ಬೇಟಿ ಬಚಾವೋ ಬಿಜೆಪಿಯಿಂದ..!: ಎಡಿಟರ್ ಸ್ಪೆಷಲ್

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಬೇಟಿ ಬಚಾವೋ ಬಿಜೆಪಿಯಿಂದ..!: ಎಡಿಟರ್ ಸ್ಪೆಷಲ್

Updated : 21.09.2022

ಇವತ್ತು ನಾನು ನಿಮ್ಮೊಂದಿಗೆ ಚರ್ಚಿಸುವ ವಿಷಯ ಬಹಳ ಮಹತ್ವದ್ದು.. ಬೇಟಿ ಬಚಾವೋ ಭೇಟಿ ಪಡಾವೋ, ಅನ್ನೋ ದೇಶದಲ್ಲಿ ಒಂದು ಹೆಣ್ಣು ಮಗುವಿನ ಪಕ್ಕ ಕುಳಿತ ಆಕೆಯ ಮಾವನನ್ನೇ ಕೆಟ್ಟದೃಷ್ಟಿಯಲ್ಲಿ ನೋಡೋ ನೀಚ ನಾಯಕರೂ ಇರ್ತಾರೆ ಅದೂ ನಾವೇ ಶೀಲವಂತರು.. ನಾವೇ ದೇಶಪ್ರೇಮಿಗಳು.. ನಾವೇ ಭಾರತ ಮಾತೆಯ ಸುಪುತ್ರರು.. ಎಂಬೆಲ್ಲ ಗುಣವಾಚನಗಳನ್ನೇ ತಮ್ಮ ಮೇಲೆ ಹಾಸಿಹೊದೆದುಕೊಂಡಿರೋ ಬಿಜೆಪಿ ಅಂತ ಬಿಜೆಪಿ ಪಕ್ಷದಲ್ಲಿ ಅಂದ್ರೆ ನೀವು ನಂಬ್ಲೇಬೇಕು. ಅದೂ ಫೋಟೋದಲ್ಲಿ ಕುಳಿತಿರುವ ಒಂದು ಹೆಣ್ಣು ಗಂಡು.. ಅದು ಅಣ್ಣ ತಂಗಿಯೋ.. ಅಪ್ಪ ಮಗಳೋ.. ಅನ್ನೋ ಬಗ್ಗೆ ಯೋಚನೆನೂ ಮಾಡದ.. ಅಲ್ಲ.. ಈ ಅಂಧಭಕ್ತರಿಗೆ ಯೋಚನೆ ಮಾಡೋಕೆ ತಲೇಲಿ ಮೆದುಳಾದರೂ ಇರಬೇಕಲ್ಲ.. ಸಗಣಿ.. ಗಂಜಲನೇ ತುಂಬಿಕೊಂಡಿರೋ ಇವಕ್ಕೆ ಸಂಬಂಜ ಅನ್ನೋದು ದೊಡ್ದು ಕನಾ ಅಂದ್ರೆ ಅರ್ಥಾನಾದ್ರೂ ಹೇಗಾಗುತ್ತೆ ಹೇಳಿ.. ಇಷ್ಟೆಲ್ಲ ಪೀಠಿಕೆ ಯಾಕೆ ಅಂತೀರ.. ಇದೇ ಸೆಪ್ಟೆಂಬರ್ 18ರಂದು ಟ್ವೀಟರ್ ನಲ್ಲಿ ಒಂದು ಫೋಟೊ ಅಪ್ ಲೋಡ್ ಆಗುತ್ತೆ.. ಅದರ ಕೆಳಗೆ ಪಪ್ಪು ಅಪ್ರಾಪ್ತೆಯೊಡನೆ ಚೆಲ್ಲಾಟ.. ಅಂತ ಟ್ವೀಟ್ ಮಾಡಲಾಗಿರುತ್ತೆ..  ಕಾಂಗ್ರೆಸ್ನ ರಾಹುಲ್ ಗಾಂಧಿ ತನ್ನ ಪಕ್ಕ ಕುಳಿತ ಹೆಣ್ಣು ಮಗಳ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿರೋ ಪೋಟೋ ಅದು.. ಅದನ್ನ ಟ್ವೀಟರ್ನಲ್ಲಿ ಅಪ್ ಲೋಡ್ ಮಾಡಿದ ಮಹಾನುಭಾವನ ಹೆಸರು ಸಿಟಿಆರ್ ನಿರ್ಮಲ್ಕುಮಾರ್ ಅಂತ.. ಈತ ತಮಿಳುನಾಡಿನ ಬಿಜೆಪಿ ಐಟಿ ಸೆಲ್ ಹಾಗೂ ಸೋಶಿಯಲ್ ಮೀಡಿಯಾದ ರಾಜ್ಯಾಧ್ಯಕನಂತೆ.. ಕರ್ಮ.. ಒಂದು ಪಕ್ಷದ ರಾಷ್ಟ್ರೀಯ ನಾಯಕನೊಬ್ಬನ ಪಕ್ಕ ಕುಳಿತ ಒಂದು ಹೆಣ್ಣು ಮಗು ಆತನಿಗೇನಾಗಬೇಕು..

