ಶಾಲಾ ಮಕ್ಕಳಿಗೆ 'ಗಂಧದ ಗುಡಿ' ಉಚಿತ ಪ್ರದರ್ಶನ ನೀಡಲು ಮನವಿ

Related Articles

ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ: ಅಮೀರ್ ಖಾನ್

‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನ.25ಕ್ಕೆ ಬಿಡುಗಡೆ

ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ವೀರ ದಾಸ್ ಅವರ ಬೆಂಗಳೂರು ಶೋ ರದ್ದಾದ ಬಳಿಕ ಕೋಲ್ಕತ್ತಾಗೆ ಆಹ್ವಾನಿಸಿದ ಟಿಎಂಸಿ

ʼದಿ ಕೇರಳ ಸ್ಟೋರಿʼ ಸಿನಿಮಾ: ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

ಹಿರಿಯ ನಟ ಟಿ.ಎಸ್. ಲೋಹಿತಾಶ್ವ ನಿಧನ

ನಾಳೆ ́ಬೈ2 ಕಾಫಿ́ ನಾಟಕ ಪ್ರದರ್ಶನ

‘ಉತ್ತರಕಾಂಡ’ ಸಿನೆಮಾದಲ್ಲಿ ಧನಂಜಯ್‌–ರಮ್ಯಾ ಜೋಡಿ

ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲುವ ಸಾಮರ್ಥ್ಯ ನನಗಿದೆ. ಆದರೆ, ನನಗೆ ಆ ಆಸೆ ಇರಲಿಲ್ಲ: ಝೈದ್ ಖಾನ್

‘ಬನಾರಸ್‌’: ರಾಜ್ಯದ 125 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ

ಶಾಲಾ ಮಕ್ಕಳಿಗೆ 'ಗಂಧದ ಗುಡಿ' ಉಚಿತ ಪ್ರದರ್ಶನ ನೀಡಲು ಮನವಿ

Updated : 08.11.2022

ಕನ್ನಡದ ಮೇರು ನಟ ಡಾ. ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ 'ಗಂಧದ ಗುಡಿ' ಯನ್ನು ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರದರ್ಶಿಸುವಂತೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

'ಗಂಧದ ಗುಡಿ' ಅದ್ಭುತ ಚಿತ್ರವಾಗಿದ್ದು, ಈಗಾಗಲೇ ಹೆಚ್ಚು ದಾಖಲೆ ಮಾಡಿದೆ. ಕರ್ನಾಟಕದ ಜೀವ ವೈವಿಧ್ಯತೆಯನ್ನು ತೋರುತ್ತದೆ; ಇಂತಹ ಚಿತ್ರಗಳನ್ನು ಶಾಲಾ ಮಕ್ಕಳು ವೀಕ್ಷಿಸುವುದು ಅವರಿಗೆ ಉಪಯುಕ್ತವಾಗಿರುತ್ತೆ. ಹೀಗಾಗಿ, ಮಕ್ಕಳಿಗೆ ಆ ಚಿತ್ರವನ್ನು ಉಚಿತವಾಗಿ ನೋಡಲು ಅವಕಾಶ ಮಾಡಿಕೊಡಬೇಕು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮನವಿ ಪತ್ರ ಬರೆದಿದ್ದಾರೆ.

'ಗಂಧದ ಗುಡಿ'ಯನ್ನು ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರದರ್ಶನ ಮಾಡಲು ವ್ಯವಸ್ಥೆ ಮಾಡುವ ಮೂಲಕ ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ, ಪ್ಲಾಸ್ಟಿಕ್ ತಡೆಗಟ್ಟುವ, ನೀರು ಮಿತವ್ಯಯದ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

"ರಾಜ್ಯದ ಪ್ರತೀ ಹಳ್ಳಿಯಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಇರುವ ಎಲ್ಲಾ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ 'ಗಂಧದ ಗುಡಿ’ಯ ಉಚಿತ ಪ್ರದರ್ಶನ ನೀಡುವ ಬಗ್ಗೆ ರಾಜ್ಯ ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು" ಎಂದು ಎನ್.ಆರ್. ರಮೇಶ್ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. 


© Copyright 2022, All Rights Reserved Kannada One News