ಟ್ವಿಟರ್ ಆದಾಯದಲ್ಲಿ ಗಣನೀಯ ಕುಸಿತ: ಎಲಾನ್ ಮಸ್ಕ್

ಟ್ವಿಟರ್ ಆದಾಯದಲ್ಲಿ ಗಣನೀಯ ಕುಸಿತ: ಎಲಾನ್ ಮಸ್ಕ್

Updated : 05.11.2022

ಜಾಹೀರಾತುದಾರರು, ಜಾಹೀರಾತನ್ನ ತಡೆ ಹಿಡಿದಿರುವುದರಿಂದ ಟ್ವಿಟರ್ ಆದಾಯದಲ್ಲಿ ಭಾರಿ ಕುಸಿತ ಅನುಭವಿಸಿದೆ ಎಂದು ಟ್ವಿಟರ್‌ ಕಂಪನಿಯ ನೂತನ ಮಾಲಕರಾದ ಎಲಾನ್ ಮಸ್ಕ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಾಹೀರಾತುದಾರರ ಮೇಲೆ ಕೆಲವು ಗುಂಪುಗಳು ಒತ್ತಡ ಹೇರುತ್ತಿವೆ, ಇದೇ ಕಾರಣದಿಂದ ಈ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದ್ದಾರೆ.

ಟ್ವಿಟರ್ ತನ್ನ ಕಂಟೆಂಟ್ ಮಾಡರೇಶನ್ ತಂತ್ರವನ್ನು ಬದಲಾಯಿಸಿಲ್ಲ ಮತ್ತು ಕಂಪನಿಯು ಚಟುವಟಿಕೆದಾರರನ್ನು  ಹಿಡಿದಿಟ್ಟುಕೊಳ್ಳಲು ಎಲ್ಲವನ್ನೂ ಮಾಡಿದ್ದೇವೆ. ಈ ಸನ್ನಿವೇಶ ಅತ್ಯಂತ ಗೊಂದಲಮಯವಾಗಿದೆ ಎಂದಿದ್ದಾರೆ. ಅಲ್ಲದೇ ಎದುರಾಳಿಗಳ ಹೆಸರು ಹೇಳದೇ ಮಾತನಾಡಿರುವ ಅವರು ಅಮೆರಿಕದಲ್ಲಿ ವಾಕ್ ಸ್ವಾತಂತ್ರ್ಯವನ್ನು ನಾಶಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

© Copyright 2022, All Rights Reserved Kannada One News