ಶೇ.75ರಷ್ಟು ಟ್ವಿಟರ್ ಸಿಬ್ಬಂದಿಗೆ ಗೇಟ್‍ಪಾಸ್?

ಶೇ.75ರಷ್ಟು ಟ್ವಿಟರ್ ಸಿಬ್ಬಂದಿಗೆ ಗೇಟ್‍ಪಾಸ್?

Updated : 21.10.2022

ಸ್ಯಾನ್‍ಫ್ರಾನ್ಸಿಸ್ಕೊ: ಟ್ವಿಟರ್ (Twitter) ಖರೀದಿ ಒಪ್ಪಂದದ ಬಗ್ಗೆ ಸಂಭಾವ್ಯ ಹೂಡಿಕೆದಾರರ ಜತೆ ಮಾತನಾಡುವ ವೇಳೆ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk), "ಟ್ವಿಟರ್ ನಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ 7500 ಮಂದಿ ಉದ್ಯೋಗಿಗಳ ಪೈಕಿ ಶೇಕಡ 75ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಲು ಉದ್ದೇಶಿಸಿದ್ದೇನೆ" ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಮಸ್ಕ್ ಜತೆಗಿನ ಸಂದರ್ಶನ ಮತ್ತು ಪೂರಕ ದಾಖಲೆಗಳ ಆಧಾರದಲ್ಲಿ ವಾಷಿಂಗ್ಟನ್ ಪೋಸ್ಟ್ ಈ ವರದಿ ಪ್ರಕಟಿಸಿದೆ. ಯಾರೇ ಈ ಜನಪ್ರಿಯ ಸಾಮಾಜಿಕ ಜಾಲತಾಣದ ಮಾಲಕರಾದರೂ ಉದ್ಯೋಗ ಕಡಿತ ನಿಶ್ಚಿತ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಟ್ವಿಟರ್ ನ ಹಾಲಿ ಆಡಳಿತ ಮಂಡಳಿ ಕಂಪನಿಯ ಮಾಸಿಕ ವೇತನವನ್ನು ಮುಂದಿನ ವರ್ಷದ ಕೊನೆಯ ಒಳಗಾಗಿ 800 ದಶಲಕ್ಷ ಡಾಲರ್ ನಷ್ಟು ಕಡಿತಗೊಳಿಸಲು ಉದ್ದೇಶಿಸಿದೆ. ಇದಕ್ಕಾಗಿ ಶೇಕಡ 25ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಲಿದೆ ಎಂದು ವರದಿ ಅಂದಾಜಿಸಿದೆ.

ಸಾಮಾಜಿಕ ಜಾಲತಾಣ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ, ಸಾಮೂಹಿಕ ವಜಾ ಸಾಧ್ಯತೆ ಇಲ್ಲ ಎಂದು ಹೇಳಿದ್ದರೂ, ಮೂಲಸೌಕರ್ಯ ವೆಚ್ಚ ಕಡಿತದ ನಿಟ್ಟಿನಲ್ಲಿ ಸಿಬ್ಬಂದಿ ಕಡಿತಕ್ಕೆ ವಿಸ್ತೃತ ಯೋಜನೆ ಸಿದ್ಧವಾಗಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ ಎಂದು ವರದಿ ತಿಳಿಸಿದೆ.

© Copyright 2022, All Rights Reserved Kannada One News