ಅಥವಾ ಆಕೆಗೂ ಆತನಿಗೂ ಇರುವ ರಿಲೇಶನ್ಶಿಪ್ ಏನೂ ಅನ್ನೋ ಬೇಸಿಕ್ ಮಾಹಿತಿಯನ್ನೂ ತಿಳಿಯದೆ ಸೋಶಿಯಲ್ ಮೀಡಿಯಾವನ್ನು ಮಿಸ್ ಯೂಸ್ ಮಾಡೋ ಇಂತ ಕೀಳಭಿರುಚಿಯ ವ್ಯಕ್ತಿ.. ಬಿಜೆಪಿಯ ಐಟಿ ಸೆಲ್ನ ರಾಜ್ಯಾಧ್ಯಕ್ಷ ಅಂತೆ.. ಥೂ ನಿಮ್ಮ ಜನ್ಮಕ್ಕೆ.. ಹೆಣ್ಣು ಅಂದ್ರೆ ತಾಯಿ ಸಮಾನ.. ಹೆಣ್ಣು ಅಂದ್ರೆ ಪೂಜನೀಯ ಎಂಬೆಲ್ಲ ಹೋಳು ಒಯ್ಯೋ ನಿಮಗೆ ಹೆಣ್ಣನ್ನು ಹೇಗೆ ನೋಡಬೇಕು ಅನ್ನೋ ಕಾಮನ್ಸೆನ್ಸೆ ಇಲ್ದೆ ಹೋಯ್ತಲ್ರೊ... ಛೇ ಇನ್ನೂ ಏನೇನ್ ನೋಡಬೇಕೊ.. ಈ ಕಣ್ಣುಗಳಲ್ಲಿ...

