Flash News:
ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

Updated : 23.09.2022

ಕಾಂಗ್ರೆಸ್ ಮಾಡಿರೋ ಪೇಸಿಎಂ ತಂತ್ರ ಇಡೀ ಬಿಜೆಪಿಯನ್ನ ಕಂಗೆಡಿಸಿಬಿಟ್ಟಿದೆ.. ಆ ಮಟ್ಟಿಗೆ ಪೇಸಿಎಂ ಕ್ಯೂ ಆರ್ ಕೋರ್ಡ್ ಜನರ ಮನಸ್ಸನ್ನ ಸ್ಕ್ಯಾನ್ ಮಾಡಿದೆ.. ಹಾಗಿದ್ಮೇಲೆ ಇವತ್ತು ಇದೇ ವಿಚಾರ ಮಾಧ್ಯಮಗಳಲ್ಲಿ ಸ್ಫೋಟವಾಗ್ಬೇಕಿತ್ತು.. ಆದ್ರೆ ಬಿಜೆಪಿ ಕುತಂತ್ರಗಾರಿಕೆ ಗೊತ್ತಲ್ವಾ..? ಅದನ್ನ ಬಿಜೆಪಿ ಇವತ್ತು ಸರಿಯಾಗೇ ವರ್ಕೌಟ್ ಮಾಡಿದೆ ಅನ್ನೋ ಅನುಮಾನ ಮೂಡ್ತಾ ಇದೆ.. ಯಾಕಂದ್ರೆ ಪೇಸಿಎಂ ಸುದ್ದಿ ಪ್ರಸಾರವಾಬೇಕಿದ್ದ ಜಾಗದಲ್ಲಿ ಪಿಎಫ್ಐ ಸುದ್ದಿ ಓಡ್ತಾ ಇದೆ.. ಜನರ ಮನಸ್ಸನ್ನ ಡೈವರ್ಟ್ ಮಾಡೋದಕ್ಕೆ ಬಿಜೆಪಿ ಎನ್ಐಎಯನ್ನು ಛೂ ಬಿಡ್ತಾ..? ಇದ್ದಕ್ಕಿದ್ದಂತೆ ದೇಶಾದ್ಯಂತ ಈ ದಾಳಿಗಳು ಯಾಕೆ ನಡೆದ್ವು..? ಈ ಪ್ರಶ್ನೆಗಳು ಏಳದೇ ಇರೋಲ್ಲ.. ಯಾಕಂದ್ರೆ ಬಿಜೆಪಿ ಯಾವಾಗ್ಲೂ ಮಾಡಿಕೊಂಡು ಬಂದಿದ್ದು ಇದನ್ನೇ ಅಲ್ವಾ..? ಬಿಜೆಪಿ ವಿರುದ್ಧ ಏನಾದರೂ ನಡೀತಾ ಇದೆ ಅಂದ್ರೆ ಆಗ ಜನರ ಮನಸ್ಸನ್ನು ಡೈವರ್ಟ್ ಮಾಡಲು ಇಂತಹದ್ದೊಂದು ದಾಳವನ್ನು ಬಿಜೆಪಿ ಉರುಳಿಸ್ತಾನೇ ಬಂದಿದೆ.. ಈ ವಿಚಾರವನ್ನು ವಿವರವಾಗಿ ನಾಳೆ ಹೇಳ್ತೀನಿ.. ಈಗ ಪೇಸಿಎಂ ಸೃಷ್ಟಿಸಿರೋ ತಲ್ಲಣದ ಬಗ್ಗೆ ನೋಡೋಣ..

