ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

Updated : 04.11.2022

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಏನೇ ಮಾಡಿದ್ರು ಅದಕ್ಕೆ ಒಂದು ತೂಕವಿರುತ್ತೆ. ಬಸ್ ಕಂಡಕ್ಟರ್ ಆಗಿದ್ದ ವ್ಯಕ್ತಿಯೊಬ್ಬ ದ್ರಾವಿಡ ಅಸ್ಮಿತೆಯ ನಾಯಕನಾದದ್ದು, ತಮ್ಮ ನಡೆನುಡಿಗಳಿಂದಲೂ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತದ್ದು ತಮಾಷೆಯ ಮಾತಲ್ಲ. ರಜನಿ ಅಂದ್ರೇ ಸ್ಟೈಲ್, ಸ್ಟೈಲ್ ಅಂದ್ರೆ ರಜನಿ ಅಂತಾ ಜಗತ್ತೇ ಕೊಂಡಾಡೋ ತಲೈವಾ ರಜನಿಕಾಂತ್ ಭೂಮಿ ತೂಕದ ವ್ಯಕ್ತಿತ್ವ ಹೊಂದಿದವರು. ಸರಳತೆ, ಸ್ನೇಹಪರತೆ ಮತ್ತು ತಮ್ಮ ಸಹೃದಯತೆಯ ಮೂಲಕ ಸದಾ ಯುವಜನತೆಗೆ ದಾರಿದೀಪವಾಗಿರೋ ರಜನಿ ಈಗ ಮತ್ತೊಂದು ಹಂತ ಮೇಲೇರಿದ್ದಾರೆ. ಅವರ ಮಾತುಗಳ ಮೂಲಕ ರಜನಿ ಯಾಕೆ ಸೂಪರ್ ಸ್ಟಾರ್ ಅನ್ನೋದನ್ನ ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಕನ್ನಡಿಗರ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ನೀಡಿದ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್ ಸುರಿವ ಮಳೆಯ ನಡುವೆ ನಿಂತು ಆಡಿದ ಮಾತುಗಳಿವೆಯಲ್ಲಾ… ಅವು ಸರ್ವಕಾಲಕ್ಕೂ ರಜನಿಕಾಂತ್ ಒಬ್ಬ ನಿಜವಾದ ಸೂಪರ್ ಸ್ಟಾರ್  ಎಂಬುದನ್ನ ಸಾಕ್ಷೀಕರಿಸ್ತವೆ.