ಆಕ್ಚುವಲಿ... ಈ ಫೋಟೊದಲ್ಲಿ ರಾಹುಲ್ ಗಾಂಧಿ ಜೊತೆ ಕೂತಿರೋ ಹುಡ್ಗಿ ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕ ಗಾಂಧಿಯ ಮಗಳು. ಅವರ ಹೆಸರು ಮೀರಾಯ ವಾದ್ರಾ. ವರಸೆಯಲ್ಲಿ ರಾಹುಲ್ಗೆ ಸೊಸೆ. ಸೋನಿಯಾ ಗಾಂಧಿಗೆ ಮೊಮ್ಮಗಳು, ಇಂದಿರಾ ಗಾಂಧಿಯವರಿಗೆ ಮರಿ ಮೊಮ್ಮಗಳು. ಅಂದಹಾಗೆ ಈ ಫೋಟೋ ತೆಗೆದಿದ್ದು ಯಾವಾಗ ಅಂತೀರಾ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣ ಕಾರ್ಯಕ್ರಮದಲ್ಲಿ ಇಡೀ ಗಾಂಧಿ ಕುಟುಂಬ ಸೇರಿದಂತೆ, ಕಾಂಗ್ರೆಸ್ನ ಘಟಾನುಘಟಿ ನಾಯಕರುಗಳ ಸಮ್ಮುಖದಲ್ಲಿ. ನೀವೆ ಆ ಫೋಟೋವನ್ನೊಮ್ಮೆ ದಿಟ್ಟಿಸಿ ನೋಡಿ. ಇದು ಸಹಜವಾಗಿ ಜಗತ್ತಿನ ಎಲ್ಲಾ ಮಾವಂದಿರು ತಮ್ಮ ಸೊಸೆಯಂದಿರೊಂದಿಗೆ ಅಕ್ಕರೆಯಿಂದ ಮಾತನಾಡುವ ದೃಶ್ಯದಂತೆಯೇ ಇದೆ. ಆದ್ರೆ ಸದಾ ದ್ವೇಷವನ್ನೇ ಉಸಿರಾಡುವ ಬಿಜೆಪಿಯವರಿಗೆ ಪ್ರೀತಿ ಮತ್ತು ಸಂಬಂಧದ ಮೌಲ್ಯಗಳು ಅದೇಗೆ ತಾನೇ ಗೊತ್ತಾಗುತ್ತೆ. ರಾಜಕೀಯವಾಗಿ ಎದುರಿಸಲಾಗದ ನಾಮರ್ಧರು ಮಾತ್ರ ಇನ್ನೊಬ್ಬರ ವೈಯಕ್ತಿಕ ಜೀವನದ ಕುರಿತು ಅಪಪ್ರಚಾರ ಮಾಡಬಲ್ಲರು.

ಇದು ಸಿಟಿಆರ್ ನಿರ್ಮಲ್ಕುಮಾರ್ ನ ಮನಸ್ಥಿತಿ ಮಾತ್ರವಲ್ಲ. ಸಂಬಂಧಗಳ ಅರಿವು ಇಲ್ಲದ ಬಿಜೆಪಿಯ ಎಲ್ಲರ ಮನಸ್ಥಿತಿ ಬಚ್ಚಲಿಗಿಂತಲೂ ತುಸು ಹೆಚ್ಚೇ ಕೊಳೆತು ನಾರುತ್ತದೆ. ರಾಜಕೀಯದಾಚೆಗೆ ನೋಡುವುದಾದರೆ, ಇವರು ತಮ್ಮ ಯಾವ ಸಂಬಂಧಿಯೊಂದಿಗೂ ಮೈಕೈ ಮುಟ್ಟಿಕೊಂಡು ಮಾತನಾಡುವುದಿಲ್ವಾ? ಅಥವಾ ಬೇರೆ ಯಾವ ಹೆಣ್ಣು ಮಕ್ಕಳನ್ನೂ ಮುಟ್ಟೇ ಇಲ್ವಾ? ದಿಲ್ಲಿ ದಿಲ್ಲಿ ದಿಲ್ಲಿ ಅಂದ ರಮೇಶ್ ಕುಮಾರ್ ಜಾರಕಿಹೊಳಿ, ಸದನದಲ್ಲಿ ಕುಳಿತುಕೊಂಡೇ ರತಿ ಕ್ರೀಡೆ ನೋಡಿದ ಆ ಮೂವರು ಬ್ಲೂಬಾಯ್ಸ್, ಸ್ನೇಹಿತನ ಹೆಂಡತಿಯ ಮೇಲೆಯೇ ಅತ್ಯಾಚಾರ ಮಾಡಲು ಯತ್ನಿಸಿದ ಹರತಾಳು ಹಾಲಪ್ಪ. ಅಷ್ಟೇ ಏಕೆ, ಕೇವಲ ಎಂಟೇ ಎಂಟು ವರ್ಷದ ಕಂದಮ್ಮ ಆಸೀಫಾ ಮೇಲಾದ ಅತ್ಯಾಚಾರ, 17 ವರ್ಷದ ದಲಿತ ಬಾಲಕಿ ಮನಿಷಾ ವಾಲ್ಮೀಕಿ ಮೇಲಾದ ಅತ್ಯಾಚಾರವನ್ನು ಸಮರ್ಥಿಸಿ, ರಾಷ್ಟ್ರಧ್ವಜ ಹಿಡಿದು ಬೀದಿಗಿಳಿದವರು - ಎಲ್ಲರೂ ಬಿಜೆಪಿಯವರು. ಬಿಲ್ಕೀಸ್ ಬಾನುವಿನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅವಳ ಕುಟುಂಬದವರನ್ನು ಕೊಚ್ಚಿ ಕೊಲೆ ಮಾಡಿದ ಪಾತಕಿಗಳನ್ನ ಸನ್ನಡತೆಯವರು, ಸಂಸ್ಕಾರವಂತರೂ ಅಂದವರೂ ಸಹ ಇದೇ ಬಿಜೆಪಿಯವರು. ತುಂಬು ಗರ್ಭಿಣಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಗರ್ಭ ಸೀಳಿ, ಹೊಟ್ಟೆಯೊಳಗಿದ್ದ ಭ್ರೂಣವನ್ನು ತ್ರಿಶೂಲದಿಂದ ಚುಚ್ಚಿ, ಅದನ್ನ ಎತ್ತಿಕೊಂಡು ಕುಣಿದಾಡಿದ ನರಾಧಮರು ಕೂಡಾ ಇದೇ ಬಿಜೆಪಿಯವರೇ.. ಇಂತ ಬಿಜೆಪಿಗರಿಗೆ ಹೆಣ್ಣೆಂದರೆ, ಸಂಬಂಧವೆಂದ್ರೆ, ಸಂಬಂಧಗಳ ಬೆಸುಗೆ, ಕರುಳೆಂದ್ರೆ ಸ್ವಲ್ಪನಾದ್ರೂ ಗೊತ್ತಿರುತ್ತೆ ಅಂದ್ರೆ ಯಾರ್ರೀ ನಂಬ್ತಾರೆ. ಇವರದ್ದೇನಿದ್ದರೂ ಅತ್ಯಾಚಾರ ಮಾಡೋ ಸಂಸ್ಕೃತಿ, ಅತ್ಯಾಚಾರಿಗಳನ್ನ ಸಮರ್ಥಿಸೋ ಸಂಸ್ಕೃತಿ.