ಅಂದಹಾಗೆ, ಪೇಟಿಎಂಗೆ ರೂಪದರ್ಶಿಯಾದವರು ನಮ್ಮ ಪ್ರಧಾನಿ ಮೋದಿ.. ಪೇಟಿಎಂ ಕಾರ್ಯಾಚರಣೆ ಶುರುವಾದಾಗ ಆ ಕಂಪನಿ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಮೋದಿ ರಾರಾಜಿಸಿದ್ದರು.. ಒಂದು ದೇಶದ ಪ್ರಧಾನಿ ಪೇಟಿಎಂ ಎಂಬ ಖಾಸಗಿ ಕಂಪನಿಗೆ ಪ್ರಚಾರ ಕೊಟ್ಟಿದ್ದು ಇದೇ ಮೊದಲು ಬಿಡಿ.. ಈಗ ಅದೇ ಕಂಪನಿಯ ಲೋಗೋ ವ್ಯಂಗ್ಯಚಿತ್ರವಾಗಿ ಬಿಜೆಪಿಯನ್ನು ಕುಕ್ಕುತ್ತಿದೆ.. ಪೇಟಿಎಂ ಕರ್ನಾಟಕದ ಜನರ ಪಾಲಿಗೆ ಪೇಸಿಎಂ ಆಗಿ ಪ್ರಚಾರ ಪಡ್ಕೊಂಡಿದೆ.. ಇಷ್ಟು ದಿನ ಓಬಿರಾಯನ ಕಾಲದ ಪ್ರಚಾರದ ತಂತ್ರಗಳನ್ನೇ ಉಪಯೋಸ್ಕೊಂಡು ಕೂತಿದ್ದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ತಂತ್ರಗಾರಿಕೆ ಮಾಡಿದೆ.. ಪೇಟಿಎಂ ಕ್ಯೂಆರ್ ಕೋಡ್ ಡಿಸೈನ್ನಲ್ಲಿ ಪೇಸಿಎಂ ಎಂದು ತಿರುಚಿ, ಕ್ಯೂಆರ್ ಕೋಡ್ನಲ್ಲಿ ಸಿಎಂ ಬೊಮ್ಮಾಯಿ ಚಿತ್ರ ಬಿಡಿಸಿ, ನಲವತ್ತು ಪರ್ಸೆಂಟ್ ಕಮೀಷನ್ ವಿರುದ್ಧ ಕಾಂಗ್ರೆಸ್ ಮಾಡಿದ ಹೋರಾಟವಿದು.. ಅಪರೂಪಕ್ಕೆ ಕಾಂಗ್ರೆಸ್ ಮಾಡಿದ ಪ್ರಚಾರ ತಂತ್ರಗಾರಿಕೆಗೆ ಇಂತಹ ಡಿಜಿಟಲ್ ತಂತ್ರಗಾರಿಕೆಯಲ್ಲಿ ಚಾಣಕ್ಷ ಅಂತಾನೇ ಕುಖ್ಯಾತಿ ಪಡೆದಿರೋ ಬಿಜೆಪಿಯನ್ನು ನಿದ್ದೆಯಲ್ಲೇ ಬೆಚ್ಚಿಬೀಳಿಸಿದೆ.. ಅದ್ರ ಫಲಿತಾಂಶವೇ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖಂಡರಾದ ನರಸಿಂಹ ನಾಯ್ಡು ಹಾಗೂ ಗಗನ್ ಯಾದವ್ ಬಂಧನ..

ಸರ್ಕಾರದ ಮೇಲೆ ಬಂದಿರೋ ಆರೋಪವನ್ನು ವ್ಯಂಗ್ಯ ಮಾಡಿದ ಕಾಂಗ್ರೆಸ್ ಪೇಸಿಎಂ ಎಂಬ ಸೃಜನಶೀಲ ಪೋಸ್ಟರ್ ಅಂಟಿಸಿದ್ದೇ ತಡ, ಬೊಮ್ಮಾಯಿ ನೇತೃತ್ವದ ಎಡವಟ್ ಸರ್ಕಾರ ತನ್ನ ಮಿಡ್ನೈಟ್ ಕಾರ್ಯಾಚರಣೆ ಶುರು ಮಾಡಿದೆ.. ರಾತ್ರೋರಾತ್ರಿ ಇಬ್ಬರು ಯುವ ನಾಯಕರನ್ನು ಬಂಧಿಸೋದಕ್ಕೆ ಕುಮ್ಮಕ್ಕು ನೀಡಿದೆ.. ಹಾಗೆ ನೋಡಿದ್ರೆ, ಇದು ಕಾಂಗ್ರೆಸ್ಗೆ ಮೈನಸ್ ಅಲ್ವೇ ಅಲ್ಲ.. ಮಧ್ಯರಾತ್ರಿಯ ಬಂಧನದಿಂದ ಎಲೆಮರೆಕಾಯಿಯಂತಿದ್ದ ಆ ಇಬ್ಬರು ಯುವ ನಾಯಕರು ಇಡೀ ರಾಜ್ಯಕ್ಕೆ ಗೊತ್ತಾದ್ರು.. ಅದಿರಿಲಿ, ಸಿಎಂ ಬೊಮ್ಮಾಯಿ ಸರ್ಕಾರ ಯಾವಾಗ್ಲೂ ಮಧ್ಯ ರಾತ್ರಿಯಲ್ಲೇ ಎಡವಟ್ ಮಾಡ್ಕೋತಿರೋದು, ಜೊತ್ಗೆ ಯಾವಾಗ್ಲೂ ಅದಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯ ಕೂಡಾ ಆಗೋದು.. ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಬಾರ್ದು ಅಂತ ಸರ್ಕಾರ ಒಂದು ಎಡವಟ್ಟು ಆದೇಶ ಹೊರಡಿಸಿತ್ತು.. ಆಗ ರಾಜ್ಯದ ಜನ ತಲೆಕಟ್ ಸರ್ಕಾರದ ಈ ಎಡವಟ್ ಆದೇಶಕ್ಕೆ ಉಗಿದು ಉಪ್ಪಿನಕಾಯಿ ಹಾಕಿದ್ದರು.. ಆಗ ರಾತ್ರೋರಾತ್ರಿ ಸರ್ಕಾರಕ್ಕೆ ಜ್ಞಾನೋದಯವಾಗಿತ್ತು.. ಮಿಡ್ನೈಟ್ ಸರ್ಕಾರ ಈ ಆದೇಶವನ್ನ ವಾಪಸ್ ಪಡ್ಕೊಂಡಿತ್ತು.. ಮಧ್ಯರಾತ್ರಿ ಸರ್ಕಾರಕ್ಕೇನೋ ಜ್ಞಾನೋದಯವಾಗಿತ್ತು.. ಆದ್ರೆ ಸರ್ಕಾರ ಹೊರಡಿಸಿದ್ದ ಆ ಆದೇಶದಲ್ಲಿ ಕಾಗುಣಿತದ ತಪ್ಪುಗಳು ರಾರಾಜಿಸಿದ್ದವು.. ಅಂದು ಮೊದಲ ಬಾರಿಗೆ ನಗೆಪಾಟಲಿಗೆ ಈಡಾದ ಸರ್ಕಾರ ಈಗ್ಲೂ ಮಾಡಿದ ತಪ್ಪನ್ನ ಪದೇ ಪದೇ ಮಾಡ್ತಾ ಇದೆ..

