರು ಈಗ ನೆಮ್ಮದಿ ಕಳೆದುಕೊಂಡಿದೆ. ಅರುಂಧತಿ ಅವರ ಮೊದಲ ಪುಸ್ತಕ ಕನ್ನಡಲ್ಲಿ ಪ್ರಕಟ ಮಾಡಿದ್ದು ಗೌರಿ ಲಂಕೇಶ್. ಅರುಂಧತಿ ಇಲ್ಲಿ ಬಂದಿದ್ದು ನನಗೆ ಖುಷಿ ಆಯಿತು ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹೇಳಿದರು.

ಪ್ರೊ ಬಿ ಎ ಶ್ರೀಧರ್ ಸಮಾರೋಪ ಭಾಷಣ ಮಾಡಿದರು. ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬರಹಗಾರ್ತಿ ಅರುಂಧತಿ ರಾಯ್, ಹಿರಿಯ ಪತ್ರಕರ್ತರಾದ ಡಿ ಉಮಾಪತಿ ಇದ್ದರು.

© Copyright 2022, All Rights Reserved Kannada One News