ಅಸಲಿಗೆ ಎರಡು ರೂಪಾಯಿ ಎಂಜಲು ಕಾಸಿನಾಸೆಗಾಗಿ ಈ ಎರಡು ರೂಪಾಯಿ ಗಿರಾಕಿಗಳು, ರಾಹುಲ್ ಗಾಂಧಿಯವರ ಕುರಿತು ಯರ್ರಾಬಿರ್ರಿ ಅಪ್ರಪಚಾರ ಮಾಡ್ತಿರೋದು ಯಾಕೆ ಗೊತ್ತಾ? ಇದೇ ಸೆಪ್ಟೆಂಬರ್ 7 ರಿಂದ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದರು. ಇವತ್ತಿಗೆ ಬರೋಬ್ಬರಿ 13 ದಿನಗಳಾಯ್ತು. ದೇಶಾದ್ಯಂತ ದ್ವೇಷವನ್ನು ತೊಡೆದುಹಾಕಬೇಕೆಂಬ ಉದ್ದೇಶವಿಟ್ಟುಕೊಂಡು ಆರಂಭಿಸಿದ ಯಾತ್ರೆ ಇಲ್ಲಿಯವರೆಗೂ ಅತ್ಯದ್ಭುತ ಯಶಸ್ಸು ಕಂಡಿದೆ. ಹೋದಲೆಲ್ಲಾ ಜನಸಾಗರವೇ ಹರಿದು ಬರುತ್ತಿದೆ. ಇದು ಬಿಜೆಪಿಯವರಿಗೆ ಐಸ್ ಕ್ಯೂಬ್ ಮೇಲೆ ಕೂತರೂ ತಣ್ಣಗಾಗದಿರುವಷ್ಟು ಉರಿ ಹತ್ತಿಸಿ ಬಿಟ್ಟಿದೆ. ಅದಕ್ಕೆ ರಾಹುಲ್ ಕುರಿತು ಅಪಪ್ರಚಾರ ಪ್ರಾರಂಭಿಸಿ ಬಿಟ್ಟರು ನೋಡಿ. ಮೊದಲು ಅವರ ಟೀ ಶರ್ಟ್ ಬಗ್ಗೆ ತಗಾದೆ ತೆಗೆದರು. ಅದರ ಬೆಲೆ ಅಷ್ಟಂತೆ, ಇಷ್ಟಂತೆ ಅಂತ ಬಾಯಿ ಬಡ್ಕೊಂಡಿದ್ದೇ ಬಡ್ಕೊಂಡಿದ್ದು. ಆದ್ರೆ ಈ ಪ್ರೊಪಗಂಡ ಅಟ್ಟರ್ ಫ್ಲಾಫ್ ಆಯ್ತು.