ಈಗ ವಿಷಯಕ್ಕೆ ಬರೋಣ.. ಚುನಾವಣೆ ಹತ್ತಿರಕ್ಕೆ ಬರ್ತಾ ಇದೆ.. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಹಳ ವಿಭಿನ್ನವಾಗಿ ಹೋರಾಟ ಶುರು ಮಾಡಿದೆ.. ಜನರ ಗಮನ ಸೆಳೆಯೋದು ಹೇಗೆ ಅನ್ನೋದನ್ನ ತಡವಾಗಾದರೂ ಕಾಂಗ್ರೆಸ್ ಅರ್ಥ ಮಾಡ್ಕೊಂಡಿದೆ.. ನಲವತ್ತು ಪರ್ಸೆಂಟ್ ಕಮೀಷನ್ ಆರೋಪ ಬಂದು ನಾಲ್ಕೈದು ತಿಂಗಳೇ ಆಯ್ತು.. ಆದ್ರೆ, ಈ ಜಡ ಸರ್ಕಾರ ಮಕ್ಕಕ್ಕೆ ಉಗಿದ್ರೂ ಒರೆಸಿಕೊಂಡು ಏನೂ ಆಗದ ರೀತಿಯಲ್ಲಿ ಕೂತಿತ್ತು.. ಆದ್ರೆ ಯಾವಾಗ ಅದೇ ನಲವತ್ತು ಪರ್ಸೆಂಟ್ ಕಮೀಷನ್ ಆರೋಪವನ್ನು ಕಾಂಗ್ರೆಸ್ ಯಾವಾಗ ವಿಭಿನ್ನವಾಗಿ ಮಾಡೋಕೆ ಶುರು ಮಾಡ್ತೋ, ಬಿಜೆಪಿ ಮುಟ್ಟಿ ನೋಡ್ಕೋಳೋಕೆ ಶುರು ಮಾಡಿದೆ.. ಬೆಂಗ್ಳೂರಲ್ಲಿ ಯಾರ್ಯಾರೋ ಪೋಸ್ಟರ್ ಅಂಟಿಸ್ತಾರೆ.. ಆದ್ರೆ, ಮೊನ್ನೆ ಕಾಂಗ್ರೆಸ್ ಅಂಟಿಸಿತ್ತಲ್ಲ ಆ ಪೇಸಿಎಂ ಪೋಸ್ಟರ್ ಸಿಎಂ ಬೊಮ್ಮಾಯಿ ಜಂಗಾಬಲವನ್ನೇ ಉಡುಗಿಬಿಟ್ಟಿದೆ.. ಅದಕ್ಕೇ ಅವ್ರು, ಅವರಿಗೆ ಹೋದ ಮಾನವನ್ನು ಇಡೀ ರಾಜ್ಯಕ್ಕೇ ಹೋಯ್ತು ಅನ್ನೋ ರೀತಿಯಲ್ಲಿ ಬೊಬ್ಬೆ ಹೊಡೀತಿದ್ದಾರೆ.. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರು ನಲವತ್ತು ಪರ್ಸೆಂಟ್ ಕಂಇಷನ್ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೀತಾರೆ.

