ಗಾಂಧಿಯ ಆತ್ಮ ಪಿಸುಗುಟ್ಟಿತು: ಹುಲಿಕಟ್ಟೆ ಚನ್ನಬಸಪ್ಪ ಅವರ ಕವಿತೆ

ಗಾಂಧಿಯ ಆತ್ಮ ಪಿಸುಗುಟ್ಟಿತು: ಹುಲಿಕಟ್ಟೆ ಚನ್ನಬಸಪ್ಪ ಅವರ ಕವಿತೆ

Updated : 04.09.2022

ದೇಶದ ತುಂಬೆಲ್ಲಾ
ದ್ವೇಷ ಹರಡಿ
ಕಲ್ಲು ಮಣ್ಣಿನ
ಗುಡಿ ಕಟ್ಟಲು
ಹೃದಯ ಮಂದಿರಗಳ ಒಡೆದು
ಕೂಗಿದರು ಅವರು
ಜೈ ಶ್ರೀರಾಮ್
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ,ರಾಮ್

ದನಗಳಿಗಾಗಿ
ಜನಗಳ ಕೊಂದು
ರಕ್ತ ಸಿಕ್ತ ಕೈಗಳ ಮೇಲೆತ್ತಿ
ಕೂಗಿದರು ಅವರು
ಜೈ ಶ್ರೀ ರಾಮ್
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ರಾಮ್

ಹಂತಕನಿಗೊಂದು

ಗುಡಿಕಟ್ಟಿ
ಗಂಟೆ ಬಾರಿಸುತ್ತ
ಕೂಗಿದರು ಅವರು
ಜೈ ಶ್ರೀರಾಮ
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ರಾಮ್

ಖಾವಿಯೊಳಗೆ
ಕಾಮ ಹರಿದಾಡಿದಾಗ
ಬಡ ಸೀತೆಯರ
ಮಾನಭಂಗ
ಆಗಲೂ
ಕೂಗಿದರು ಅವರು
ಜೈ ಶ್ರೀರಾಮ್
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ರಾಮ್

~ಹುಲಿಕಟ್ಟಿ  ಚನ್ನಬಸಪ್ಪ

© Copyright 2022, All Rights Reserved Kannada One News