ಬಿಜೆಪಿಗರಿಗೆ ದೇಶದ ಜನ ಛೀ, ಥೂ ಅಂತ ಉಗುಳಿದರು. ಇಷ್ಟಾದರೂ ಸುಮ್ಮನಾಗದ ಬಿಜೆಪಿಯವರು, ರಾಹುಲ್ ಗಾಂಧಿಯವರು ಮಲಗುವ ಕಂಟೈನರ್ ಬಗ್ಗೆ ಕ್ಯಾತೆ ತೆಗೆದರು.. ರಾಹುಲ್ ಗಾಂಧಿ ಮಲಗುವ ಕಂಟೇನರ್ ಅಷ್ಟು ದೊಡ್ಡದಿದೆ, ಇಷ್ಟು ದೊಡ್ಡದಿದೆ, ಅದು ಅಷ್ಟು ಬೆಲೆ ಬಾಳುತ್ತೆ, ಇದು ಇಷ್ಟು ಐಷರಾಮಿಯಾಗಿದೆ ಅಂತ ಹೊಯ್ಕೊಂಡಿದ್ದೇ ಹೊಯ್ಕೊಂಡಿದ್ದು. ಆದ್ರೆ ಈ ಪ್ರೊಪಗಂಡ ಕೂಡಾ ನೆಲ ಕಚ್ಚಿ ಮಣ್ಣು ಪಾಲಾಯ್ತು. ರಾಹುಲ್ ಗಾಂಧಿಯವರ ವರ್ಚಸ್ಸಿಗೆ ಧಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿ, ತನ್ನ ಮುಖದ ಮೇಲೆ ತಾನೇ ಕೆಸರೆರೆಚಿಕೊಂಡ ಬಿಜೆಪಿಗೆ, ಅವರನ್ನು ಹೇಗಾದರೂ ತೇಜೋವಧೆ ಮಾಡಲೇಬೇಕಿತ್ತು. ಅದಕ್ಕಾಗಿ ಒಂದು ಅಸ್ತ್ರ ಬೇಕೆ ಬೇಕಿತ್ತು. ಅದೂ ಸುಳ್ಳಾದರೂ ಸರಿ, ವಿಷಯವನ್ನು ತಿರುಚಿದರೂ ಸರಿ. ಆಗ ಸಿಕ್ಕಿದ್ದೇ ಈ ಫೋಟೋ.  