ಮತ್ತೊಬ್ಬ ಗುತ್ತಿಗೆದಾರ ನಿಮ್ಮದೇ ಸಂಪುಟದ ಸಚಿವರ ವಿರುದ್ಧ ನಲವತ್ತು ಪರ್ಸೆಂಟ್ ಕಮೀಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಳ್ತಾನೆ.. ಆಗ ಹೋಗದ ರಾಜ್ಯ ಮಾನ ಈಗ ಹೋಯ್ತಾ ಬೊಮ್ಮಾಯಿಯವರೇ..? ಪಕ್ಕದ ತೆಲಂಗಾಣ ರಾಜ್ಯದಲ್ಲಿ ನಲವತ್ತು ಪರ್ಸೆಂಟ್ ಸರ್ಕಾರವನ್ನು ವ್ಯಂಗ್ಯವಾಗಿ ಹೋರ್ಡಿಂಗ್ಸ್ ಹಾಕಿದಾಗ ಹೋಗದ ಮರ್ಯಾದೆ ಈಗ ಹೋಯ್ತಾ ಸ್ವಾಮಿ..? ಅಷ್ಟಕ್ಕೂ ಮರ್ಯಾದೆ ಹೋಗಿದ್ದಕ್ಕಲ್ಲ ಇವ್ರು ಹೀಗೆ ಬೊಬ್ಬೆ ಹೊಡೀತಾ ಇರೋದು.. ಕಾಂಗ್ರೆಸ್ ವಿಭಿನ್ನ ಹೋರಾಟಕ್ಕೆ ಬಿಜೆಪಿ ಬೆಚ್ಚಿಬಿದ್ದಂತೆ ಕಾಣ್ತಾ ಇದೆ.. ಈ ಹಿಂದೆ ಸುಳ್ಳುಗಳನ್ನು ಪೋಣಿಸಿ ಪ್ರಚಾರ ಪಡೆದುಕೊಂಡಿದ್ದು ಯಾರು ಸಿಎಂ ಅವರೇ..? ಒಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಬಿಜೆಪಿ ಪಕ್ಷದ ಅಕೌಂಟ್ಗಳನ್ನು ತೆರೆದು ನೋಡಿ ಎಷ್ಟು ಸುಳ್ಳುಗಳಿವೆ ಅನ್ನೋದು ಅರ್ಥ ಆಗುತ್ತೆ... ಎಂಟು ವರ್ಷಗಳ ಹಿಂದೆ ನೀವು ಪ್ರಚಾರಕ್ಕಾಗಿ ಏನೆಲ್ಲಾ ತಂತ್ರಗಳನ್ನು ಬಳಸಿದ್ರಿ..? ಎಷ್ಟೆಲ್ಲಾ ಸುಳ್ಳುಗಳನ್ನ ಹಬ್ಬಿಸಿದ್ರಿ..? ಈಗ್ಲೂ ಅದು ನಿಂತಿಲ್ಲ ಬಿಡಿ.. ಆದ್ರೆ ಈಗ ಅದೇ ತಂತ್ರಗಾರಿಕೆ ನಿಮಗೆ ತಿರುಗುಬಾಣವಾಗ್ತಾ ಇದೆ.. ಕಾಂಗ್ರೆಸ್ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಲುಪೋ ಪ್ರಯತ್ನ ಮಾಡ್ತಾ ಇದೆ.. ಅದು ನಿಮಗೆ ಭಯ ಹುಟ್ಟಿಸಿದೆ.. ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಂಟಿಸಿದ್ದು ತಪ್ಪೋ, ಸರಿಯೋ ಅದನ್ನು ಪಕ್ಕಕ್ಕಿಡೋಣ.. ಆ ಪೋಸ್ಟರ್ನಲ್ಲಿರೋದು ನಿಮ್ಮ ಬಗ್ಗೆ ಹಾಗೂ ನಿಮ್ಮೆ ಸರ್ಕಾರದ ಬಗ್ಗೆ.. ಹಾಗಿದ್ಮೇಲೆ ಅದು ರಾಜ್ಯಕ್ಕೆ ಹೇಗೆ ಅವಮಾನ ಮಾಡಿದಂತಾಗುತ್ತೆ..? ಕರ್ನಾಟಕ ಏನು ಬಿಜೆಪಿಯ ಸೊತ್ತಾ..? ಕನ್ನಡಿಗರನ್ನೇನಾದರೂ ನಿಮ್ಮ ಪಕ್ಷ ಕೊಂಡುಕೊಂಡಿದೆಯಾ..? ಏನೂ ಇಲ್ವಲ್ಲ..?

