ಶಿಕ್ಷಣ ಇಲಾಖೆಯಲ್ಲೂ ಕಮೀಷನ್ ದಂಧೆ: ಮೋದಿಗೆ ಪತ್ರ!

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಶಿಕ್ಷಣ ಇಲಾಖೆಯಲ್ಲೂ ಕಮೀಷನ್ ದಂಧೆ: ಮೋದಿಗೆ ಪತ್ರ!

Updated : 28.08.2022

ಶಿಕ್ಷಣ ಇಲಾಖೆಗೂ ಕಾಲಿಟ್ಟ ಕಮೀಷನ್ ಭೂತ!
ಶಿಕ್ಷಣ ಇಲಾಖೆ ಭ್ರಷ್ಟಾಚಾರದ ವಿರುದ್ಧ ಪಿಎಂಗೆ ದೂರು
ಹಣಕ್ಕೆ ಡಿಮ್ಯಾಂಡ್ ಇಟ್ಟ ಬಿಇಓ ಆಡಿಯೋ ಬಿಡುಗಡೆ!

ಕರ್ನಾಟಕದಲ್ಲಿ ಕಮೀಷನ್ ದಂಧೆ ಜೋರಾಗಿ ಸದ್ದು ಮಾಡ್ತಿದೆ.   ಈ ಬಗ್ಗೆ ಗುತ್ತಿಗೆದಾರರ ಸಂಘ ದೊಡ್ಡ ಮಟ್ಟದಲ್ಲಿ ಆರೋಪ ಮಾಡಿದೆ. ರಾಜ್ಯದಲ್ಲಿ ಸದ್ಯ ಸದ್ದು ಮಾಡ್ತಿರೋ ಕಮೀಷನ್ ದಂಧೆ ದಿನದಿಂದ ದಿನಕ್ಕೆ ಒಂದೊಂದು ಇಲಾಖೆಯನ್ನ ಆವರಿಸಿಕೊಳ್ತಿದೆ. ಮೊನ್ನೆ ಮೊನ್ನೆಯಷ್ಟೇ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಲೋಕೋಪಯೋಗಿ , ಬಿಬಿಎಂಪಿ , ತೋಟಗಾರಿಕೆ ಇಲಾಖೆ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಗೂ ಕಮೀಷನ್ ಭೂತ ಕಾಲಿಟ್ಟಿದ್ದು ಸಚಿವರ ರಾಜೀನಾಮೆಗೆ ಒತ್ತಾಯ ಕೇಳಿ ಬರ್ತಿದೆ. ಇನ್ನು ಈ ಕಮೀಷನ್ ವಿಚಾರ ಕುರಿತ ದಾಖಲೆಗಳು ಪಿಎಂ ಕಚೇರಿಗೂ ತಲುಪಿದೆ. ಏನಿದು ಶಿಕ್ಷಣ ಇಲಾಖೆಯ ಕಮೀಷನ್ ಆರೋಪ ಅನ್ನೊದರ ಡಿಟೆಲ್ಸ್‌ ಇಲ್ಲಿದೆ..

ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಮೀಷನ್ ಆರೋಪ, ಪ್ರತ್ಯಾರೋಪ ಕೇಳಿ ಬರ್ತಿದೆ. ಆ ಇಲಾಖೆಯಲ್ಲಿ ಇಷ್ಟು ಕಮೀಷನ್. ಈ ಇಲಾಖೆಯಲ್ಲಿ ಇಷ್ಟು ಪರ್ಸಂಟೇಜ್ ಅಂತೆಲ್ಲಾ ಆರೋಪವನ್ನ ಗುತ್ತಿಗೆದಾರರು ಮಾಡ್ತಿದ್ದಾರೆ. ಆದರೆ ಇದೀಗ ಶಿಕ್ಷಣ ಇಲಾಖೆಯಲ್ಲೂ  50 ರಷ್ಟು ಕಮೀಷನ್ ದಂಧೆ ನಡೆಯುತ್ತಿದೆ ಅಂತ ಖಾಸಗಿ ಶಾಲಾ ಆಡಳಿತ ಮಂಡಳಿ ರುಪ್ಸಾ ಗಂಭೀರ ಆರೋಪ ಮಾಡಿದೆ. ನಾಗೇಶ್ ಶಿಕ್ಷಣ ಸಚಿವರಾದ ಬಳಿಕ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು, ಇಲಾಖೆಗೆ ಕೆಟ್ಟ ಹೆಸರು ತರೋ ಕೆಲ್ಸ ಮಾಡ್ತಿದ್ದಾರೆ ಅಂತ ರುಪ್ಸಾ ಆರೋಪ ಮಾಡಿದೆ. ಈ ಕುರಿತಂತೆ ಪ್ರಧಾನಿ ಮೋದಿಗೆ ಭ್ರಷ್ಟಾಚಾರದ ಸಮಗ್ರ ವಿವರವನ್ನು ಒಳಗೊಂಡು ದೂರು ನೀಡಿದ್ದಾರೆ.