ರಾಜೀವ್ ಗಾಂಧಿಯವರ ಪುಣ್ಯತಿಥಿಯ ದಿನ ಕುಟುಂಬ ಸಮೇತರಾಗಿ ಕುಳಿತಿದ್ದ ಫೋಟೋವನ್ನು ಬಳಸಿಕೊಂಡು, ಫೋಟೋಶಾಪ್ನಲ್ಲಿ ಎಡಿಟ್ ಮಾಡಿ, ಅದಕ್ಕೆ ದುರ್ವ್ಯಾಖ್ಯಾನ ಮಾಡುವ ಕಲೆ ಬಿಜೆಪಿಗರಿಗಲ್ಲದೇ ಇನ್ಯಾರಿಗೆ ಬರಲು ಸಾಧ್ಯ? ತನ್ನ ತಟ್ಟೆಯಲ್ಲೇ ಹೆಗ್ಗಣ ಸತ್ತು ಬಿದ್ದು ಕೊಳೆತು ನಾರುತ್ತಿರುವಾಗ, ಇನ್ನೊಬ್ಬರ ಮನೆಯ ತಟ್ಟೆಯಲ್ಲಿ ನೊಣ ಬಿದ್ದಿದೆ ಅನ್ನುವ ಇವರ ಹಿಪೋಕ್ರಸಿಗೆ ಮಿತಿ ಕೂಡಾ ಇಲ್ಲ ಅಂದ್ರೆ ಹೇಗೆ ಅಂತ? ತನ್ನ 56 ಇಂಚಿನ ಎದೆಯನ್ನುಬ್ಬಿಸಿ ಜನತೆಗೆ ಕರೆ ನೀಡುವ ಮಬ್ಬಕ್ತರ ವಿಶ್ವಗುರು.. ತನ್ನ ನೆರಳಿನೆಡೆಯಲ್ಲೇ ದಿನನಿತ್ಯ ನಡೆಯುತ್ತಿರುವ ಲಕ್ಷಾಂತರ ದಮನಿತ ವರ್ಗಗಳ ಬಾಲಕಿಯರ ಅತ್ಯಾಚಾರವನ್ನು ತಾನು ತೊಟ್ಟಿರುವ 15, 20 ಲಕ್ಷ ಬೆಲೆಬಾಳುವ ಹವಾಮಾನಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲ ಕನ್ನಡಕದ ಹಿಂದೆಯೇ ಮರೆಮಾಚಿರೋದು ಮಾತ್ರ ಈ ದೇಶದ ದುರಂತ.. ಅತ್ಯಾಚಾರವಾಗ್ತಿರೋದು ತಳವರ್ಗದವರದ್ದಲ್ವಾ.. ಅವರ ಕೂಗು ಯಾವ ಗೋಧಿ ಮೀಡಿಯಾಗಳಿಗೂ ಕೇಳೋದಿಲ್ಲ.. ಯಾವ ಮಂತ್ರಿ ಸಚಿವರುಗಳಿಗೂ ಕಾಣೋದಿಲ್ಲ.. ಅದಕ್ಯಾಕೆ ತಲೆಕೆಡಿಸ್ಕೋಬೇಕು ಅಲ್ವಾ.. ಹೊರದೇಶದಿಂದ ಚೀತಾ ತರಿಸೋಣ.. ಸಂಜೆ ಹೊತ್ತಲ್ಲಿ ನವಿಲಿಗೆ ಕಾಳಾಕೋಣ.. ಆದ್ರೆ ಒಂದ್ರೌಂಡು ಟ್ರಿಪ್ ಹೋಗ್ಬರಾಣ.. ಹಸಿದಾಗ 3, 4 ಲಕ್ಷ ಬೆಲೆಬಾಳೋ ಒಳ್ಳೆ ಮಶ್ರೂಮ್ ತರಿಸಿ ತಿನ್ನೋಣ.. ಒಂದಷ್ಟು ಡ್ರೆಸ್ ಚೇಂಜ್ ಮಾಡಿ.. ಫೋಟೋ ಶೂಟ್ ಮಾಡ್ಸೋಣ.. ರಾತ್ರಿ ರೇಡಿಯೋ ಮುಂದೆ ಬಂದು ಮಂಕಿ ಬಾತ್ನಲ್ಲಿ ಒಂದಷ್ಟು ಸುಳ್ಳು ಆಶ್ವಾಸನೆ ಕೊಡೋಣ.

-ಕನ್ನಡ ಒನ್‌ ನ್ಯೂಸ್‌ ಬಳಗ

© Copyright 2022, All Rights Reserved Kannada One News