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳೇ ಸುಳ್ಳು ಪೋಸ್ಟ್ಗಳು ಹಾಕೋರು, ಹೇಟ್ ಸ್ಪೀಚ್ ಮಾಡೋರು, ಹೇಸಿಗೆ ಹುಟ್ಟಿಸುವಂತೆ ಬರಿಯೋರನ್ನು ಬಂಧಿಸಿ ಜೈಲಿಗೆ ಅಟ್ಟೋ ಹಾಗಿದ್ರೆ, ಅದಲ್ಲಿ ನೈಂಟಿ ಪರ್ಸೆಂಟ್ ನಿಮ್ಮ ಕೇಸರಿ ಪಕ್ಷ ಹಿಂಬಾಲಕರೇ ಇರ್ತಾರೆ.. ಹೀಗಿರೋವಾಗ ಒಂದೇ ಒಂದು ಪೋಸ್ಟರ್ ನಿಮ್ಮ ನಿದ್ದೆಗೆಡಿಸಿದೆ ಅಂದ್ರೆ ಅದು ನಿಮ್ಮನ್ನ ಎಷ್ಟು ಕಾಡಿರಬಹುದು.. ನೀವು ಒಂದು ಪೋಸ್ಟರ್ಗೆ ಯಾಕೆ ಪತರಗುಟ್ತಾ ಇದೀರಿ.. ಕಾಂಗ್ರೆಸ್ ಆರೋಪಕ್ಕೆ ಉತ್ತರ ಕೊಡಿ.. ನೀವು ಕಮೀಷನ್ ಪಡ್ಕೊಂಡಿಲ್ಲ ಅನ್ನೋದನ್ನ ಸಾಬೀತು ಮಾಡಿ.. ಇಲ್ಲವೇ ತನಿಖೆಗೆ ಒಪ್ಪಿಸಿ.. ಅದು ಬಿಟ್ಟು ಕರ್ನಾಟಕಕ್ಕೆ ಅವಮಾನ ಆಗಿದೆ ಅಂತೀರಿಲ್ಲ ಅದ್ಹೇಗೆ ಅಂತ ಸ್ವಲ್ಪ ವಿವರಿಸ್ತೀತಾ ಬೊಮ್ಮಾಯಿಯವರೇ..?. ರಾಜ್ಯದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಆರೋಪಗಳು ಕೇಳಿಬಂದಿವೆ ಅಂದ್ರೆ ಅದು ಬಿಜೆಪಿ ನಾಯಕರ ಮೇಲೆ ಮಾತ್ರ.. ನಿಮ್ಮದೇ ಪಕ್ಷದ ಯತ್ನಾಳ್ ರಂತವರು ನಿಮ್ಮ ನಾಯಕರ ಭ್ರಷ್ಟಾಚಾರಗಳ ಬಗ್ಗೆ ಬಹಿರಂಗವಾಗಿ ಮಾತಾಡ್ತಿದ್ದಾರೆ.. ಪಿಎಸ್ಐ ನೇಮಕಾತಿಯಂತ ಬೃಹತ್ ಅಕ್ರಮ ನಿಮ್ಮ ಸರ್ಕಾರದಲ್ಲೇ ಆಗಿದ್ದು.. ಇದ್ರಿಂದ ರಾಜ್ಯಕ್ಕೆ ಅವಮಾನ ಆಗಲಿಲ್ಲವೇ ಸಿಎಂ ಸಾಹೇಬ್ರೇ.. ನಲವತ್ತು ಪರ್ಸೆಂಟ್ ಸರ್ಕಾರ ಅಂದ್ರೆ ಅಂಡುಸುಟ್ಟ ಬೆಕ್ಕಿನಂತೆ ಆಡ್ತಿದೀರಲ್ಲ.. ಇದೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೂ ನೀವು ಬಿಜೆಪಿ ಇಂತಹದ್ದೊಂದು ಆರೋಪ ಮಾಡಿದ್ದಿದ್ದು ನಿಜವೋ ಅಲ್ವೋ..?

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹತ್ತು ಪರ್ಸೆಂಟ್ ಕಮೀಷನ್ ಸರ್ಕಾರ ಆರೋಪ ಮಾಡಿದ್ದು ನೀವೇ ಅಲ್ವೇ ಸ್ವಾಮಿ.. ಹತ್ತು ಪರ್ಸೆಂಟ್ ಸರ್ಕಾರ ಅಂತ ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ಕೊಟ್ಟಿದ್ದಿರಿ.. ಹಾಗಾದ್ರೆ ಆವತ್ತು ನೀವು ರಾಜ್ಯದ ಜನರನ್ನು ಅಮಮಾನಿಸಿದ್ದಿರಾ..? ಇಲ್ಲ ತಾನೇ.. ನಮ್ಮದು ಪ್ರಜಾಪ್ರಭುತ್ವ ಸರ್ಕಾರ ಮಿಸ್ಟರ್ ಬೊಮ್ಮಾಯಿ.. ದೇಶದಲ್ಲಿ ಹುಟ್ಟಿದ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ.. ಆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಿದ್ರಿಂದ್ಲೇ ಆವತ್ತು ನೀವು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಮೀಷನ್ ಆರೋಪ ಮಾಡಿ ಜಾಹೀರಾತು ಕೊಟ್ರಿ, ಇವತ್ತು ಅದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ.. ತಪ್ಪೇನಿದೆ ಅದ್ರಲ್ಲಿ.. ಕಾಂಗ್ರೆಸ್ ಆರೋಪ ಮಾಡ್ತಿದೆ.. ನೀವು ಉತ್ತರ ಕೊಡಬೇಕಷ್ಟೇ.. ದ್ವೇಷ ಸಾಧಿಸೋದಲ್ಲ.. ಈಗ ನೀವು ಇಬ್ಬರು ಯುವಕರನ್ನ ಅರೆಸ್ಟ್ ಮಾಡಿಸಿದ್ದೀರಿ.. ಇದ್ರಿಂದ ಏನು ಪ್ರಯೋಜನ ಸಿಎಂ ಅವರೇ.. ಜನರ ಗಮನ ನೀವು ಬೇರೆಡೆ ಸೆಳೆಯೋ ಪ್ರಯತ್ನ ಮಾಡಬಹುದು.. ಈ ಹಿಂದೆ ನೀವು ಮಾತ್ರ ಜನರ ಭಾವನೆಗಳನ್ನು ಅರಿತಿದ್ದಿರಿ.. ಅವರ ಭಾವನೆಗಳ ಜೊತೆ ನೀವು ಮಾತ್ರ ಆಟ ಆಡಿದ್ದಿರಿ.. ಈಗ ಕಾಂಗ್ರೆಸ್ ಕೂಡಾ ನಿಮ್ಮಪ್ಪನ ತರಾ ಆಟ ಆಡ್ತಿದೆ.. ಅದು ಸಹಿಸೋಕೆ ನಿಮಗೆ ಆಗ್ತಾ ಇಲ್ಲ.. ಅದಕ್ಕೇ ನೀವು ಅವಮಾನ, ಅದೂ ಇದೂ ಅಂತಿದೀರಿ..