ಒಂದು ಪಾರ್ಟಿಯ ರಾಜಕಾರಣಿಗಳೇ ತುಂಬಿದ್ದ ವೇದಿಕೆ ಮೇಲೆ ನಿಂತು, ಅದರಲ್ಲೂ ಧರ್ಮಾಂಧತೆಯನ್ನೇ ಉಸಿರಾಡುವವರ ನಡುವೆ, ಕೋಮುದ್ವೇಷದಿಂದಲೇ ಕುರ್ಚಿಗೇರಿದವರ ನಡುವೆ ನಿಂತು ಜನರಿಗೆ ಎಲ್ಲರೂ ಸಹೋದರರಾಗಿ ಬಾಳಿ, ಒಟ್ಟಾಗಿ, ಒಗ್ಗಟ್ಟಾಗಿ ಸಂತೋಷವಾಗಿ ಬಾಳಬೇಕೆಂದು ರಾಜರಾಜೇಶ್ವರಿ, ಅಲ್ಲಾ, ಜೀಸಸ್ ನಲ್ಲಿ ಪಾರ್ಥಿಸುತ್ತೇನೆ ಎಂದು ಸರ್ವಧರ್ಮ ಸಮನ್ವಯತೆಯನ್ನ ಸಾರಿದ ಸೂಪರ್ ಸ್ಟಾರನ್ನ. ಇದಕ್ಕೇ ಹೇಳೋದು ರಜನಿ ದಿ ಸೂಪರ್ ಸ್ಟಾರ್ ಅಂತಾ. ಒಂದು ಸರ್ಕಾರಿ ಆಯೋಜಿತ ಕಾರ್ಯಕ್ರಮದಲ್ಲಿ ಸೌಜನ್ಯಕ್ಕಾಗಿಯಾದರೂ ಒಬ್ಬೇ ಒಬ್ಬ ವಿರೋಧ ಪಕ್ಷದ ನಾಯಕರನ್ನು ವೇದಿಕೆ ಮೇಲೆ ಕರೆಯದ ಮೂಲಭೂತವಾದಿ ಪಕ್ಷವೊಂದರ ಮುಖ್ಯಮಂತ್ರಿ ಮತ್ತು ನಾಯಕರ ನಡುವೆ ಜನಸಾಮಾನ್ಯರು ಒಗ್ಗಟ್ಟಿನಿಂದ ಬಾಳೋಕೆ ಕರೆ ನೀಡೋದು ಸುಲಭದ ಮಾತಲ್ಲ. ಆದ್ರೆ ಅವರು ರಜನಿಕಾಂತ್, ಭಾರತ ಚಿತ್ರರಂಗ ಮಾತ್ರವಲ್ಲ ಜಗತ್ತಿನೆದುರು ತಮ್ಮ ವ್ಯಕ್ತಿತ್ವದಿಂದಲೇ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತವರು. ಇನ್ನು ರಜನಿ ಕಾಂತ್ ಅವರು ನಮ್ಮ ಅಪ್ಪು ಬಗ್ಗೆ ಆಡಿದ ಒಂದೊಂದು ಮಾತು ಅಣಿಮುತ್ತು. ತಮ್ಮ ನೆನಪಿನಲ್ಲುಳಿದ 4ವರ್ಷದ ಅಪ್ಪು ನಗುವನ್ನ ಕಾಯ್ದಿಟ್ಟುಕೊಂಡು ಅಣ್ಣಾವ್ರೊಂದಿಗಿನ ಒಡನಾಟವನ್ನೂ ನೆನೆದರು.

ಇನ್ನು ಪುನೀತ್ ರಾಜ್ ಕುಮಾರ್ ವ್ಯಕ್ತಿತ್ವದ ಕುರಿತು ಮಾತನಾಡಿದ ರಜನಿಕಾಂತ್ ಅಪ್ಪು ಸಾಧಾರಣ ವ್ಯಕ್ತಿಯಲ್ಲ, ಆತ ಅಪಾರವಾದುದ್ದನ್ನ ಸಾಧಿಸಿದ್ದಾನೆ. ಒಬ್ಬ ಮಾರ್ಕಂಡೇಯ, ಒಬ್ಬ ಪ್ರಹ್ಲಾದ, ಒಬ್ಬ ನಚಿಕೇತನಂತೆ ಈಗ ಒಬ್ಬ ಅಪ್ಪು,  ಈ ಕಲಿಯುಗಕ್ಕೆ ಅಪ್ಪು ದೇವರ ಮಗು. ನಮ್ಮಲ್ಲಿ ಬಂದು ವಿನೋದಗಳನ್ನ ತೋರಿಸಿ ಮತ್ತೆ ದೇವರಲ್ಲಿ ಸೇರಿದ್ದಾರೆ ಎಂದು ಹೇಳುವಾಗ ಎಂಥಹವರಿಗೂ ಕಣ್ತುಂಬದೇ ಇರದು. ಅಣ್ಣಾವ್ರ ಕುಟುಂಬದ ಮೇಲೆ ರಜನಿಯವರಿಗಿರುವ ಗೌರವ ಪ್ರೀತಿ ಎಲ್ಲವೂ ಅವರ ಪ್ರತೀ ಮಾತುಗಳಲ್ಲೂ ತುಂಬಿದ್ದವು..ಕರ್ನಾಟಕದಲ್ಲಿ ಹುಟ್ಟಿ ದುಡಿದು,ಕಂಡಕ್ಟರ್ ಆಗಿ ದುಡಿದು ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಆನಂತರ ತಮಿಳುನಾಡಿನ ಸಾಂಸ್ಕೃತಿಕ ನಾಯಕನಾಗಿ ಬೆಳೆದ ರಜನಿಕಾಂತ್ ಹುಟ್ಟಿದ ನೆಲದೊಂದಿಗಿನ ಒಡನಾಟವನ್ನ ಅಣ್ಣಾವ್ರ ಕುಟುಂಬದೊಂದಿಗೆ ಉಳಿಸಿಕೊಂಡಿದ್ದಾರೆ. ಎನ್ ಟಿಅರ್, ಎಂಜಿಆರ್, ಶಿವಾಜಿ ಗಣೇಶನ್, ರಾಜ್ ಕುಮಾರ್ ಅವರು 60 ವರ್ಷ 70  ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20  ವರ್ಷಗಳಲ್ಲಿ ಸಾಧಿಸಿದ್ದಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಅದು ನಮ್ಮ ಅಪ್ಪು ಮಾಡಿದ್ದಾರೆ ಎಂದ ರಜನಿಕಾಂತ್ ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ ಅಂತಾ ತಮ್ಮ ಮಾತುಗಳನ್ನ ಮುಗಿಸಿದ್ರು.

