ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಹಾಡು ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಹಾಡು ಬಿಡುಗಡೆ ಮಾಡಿದ ಕಿಚ್ಚ ಸುದೀಪ್

Updated : 05.08.2022

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಾಳಿಪಟ 2 ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದ್ದು, ಪ್ರಾಯಶಃ ಹೆಸರಿನೊಂದಿಗೆ ಬಂದಿರುವ ಈ ಗೀತೆಯನ್ನು ಕಿಚ್ಚ ಸುದೀಪ್ ಇಂದು ಬಿಡುಗಡೆ ಮಾಡಿದ್ದಾರೆ. ಹಾಡಿನ ಕುರಿತು ಮಾತನಾಡಿ, ಒಂದೊಳ್ಳೆ ಸಿನಿಮಾ ಇದಾಗಲಿದೆ ಎಂದು ಶುಭ ಹಾರೈಸಿದ್ದಾರೆ.

ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಈ ಹಿಂದೆ ಗಾಳಿಪಟ ಸಿನಿಮಾ  ರಿಲೀಸ್ ಆಗಿತ್ತು. ಆ ಗಾಳಿಪಟದಲ್ಲಿ ಗಣೇಶ್, ದಿಗಂತ್ ಮತ್ತು ಗಾಯಕ ರಾಜೇಶ್ ಕೃಷ್ಣನ್ ತಾರಾ ಬಳಗದಲ್ಲಿದ್ದರು. ಈ ಬಾರಿ ರಾಜೇಶ್ ಕೃಷ್ಣನ್ ಬದಲು, ಪವನ್ ಕುಮಾರ್ ಬಂದಿದ್ದಾರೆ. ಉಳಿದಂತೆ ಗಣೇಶ್ ಮತ್ತು ದಿಗಂತ್ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.  


© Copyright 2022, All Rights Reserved Kannada One News