ಮಾಡಿದ್ದುಣ್ಣೋ ಮಹರಾಯ ಅನ್ನೋ ಮಾತು ನಿಮಗೆ ಗೊತ್ತೇ ಇರುತ್ತೆ.. ಹಿಂದೆ ನೀವು, ನಿಮ್ಮ ಪಕ್ಷ ಇಂತಹದ್ದನ್ನೆಲ್ಲಾ ಮಾಡಿತ್ತು.. ಜನರನ್ನು ಮರಳು ಮಾಡೋದಕ್ಕೆ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡಿಕೊಂಡಿತ್ತು.. ಏನೋನೋ ಪ್ರಚಾರಗಳನ್ನು ಮಾಡಿತ್ತು.. ಜನ ಆವತ್ತು ನೀವು ಏನು ಹೇಳಿದ್ರೂ ನಂಬಿದ್ದರು.. ಈಗ ನೀವು ಮಾಡಿದ್ದನ್ನೇ ಕಾಂಗ್ರೆಸ್ ಮಾಡುತ್ತಿದೆ.. ಅದೂ ನಿದ್ದೆಯಿಂದ ಎದ್ದು ಕೂತಿದೆ.. ಈ ನಡುವೆ ಸಿದ್ದರಾಮೋತ್ಸವದ ಯಶಸ್ಸು ಬೇರೆ ಕಾಂಗ್ರೆಸ್ಗೆ ಚೈತನ್ಯ ತಂದುಕೊಟ್ಟಿದೆ.. ಭಾರತ್ ಜೋಡೋ ಯಾತ್ರೆ ಕೂಡಾ ಜನರನ್ನು ಆಕರ್ಷಿಸೋಕೆ ಶುರು ಮಾಡೀದೆ.. ಇದೆಲ್ಲದರಿಂದ ನೀವು ಕಂಗೆಟ್ಟಿದ್ದೀರಿ.. ಅದಕ್ಕೇ ಸಣ್ಣದೊಂದು ಆರೋಪವನ್ನೂ ನೀವು ಸ್ವೀಕಾರ ಮಾಡ್ತಿಲ್ಲ.. ಮಾತೆತ್ತಿದರೆ ಯೋಗಿ ಸರ್ಕಾರದ ರೀತಿಯಲ್ಲಿ ಕ್ರಮ ಕೈಗೊಳ್ತೀವಿ ಅಂತೀರಿ.. ಹಾಗಾದ್ರೆ ಯೋಗಿ ಮಾಡ್ತಿರೋದು ಪ್ರಜಾಪ್ರಭುತ್ವ ಅಂತೀರಿ.. ಅಲ್ಲೀ ತರಾ ಇಲ್ಲಿ ಜೆಸಿಬಿ ಗರ್ಜನೆ ಮಾಡಿಸ್ತೀವಿ ಅಂತೀರಿ.. ಅದು ಆಗೋ ಕೆಲ್ಸ ಸಾಹೇಬ್ರೆ..? ಉತ್ತರ ಪ್ರದೇಶ ಬೇರೆ, ಕರ್ನಾಟಕ ಬೇರೆ ನಿಮ್ಮ ನೆನಪಿನಲ್ಲಿರಲಿ.. ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆಲ್ಲಾ ಬಂಧಿಸುತ್ತಾ ಹೋದರೆ, ಏನು ಕಥೆ...? ಸರ್ಕಾರ ಕೆಲ್ಸ ಬಂಧಿಸೋದಲ್ಲ.. ಆರೋಪ ಬರದಂತೆ ಜಾಗ್ರತೆ ವಹಿಸೋದು.. ಜನ ಮೆಚ್ಚೋ ರೀತಿಯಲ್ಲಿ ಕೆಲಸ ಮಾಡೋದು.. ಅದು ಎಲ್ಲಿ ನಡೀತಾ ಇದೆ ನಿಮ್ಮ ಸರ್ಕಾರದಲ್ಲಿ..? ನಿಮ್ಮ ಸರ್ಕಾರದ ಕಾನೂನು ಸಚಿವರೇ ಹೇಳ್ತಾರೆ ನಮ್ಮ ಸರ್ಕಾರ ನಡೀತಿಲ್ಲ, ಸುಮ್ನೆ ತಳ್ತಿದೀವಿ ಅಂತ.. ಎಲ್ಲಿಗೆ ಬಂದಿದೆ ನೋಡಿ ನಿಮ್ಮ ಸರ್ಕಾರದ ದುಸ್ಥಿತಿ.. ಮಾಧುಸ್ವಾಮಿ, ಯತ್ನಾಳ್ ಮುಂದಾದವರು ನೀಡೋ ಹೇಳಿಕೆಗಳಿಂದ್ಲೇ ಗೊತ್ತಾಗುತ್ತೆ ನಿಮ್ಮ ಸರ್ಕಾರದ ಕಾರ್ಯವೈಖರಿ ಎಂತಾದ್ದು ಅಂತ.. ಪ್ರವಾಹ ಬಂದು ಎಷ್ಟೋ ಜನ ಮನೆ ಕಳ್ಕೊಂಡಿದಾರೆ.. ರೈತ ಬೆಳೆಗಳು ಹಾಳಾಗಿವೆ.. ಅವರಿಗೆ ಪರಿಹಾರ ಕೊಡೋ ಕೆಲ್ಸ ಮಾಡಿ.. ಚುನಾವಣೆ ಹತ್ತಿರಕ್ಕೆ ಬರ್ತಾ ಇದೆ.. ಈಗಲಾದರೂ ಜನಪರ ಕೆಲಸ ಮಾಡಿ.. ಅದು ಬಿಟ್ಟು ಧ್ವನಿ ಎತ್ತುವರ ಸದ್ದಡಗಸಿ ಜನರ ಮನಸ್ಸು ಗೆಲ್ತೀವಿ ಅಂದ್ರೆ ಅದು ಆಗೋ ಕೆಲ್ಸ ಅನ್ನೋದನ್ನ ಸಿಎಂ ಸಾಹೇಬ್ರು ನೆನಪಲ್ಲಿಟ್ಟುಕೊಳ್ಳಬೇಕು.. ಜನೋತ್ಸವ ಅಂತ ಮಾಡಿದ್ರಲ್ಲ ಆವತ್ತು ಎಷ್ಟು ಜನ ಬಂದಿದ್ರು..? ಆಗ್ಲೇ ನಿಮಗೆ ಅರ್ಥ ಆಗಿರಬೇಕು ಅಲ್ವೇ..? ಅಂದಹಾಗೆ ನಿಮ್ಮ ಬಿಜೆಪಿಯವರು ಎಷ್ಟು ಜನ ಜೈಲಿಗೆ ಹೋಗಿ ಬಂದಿಲ್ಲ..? ಎಷ್ಟು ಜನರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿಲ್ಲ..? ರಾಜ್ಯದಲ್ಲಿ ನಿಮ್ಮ ಪಕ್ಷ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಸಿಎಂ ಆಗಿದ್ದ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನರೆಡ್ಡಿ, ಹರತಾಳು ಹಾಲಪ್ಪ ಹೀಗೆ ಸಾಲು ಸಾಲು ನಾಯಕರು ಜೈಲು ನೋಡಿ ಬಂದರು.. ಆಗ ರಾಜ್ಯದ ಜನಕ್ಕೆ ಅವಮಾನ ಆಯ್ತು ಅಂತ ನಿಮಗೆ ಅನಿಸಲಿಲ್ಲವೇ..? ಸದನದಲ್ಲಿ ಬ್ಲೂಫಿಲ್ಮ್ ನೋಡಿದರು.. ಅದ್ರಿಂದ ರಾಜ್ಯದ ಜನಕ್ಕೆ ಅವಮಾನ ಆಯ್ತು ಅಂತ ನಿಮಗೆ ಅನಿಸಲಿಲ್ಲವೇ..? ಈಗ್ಲೂ ಜೈಲಿಗೆ ಹೋಗಿಬಂದವರು, ಪಲ್ಲಂಗವೇರಿದವರು, ಅಶ್ಲೀಲ ಚಿತ್ರ ನೋಡಿದವರು ನಿಮ್ಮ ಪಕ್ಷದಲ್ಲೇ ಇದ್ದಾರೆ.. ನಿಮ್ಮ ಸರ್ಕಾರದ ಭಾಗವಾಗಿಯೇ ಇದ್ದಾರೆ.. ಇದು ರಾಜ್ಯಕ್ಕೆ ಮಾಡೋ ಅವಮಾನ ಅಲ್ಲವೇ..?  

