ಟ್ವಿಟರ್‌ ದಿವಾಳಿಯಾಗುವ ಸಾಧ್ಯತೆ?

ಟ್ವಿಟರ್‌ ದಿವಾಳಿಯಾಗುವ ಸಾಧ್ಯತೆ?

Updated : 11.11.2022

ಸ್ಯಾನ್‌ ಫ್ರಾನ್ಸಿಸ್ಕೋ: ತಮ್ಮ ಒಡೆತನದಲ್ಲಿರುವ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ (Twitter) ದಿವಾಳಿಯಾಗುವ ಸಾಧ್ಯತೆಯಿದೆಯೆನ್ನುವ ಸುಳಿವನ್ನು ಎಲಾನ್‌ ಮಸ್ಕ್‌ (Elon Musk) ಗುರುವಾರ ನೀಡಿದ್ದಾರೆ.

ಟ್ವಿಟರ್‌ ಅನ್ನು ಮಸ್ಕ್‌ ಅವರು 44 ಬಿಲಿಯನ್‌ ಡಾಲರ್‌ಗಳಿಗೆ ಖರೀದಿಸಿರುವುದು ಟ್ವಿಟರ್‌ನ ಆರ್ಥಿಕತೆಯನ್ನು ಗಂಭೀರವಾಗಿಸಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭವಿಷ್ಯದ ನಾಯಕರೆಂದು ತಿಳಿಯಲಾದ ಹಲವಾರು ಹಿರಿಯ ಅಧಿಕಾರಿಗಳು ಟ್ವಿಟರ್‌ ಅನ್ನು ತೊರೆದಿರುವುದೂ ಸಂಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಜಾಹೀರಾತುದಾರರ ಕಳವಳವನ್ನು ದೂರವಾಗಿಸಲು ಮಸ್ಕ್‌ ಅವರು ಬುಧವಾರ ನಡೆಸಿದ್ದ ಟ್ವಿಟರ್‌ ಚಾಟ್‌ ಒಂದನ್ನು ಮಾಡರೇಟ್‌ ಮಾಡಿದ್ದ ಯೋಯೆಲ್‌ ರೊತ್‌ ಮತ್ತು ರಾಬಿನ್‌ ವೀಲರ್‌ ಎಂಬ ಇಬ್ಬರು ಅಧಿಕಾರಿಗಳ ಪೈಕಿ ಒಬ್ಬರು ಸಂಸ್ಥೆಯನ್ನು ತೊರೆದಿದ್ದಾರೆ.

ತಾವು ಸಂಸ್ಥೆಯನ್ನು ತೊರೆದಿರುವ ಕುರಿತು ಗುರುವಾರ ಟ್ವಿಟರ್‌ನ ಮುಖ್ಯ ಸೆಕ್ಯುರಿಟಿ ಆಫೀಸರ್‌ ಲಿಯಾ ಕಿಸ್ಸ್ನೆರ್‌ ಮಾಹಿತಿ ನೀಡಿದ್ದಾರೆ. ಮುಖ್ಯ ಗೌಪ್ಯತೆ ಅಧಿಕಾರಿ ಡೇಮಿಯನ್‌ ಕೀರೆನ್‌ ಹಾಗೂ ಮುಖ್ಯ ಕಂಪ್ಲೈನ್ಸ್‌ ಆಫೀಸರ್‌ ಮರಿಯಾನ್ನೆ ಫೊಗಾರ್ಟಿ ಕೂಡ ರಾಜೀನಾಮೆ


© Copyright 2022, All Rights Reserved Kannada One News