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮತ್ತೊಂದು ಹೈಲೆಟ್ ಅಂದ್ರೆ ತೆಲುಗು ಚಿತ್ರರಂಗದ ಖ್ಯಾತ ನಟ ಯಂಗ್ ಟೈಗರ್ ಜೂ. ಎನ್.ಟಿ.ಆರ್ ಅವರ ಮಾತು. ಪುನೀತ್ ಹಾಗೂ ರಾಜ್ ಕುಟುಂಬಕ್ಕೆ ಆಪ್ತರಾಗಿರುವ ಅವರು ಅಚ್ಚ ಕನ್ನಡದಲ್ಲಿ ಮಾತುಗಳನ್ನ ಆರಂಭಿಸಿದ್ರು. ಅಲ್ಲದೇ ಕನ್ನಡದ ಜನತೆಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ರು. ವ್ಯಕ್ತಿತ್ವ ಅನ್ನೋದು ಒಬ್ಬ ವ್ಯಕ್ತಿಯ ಸ್ವಂತ ಸಂಪಾದನೆ. ಅಂಥ  ವ್ಯಕ್ತಿತ್ವದಿಂದ, ನಗುವಿನಿಂದ, ಅಹಂಕಾರವಿಲ್ಲದೇ, ಅಸ್ತ್ರವಿಲ್ಲದೇ ಒಂದೀಡೀ ರಾಜ್ಯವನ್ನು ಗೆದ್ದಿರುವ ರಾಜನಿದ್ದರೇ ಅದು ಪುನೀತ್ ರಾಜ್ ಕುಮಾರ್. ಒಬ್ಬ ಶ್ರೇಷ್ಠ ಮಗ, ಶ್ರೇಷ್ಠ ಸಂಗಾತಿ, ಶ್ರೇಷ್ಠ ತಂದೆ, ಶ್ರೇಷ್ಠ ಗೆಳೆಯ ಎಲ್ಲವೂ ಆಗಿದ್ದ ಪರಿಪೂರ್ಣವ್ಯಕ್ತಿ ಡಾ. ಪುನೀತ್ ರಾಜ್ ಕುಮಾರ್ ಎಂದ ಎನ್.ಟಿ.ಆರ್ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್  ಅವರಿಗೆ ಕೊಡುತ್ತಿರುವುದಲ್ಲ, ನನ್ನ ಪ್ರಕಾರ ಕರ್ನಾಟಕ ರತ್ನ ಅರ್ಥವೇ ಶ್ರೀ ಪುನೀತ್ ರಾಜ್ ಕುಮಾರ್ ಎಂದರು. ಇನ್ನು ಇಂದು ನಾನಿಲ್ಲಿ ನಿಂತಿರೋದು ನನ್ನ ಸಾಧನೆಗಳ ಅರ್ಹತೆಯಿಂದಲ್ಲ ಕೇವಲ ಒಬ್ಬ ಹೆಮ್ಮೆಯ ಗೆಳೆಯನಾಗಿ ನಾನಿಲ್ಲಿ ನಿಂತಿದ್ದೇನೆ ಈ ವೇದಿಕೆ ಮೇಲೆ ನನ್ನನ್ನು ಕರೆತಂದ ಎಲ್ಲರಿಗೂ ಧನ್ಯವಾದ ಎಂದರು. ಡಾ. ರಾಜ್ ಕುಟುಂಬ ನನ್ನನ್ನು ಪರರಾಜ್ಯದ ನಟನಾಗಿ ನೋಡಿಲ್ಲ. ಕುಟುಂಬವಾಗಿ ಎಂದಿಗೂ ಗೌರವಿಸಿದ್ದಾರೆ ಎಂದು ದೊಡ್ಮನೆಯ ಸಹೃದಯತೆ ಬಗ್ಗೆ ವಿವರಿಸಿದ್ರು.