ಕೊರೋನಾ ಸಮಯದಲ್ಲಿ ಕೋಟಿ ಕೋಟಿ ನುಂಗಿದ್ದೀರಿ ಅನ್ನೋ ಆರೋಪ ನಿಮ್ಮ ಸರ್ಕಾರದ ಮೇಲಿದೆ.. ಈಶ್ವರಪ್ಪ, ಸುಧಾಕರ್, ಮುನಿರತ್ನ, ಅಶ್ವತ್ಥನಾರಾಯಣ ಸೇರಿ ಹಲವಾರು ನಾಯಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.. ಆದ್ರೆ ನೀವು ಏನು ಮಾಡ್ತಾ ಇದ್ದೀರಿ..? ಪಂಜಾಬ್ನಲ್ಲಿ ಸಣ್ಣದೊಂದು ಆರೋಪಕ್ಕೆ ಅಲ್ಲಿನ ಆರೋಗ್ಯ ಸಚಿವ ರಾಜೀನಾಮೆ ಕೊಟ್ಟು ಜೈಲು ಸೇರಿದ್ರು... ಇತ್ತೀಚೆಗೆ ಪೋರ್ಚಗಲ್ನಲ್ಲಿ ನಮ್ಮದೇ ದೇಶದ ಮಹಿಳೆಯೊಬ್ರು ಸರಿಯಾದ ಚಿಕಿತ್ಸೆ ಸಾವನ್ನಪ್ಪಿದ್ರು.. ಆಗ ಅಲ್ಲಿನ ಆರೋಗ್ಯ ಸಚಿವೆ ನೈತಿಕೆ ಹೊಣೆ ತಮ್ಮ ಸ್ಥಾನ ಬಿಟ್ಟು ತೊರೆದಿದ್ರು.. ಅಷ್ಟೇ ಏಕೆ ನಮ್ಮ ರಾಜ್ಯದಲ್ಲೇ ಕೆ.ಜೆ.ಜಾರ್ಜ್ ರಾಜೀನಾಮೆ ಕೊಡಲಿಲ್ಲವೇ..? ಇಂತಹ ಉದಾಹರಣೆಗಳನ್ನು ನಾನು ನೂರು ಕೊಡಬಲ್ಲೆ.. ಆರೋಪ ಬಂದಾಕ್ಷಣ ಕುರ್ಚಿ ಬಿಟ್ಟು ಹೋದವರು ನೂರಾರು ಜನ ಸಿಗ್ತಾರೆ.. ನಿಮ್ಮ ಮೇಲೂ ಆರೋಪ ಬಂದಿದೆ.

ನೀವ್ಯಾಕೆ ಇನ್ನೂ ಕುರ್ಚಿಗೆ ಅಂಟಿಕೊಂಡಿದೀರಿ.. ರಾಜೀನಾಮೆ ಕೊಟ್ಟು ಮನೆಗೆ ಹೋಗಿ.. ನೀವು ತಪ್ಪು ಮಾಡದಿದ್ರೆ ನಿರ್ಭಯವಾಗಿ ವಿಚಾರಣೆ ಎದುರಿಸಿ.. ಅದು ಬಿಟ್ಟು ಜನರ ಭಾವನೆಗಳ ಜೊತೆ ಯಾಕೆ ಆಟ ಆಡ್ತೀರಿ.. ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಜನರ ಮಾನ ಮರ್ಯಾದೆಯನ್ನು ಯಾಕೆ ಹರಾಜಾಕ್ತೀರಿ.. ಉತ್ತರ ಕೊಡಿ ಸಿಎಂ.. ಉತ್ತರ ಕೊಡೋದು ಬಿಟ್ಟು ವಿಷಯ ಡೈವರ್ಟ್ ಮಾಡೋದಕ್ಕೇನಾದರೂ ನೋಡ್ತಿದ್ದೀರಾ..? ಇಂದು ನಸುಕಿನಲ್ಲೇ ಪಿಎಫ್ಐ ಕಚೇರಿಗಳ ಮೇಲೆ ನಡೆದ ದಾಳಿ ಇದಕ್ಕೇನಾ ಆಗಿದ್ದು..? ರಾಜ್ಯದ ಜನ ಇಂತಹದ್ದೊಂದು ಅನುಮಾನ ಪಡ್ತಿದ್ದಾರೆ.. ಒಂದು ನೆನಪಿಟ್ಟುಕೊಳ್ಳಿ ಬೊಮ್ಮಾಯಿಯವರೇ ನಿಮ್ಮ ತಂದೆಯವರು ಕಾನೂನು ವಿದ್ಯಾರ್ಥಿಗಳಿಗೆ ಕಾನೂನು ಪಾಠವಾಗುವ ರೀತಿಯಲ್ಲಿ ಕಾನೂನು ಹೋರಾಟ ಮಾಡಿದ್ರು, ನಿಮ್ಮಂತೆ ಕಾನೂನು ದುರುಪಯೋಗ ಮಾಡಿಕೊಳ್ಳಲಿಲ್ಲ.. ಬದುಕಿದರೆ ನಿಮ್ಮ ತಂದೆಯಂತೆ ಬದುಕಿ ರಾಜ್ಯದ ಜನ ನಿಮ್ಮನ್ನ ಎಂದೂ ಮರೆಯೋದಿಲ್ಲ.

© Copyright 2022, All Rights Reserved Kannada One News