ಫುಡ್ ಪಾಯಿಸನ್‌ ಗೆ ಇಲ್ಲಿದೆ ಮನೆ ಮದ್ದು

ಫುಡ್ ಪಾಯಿಸನ್‌ ಗೆ ಇಲ್ಲಿದೆ ಮನೆ ಮದ್ದು

Updated : 28.08.2022

 ಅನಾರೋಗ್ಯಕರವಾದ ಆಹಾರ ಹಾಗೂ ಜೀವನಶೈಲಿಯಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಾಗುತ್ತೆ ಇದರಲ್ಲಿ ಫುಡ್ ಪಾಯಿಸನ್ ಕೂಡ ಒಂದು. ಮನೆ ಆಹಾರಕ್ಕಿಂತ ಹೆಚ್ಚಾಗಿ ಹೋಟೆಲ್ ಗಳಲ್ಲಿ ಅಥವಾ ರಸ್ತೆ ಬದಿಯ ಆಹಾರ ಮಳಿಗೆಗಳಲ್ಲಿ ತಿಂದ ಆಹಾರದಿಂದ ಫುಡ್ ಪಾಯ್ಸನ್ ಉಂಟಾಗುತ್ತದೆ. ಅದರ ಪರಿಣಾಮವಾಗಿ ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಸಂಭವಿಸುತ್ತದೆ. ತೀವ್ರತೆ ಹೆಚ್ಚಿದ್ದರೆ ಕೆಲವೊಮ್ಮೆ ಸಾವು ಕೂಡ ಸಂಭವಿಸುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಫಾಸ್ಟ್ ಫುಡ್ ಆಹಾರ ಸೇವನೆಗಿಂತ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸುವುದು ಉತ್ತಮ. ಅದಾಗ್ಯೂ ಹೊರಗಿನ ಆಹಾರ ಸೇವಿಸಿ ಫುಡ್ ಪಾಯಿಸನ್ ಆದರೆ ಅದನ್ನು ಪರಿಹರಿಸಲು ವೈದ್ಯಕೀಯ ಔಷಧಿಯ ಹೊರತಾಗಿ ಕೆಲವೊಂದು ಮನೆ ಮದ್ದುಗಳು ಇಲ್ಲಿವೆ.

1. ಎಳನೀರು
ಫುಡ್ ಪಾಯಿಸನ್ ಲಕ್ಷಣವೆಂದರೆ ವಾಂತಿ ಅಥವಾ ಅತಿಸಾರ. ಇದರಿಂದ ದೇಹದ ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫಾಸ್ಫೇಟ್ ಮತ್ತು ಸೋಡಿಯಂ ಬಿಡುಗಡೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೆಂಗಿನ ನೀರು ಅಥವಾ ಎಳನೀರು ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.


2. ಶುಂಠಿ ಚಹಾ

ಫುಡ್ ಪಾಯಿಸನ್ ಆದಾಗ ಶುಂಠಿ ಚಹಾ ಕುಡಿಯುವುದು ಕೂಡ ಉತ್ತಮ. ಶುಂಠಿಯಲ್ಲಿರುವ ಆಂಟಿಮೈಕ್ರೊಬಿಯಲ್ ಏಜೆಂಟ್‌ಗಳು ಆಹಾರದಿಂದ ಹರಡುವ ರೋಗಕಾರಕಗಳ ವಿರುದ್ಧ ಹೋರಾಡಲು ಮತ್ತು ಚೇತರಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ 2-3 ಬಾರಿ ಶುಂಠಿ ಚಹಾ ಕುಡಿಯಬಹುದು.


3. ಜೀರಿಗೆ ಸೂಪ್

ಬಾಣಲೆಯಲ್ಲಿ ಜೀರಿಗೆಯನ್ನು ಹುರಿದು ಪುಡಿಮಾಡಿ. ಈ ಜೀರಿಗೆ ಪುಡಿಯನ್ನು ನೀವು ಮನೆಯಲ್ಲಿ ತಯಾರಿಸಿದ ಸೂಪ್ಗೆ ಸೇರಿಸಿ ತಿಂದರೆ ಹೊಟ್ಟೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.