ಇಡೀ ಕರುನಾಡೆ ಕಾತುರದಿಂದ ಕಾಯುತ್ತಿದ್ದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕನ್ನಡಿಗರಿಗೆ ಭಾವನಾತ್ಮಕವಾದ ವಿಚಾರ. ಕರುನಾಡಿನ ಸಹೃದಯದ ದೊರೆ ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪುಗೆ ಅಧಿಕೃತವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡೋದನ್ನ ಕಣ್ತುಂಬಿಕೊಳ್ಳೋಕೆ ಲಕ್ಷಾಂತರ ಮಂದಿ ಮಳೆಯನ್ನೂ ಲೆಕ್ಕಿಸದೇ ಆಗಮಿಸಿದ್ರು. ಇನ್ನೂ ಅಣ್ಣಾವ್ರ ಇಡೀ ಕುಟುಂಬ ಭಾಗಿಯಾಗಿತ್ತು. ಆದ್ರೆ ಸರಳತೆಯನ್ನೇ ಉಸಿರಾಡಿದ ಅಣ್ಣಾವ್ರ ಕುಟುಂಬದ ಮುದ್ದಿನ ಕುಡಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಈ ಭಾವನಾತ್ಮಕ ಕಾರ್ಯಕ್ರಮದ ವೇದಿಕೆಯನ್ನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಕ್ಷರಶಃ ರಾಜಕೀಯದ ವೇದಿಕೆಯಾಗಿಸಿಕೊಂಡ್ರು. ಯಾಕಂದ್ರೆ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿಗೆ ಹೇಳಿಕೊಳ್ಳೋಕೆ ಯಾವ ಸಾಧನೆಯೂ ಇಲ್ಲಾ, ಭ್ರಷ್ಟಾಚಾರ , 40 ಪರ್ಸೆಂಟ್ ಕಮಿಷನ್ ಆರೋಪಗಳಲ್ಲೇ ಮುಚ್ಚಿಹೋಗಿರುವ ಬಿಜೆಪಿಯ ಮುಖವನ್ನ ಹೊರಗೆ ತೋರಿಸಲು ಇಂಥದ್ದೊಂದು ಅದ್ಭುತ ಕಾರ್ಯಕ್ರಮವನ್ನು ಬಲಿಕೊಟ್ರು ಅಂತ್ಲೇ ಹೇಳಬಹುದು. ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರಕ್ಕಾದರೂ ಒಬ್ಬೇ ಒಬ್ಬ ವಿರೋಧ ಪಕ್ಷದ ನಾಯಕರಿರಲಿಲ್ಲ.