ರುಪ್ಸಾ ಮಾಡಿರುವ ಆರೋಪಗಳು ಈ ಕೆಳಕಂಡಂತಿವೆ:

- ಶಾಲೆ ಮಾನ್ಯತೆ ನವೀಕರಣ ಮಾಡಲು ಲಕ್ಷಾಂತರ ರೂಪಾಯಿ ಲಂಚ
- ಲಂಚ ಪಡಿಬೇಕು ಅಂತಾನೆ ಹೊಸ ಮಾರ್ಗಗಳ ಅನ್ವೇಷಣೆ
- ಖಖಿಇ ಶುಲ್ಕ ಮರುಪಾವತಿ ಮಾಡೋಕೆ 30% ರಿಂದ 50% ವರೆಗೂ ಲಂಚ
- ಅನ್ಯ ಪಠ್ಯಕ್ರಮ ಅನುಸರಿಸಲು ಓಔಅ ಪಡೆಯೋಕೆ 15 ಲಕ್ಷದವರೆಗೂ ಲಂಚ
- ದಾಖಲೆಗಳ ನೆಪದಲ್ಲಿ ತಿಂಗಳಿಗೊಮ್ಮ ಮಾಮೂಲಿ ವಸೂಲಿ
- ವರ್ಷಕ್ಕೊಮ್ಮೆ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಅಂದ್ರೆ ಲಂಚ
- ಸರ್ಕಾರಿ ಶಾಲೆಗಳನ್ನು ಶಿಕ್ಷಣ ಸಚಿವರು ಮರೆತಿದ್ದಾರೆ
- ಮಕ್ಕಳಿಗೆ ಶೂ ಸಾಕ್ಸ್ ನೀಡಿಲ್ಲ, ಸೈಕಲ್ ನೀಡಿಲ್ಲ
- ಧಾರ್ಮಿಕ ಸೂಕ್ಷ್ಮ ವಿಚಾರಗಳ ವಿಚಾರದಲ್ಲಿ ವಿದ್ಯಾರ್ಥಿಗಳ ಮನಸ್ಸು ಕಲುಷಿತಗೊಳಿಸಿದ್ದಾರೆ

ಸುಮಾರು ಎಂಟು ಆರೋಪಗಳನ್ನ ಮಾಡಿರೋ ರುಪ್ಸಾ ಸಂಘಟನೆ ಇದೀಗ ಪ್ರಧಾನಿ ಕಚೇರಿಗೆ ದಾಖಲೆಗಳ ಸಮೇತ ದೂರು ನೀಡಿದೆ. ಈ ಎಲ್ಲಾ ಆರೋಪಗಳ ಜೊತೆಗೆ ವಿಜಯಪುರ ತಾಲೂಕಿನ ಬಿಇಓ ಖಾಸಗಿ ಶಾಲೆ ಆಡಳಿತ ಮಂಡಳಿ ಬಳಿ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ. ಈ ಆಡಿಯೋ ಶಿಕ್ಷಣ ಇಲಾಖೆಯನ್ನ ಇನ್ನಷ್ಟು ಮುಜುಗರಕ್ಕೀಡುಮಾಡಿದೆ.


ಗುತ್ತಿಗೆದಾರರು ಮಾಡ್ತಿದ್ದ ಆರೋಪವನ್ನ ಸರ್ಕಾರ ತಿರಸ್ಕಾರ ಮಾಡ್ತಾನೇ ಬರ್ತಿದೆ. ಇದೀಗ ಹೊಸ ಇಲಾಖೆಯ ಕಮೀಷನ್ ದಂಧೆ ಸರ್ಕಾರವನ್ನ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಕ್ರಮ ಆಗುತ್ತಾ? ಇಲ್ಲ ಈ ಕುರಿತಂತೆ ಸಚಿವರು ಸ್ಪಷ್ಟನೆ ಕೊಡ್ತಾರಾ ಕಾದು ನೋಡಬೇಕಿದೆ.

ಕನ್ನ ಒನ್‌ ನ್ಯೂಸ್‌ ಬಳಗ

© Copyright 2022, All Rights Reserved Kannada One News