ಐದು ವರ್ಷದಲ್ಲಿ 39 ಲಕ್ಷ ಕೋಟಿ ರೂ. ಎಫ್‌ಡಿಐ: ಇವೈ ವರದಿ

ಐದು ವರ್ಷದಲ್ಲಿ 39 ಲಕ್ಷ ಕೋಟಿ ರೂ. ಎಫ್‌ಡಿಐ: ಇವೈ ವರದಿ

Updated : 17.10.2022

ನವದೆಹಲಿ: ಭಾರತದ ಅರ್ಥ ವ್ಯವಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 475 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹ 39.14 ಲಕ್ಷ ಕೋಟಿ) ವಿದೇಶಿ ನೇರ ಬಂಡವಾಳ ಹೂಡಿಕೆ (ಎಪ್‌ಡಿಐ) ಆಕರ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಸಿಐಐ–ಇವೈ ವರದಿ ಹೇಳಿದೆ.

ಕಳೆದ ದಶಕದಲ್ಲಿ ಭಾರತದಲ್ಲಿ ಎಫ್‌ಡಿಐ ಪ್ರಮಾಣವು ನಿರಂತರವಾಗಿ ಹೆಚ್ಚಾಗಿದೆ. ಕೋವಿಡ್‌ ಸಾಂಕ್ರಾಮಿಕ ಹಾಗೂ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ 2021–22ರಲ್ಲಿ ಭಾರತಕ್ಕೆ ಒಟ್ಟು 84.8 ಬಿಲಿಯನ್ ಡಾಲ‌ರ್ (ಅಂದಾಜು ₹ 6.98 ಲಕ್ಷ ಕೋಟಿ) ಎಫ್‌ಡಿಐ ಬಂದಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ (ಎಂಎನ್‌ಸಿ) ಪೈಕಿ ಶೇಕಡ 71ರಷ್ಟು ಕಂಪನಿಗಳು, ತಮ್ಮ ಜಾಗತಿಕ ಚಟುವಟಿಕೆಗಳ ವಿಸ್ತರಣೆಯಲ್ಲಿ ಭಾರತವು ಪ್ರಮುಖ ದೇಶ ಎಂದು ಪರಿಗಣಿಸಿವೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ದೇಶದ ಅರ್ಥ ವ್ಯವಸ್ಥೆಯು ಗಣನೀಯವಾಗಿ ಉತ್ತಮ ಸಾಧನೆ ತೋರಲಿದೆ ಎಂದು ಬಹುತೇಕ ಎಂಎನ್‌ಸಿಗಳು ಭಾವಿಸಿವೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

© Copyright 2022, All Rights Reserved Kannada One News