ಇನ್ನೂ ಮೈಸೂರಿನವರೇ ಆದ, ಅಣ್ಣಾವ್ರ ಕುಟುಂಬದೊಂದಿಗೆ ಆಪ್ತ ಒಡನಾಟವಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಕಾರ್ಯಕ್ರಮಕ್ಕೆ ಕರೆದಿಲ್ಲಾ, ಸಹೃದಯತೆಯಿಂದಲೇ ಇಡೀ ನಾಡನ್ನು ಗೆದ್ದ ‘ಅಪ್ಪು’ ಕಾರ್ಯಕ್ರವನ್ನೂ ತಮ್ಮ ಸಣ್ಣತನಗಳಿಂದ ಅನರ್ಥಗೊಳಿಸಿದ ಸಿಎಂ ಬೊಮ್ಮಾಯಿ ಮುಖ್ಯಮಂತ್ರಿ ಪದವಿ ಘನತೆಯನ್ನು ಪಕ್ಕಕ್ಕಿಟ್ಟು ಚೀರಾಡುತ್ತಾ ಥೇಟ್ ಕಾರ್ಯಕ್ರಮ ನಿರೂಪಕನಂತೆ ನಡೆದುಕೊಂಡ ರೀತಿ ಎಂಥಹವರಿಗೂ ಅಸಹ್ಯ ತರಿಸಿದ್ದು ಸುಳ್ಳಲ್ಲ.

ಅಪ್ಪು ಜಾತಿ - ಧರ್ಮ - ದೇಶ - ಭಾಷೆಗಳ ಗಡಿಮೀರಿ ಬೆಳೆದ ದೇವತಾ ಮನುಷ್ಯ. ಧಾನಧರ್ಮಗಳಿಂದ ಮೇರು ಪರ್ವತವಾಗಿ ಬೆಳೆದ ಪುನೀತ್ ರಾಜ್ಕುಮಾರ್ ಯಾವೊತ್ತು ಯಾರನ್ನೂ ದ್ವೇಷಿಸಿದವರಲ್ಲ. ರಾಜಕೀಯ ಪಕ್ಷಗಳು ಅದೆಷ್ಟು ಮಸಲತ್ತು ನಡೆಸಿದ್ರು ನಗುತ್ತಲೇ ಎಲ್ಲಾ ಪಕ್ಷಗಳನ್ನು ಹೊರಗಿಟ್ಟು ಅನ್ನದ ಪಕ್ಷವಾಗಿ ಸಹೃದಯತೆಯ ಪಕ್ಷವಾಗಿ ಜನಮನ ಗೆದ್ದವರು. ಇದೇ ಕಾರಣ ರಜನಿಕಾಂತ್ ವೇದಿಕೆ ಮೇಲೆ ನಿಂತು ಸರ್ವಧರ್ಮ ಸಮನ್ವಯತೆಯನ್ನು ಸಾರಿಹೇಳಲು ಸಾಧ್ಯವಾಗಿಸಿದ್ದು, ಹಾಗೇ ಭಾಷೆ ಗಡಿಗಳ ಮೀರಿ ಎನ್ ಟಿ ಆರ್ ಭಾವನಾತ್ಮಕವಾಗಿ ಸ್ಪಂದಿಸಲು ಕಾರಣವಾದದ್ದು. ಇಂಥ ಪುನೀತ ಕಾರ್ಯಕ್ರಮವನ್ನು ತಮ್ಮ ಹೊಲಸು ರಾಜಕೀಯದ ಮೈಲೇಜಿಗೆ ಬಳಸಿಕೊಂಡ ಬಿಜೆಪಿ ಕನ್ನಡಗರ ಕ್ಷಮೆಗೂ ಅರ್ಹವಲ್ಲ ಅನ್ನೋದಂತೂ ಸತ್ಯ. ಇದನ್ನ ನಾಡು ನೆನಪಿಡಲೇಬೇಕು. ಕರ್ನಾಟಕ ರತ್ನ ಅಪ್ಪು ಅವರ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ದ್ವೇಷ ರಾಜಕಾರಣವನ್ನು ಅವರ ಕಾರ್ಯಕ್ರಮದಲ್ಲಿಯೂ ತಂದ ಬಿಜೆಪಿಗೆ ಸರಿಯಾದ ಪಾಠ ಕಲಿಸಲೇಬೇಕು.

ಕನ್ನಡ ಒನ್ ನ್ಯೂಸ್…© Copyright 2022, All Rights Reserved Kannada One News