ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಭಯೋತ್ಪಾದನೆ!: ಎಡಿಟರ್ ಸ್ಪೆಷಲ್

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಭಯೋತ್ಪಾದನೆ!: ಎಡಿಟರ್ ಸ್ಪೆಷಲ್

Updated : 03.09.2022

ಆರೆಸ್ಸೆಸ್.. ಇದು ಹೆಸರಿಗೆ ಮಾತ್ರ ಸಾಂಸ್ಕೃತಿಕ ಸಂಘಟನೆ, ಕೆಲಸ ಜನರನ್ನ ಭಯದಲ್ಲಿ ದೂಡೋದು. ಹೇಳಿಕೊಳ್ಳೋದು ನಾವು ದೇಶಭಕ್ತರು ಅಂತ. ಆದ್ರೆ ಮಾಡೋದು ಬಾಂಬ್ ಹಾಕೋ ಭಯೋತ್ಪಾದನೆ. ನೋಡಿ ಈ ಆರೆಸ್ಸೆಸ್ ಅನ್ನೋ ಸಂಘಟನೆಯ ಭಯೋತ್ಪಾದನೆಯ ಬಗ್ಗೆ ನಿಮಗೆ ಹೇಳುವ ಮೊದಲೇ, ಅದರ ಇನ್ನೊಂದು ಮುಖವಾದ ತೆರೆಮರೆಯ ಭಯೋತ್ಪಾದನೆಯ ಬಗ್ಗೆಯೂ ಸಂಕ್ಷಿಪ್ತವಾಗಿ ಹೇಳಿ ಬಿಡ್ತೇನೆ.

ಭಾರತ ಒಂದು ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲಾ ಜಾತಿ, ಮತಧರ್ಮದವರು ಪರಸ್ಪರ ಸಹೋದರರಂತೆ ಬದುಕುತ್ತಿದ್ದಾರೆ. ಹಾಗೂ ಈ ನೆಲದ ಸಂವಿಧಾನದ ಪರಿಚ್ಛೇದ 14 ರ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು. ಆದರೆ ಈ ನಿಲುವಿಗೆ ಆರೆಸ್ಸೆಸ್ನ ತೀವ್ರ ವಿರೋಧವಿದೆ ಅನ್ನೋ ಆರೋಪ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಇನ್ಫ್ಯಾಕ್ಟ್ ಆರೆಸ್ಸೆಸ್ ವರ್ತಿಸುವುದು ಕೂಡಾ ಅದೇ ರೀತಿ. ಹಿಂದೂಗಳು ಮಾತ್ರ ದೇಶದ ನಿಜವಾದ ನಾಗರಿಕರು, ಇತರರು ಇಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳು ಅಂತ ಅಪಪ್ರಚಾರ ಮಾಡೋದೆ ಆರೆಸ್ಸೆಸ್ಸಿನ ಕಸುಬು. ಚಿಲ್ಲರೆ ಕಾರಣಗಳಿಂದಾಗಿ ಕೋಮುಗಲಭೆಗಳು ಅಲ್ಲಲ್ಲಿ ನಡೆಯುವುದನ್ನು ನಾವೆಲ್ಲರೂ ನೋಡಿದ್ದೇವೆ. ಇಲ್ಲೆಲ್ಲಾ ಮೇಲ್ನೋಟಕ್ಕೆ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಪಾತ್ರ ಇಲ್ಲವೆಂದು ತೋರುತ್ತದೆ. ಆದರೆ ಕೋಮುಗಲಭೆಯಾಗಿ ಮಾರ್ಪಡಿಸಲು ಅಗತ್ಯವಿರುವ ಎಲ್ಲಾ ರೀತಿಯ ವಿಷಬೀಜಗಳನ್ನು ಆರೆಸ್ಸೆಸ್ ಮೊದಲೇ ಬಿತ್ತಿರುತ್ತದೆ.

ಕೋಮುಗಲಭೆಗಳು ಹೊತ್ತಿಕೊಂಡ ನಂತರವಂತೂ, ಜ್ವಾಲೆಯಾಗಿ ಉರಿಯಲು ಎಷ್ಟು ಎಣ್ಣೆ ಬೇಕೋ ಅಷ್ಟು ಸುರಿಯಲು ಆರೆಸ್ಸೆಸ್ ತುದಿಗಾಲಲ್ಲಿ ನಿಂತಿರುತ್ತದೆ. ಕೋಮುಗಲಭೆಯ ರೂಪ ಕೊಡಬಲ್ಲ ಯಾವುದೇ ಕ್ಷುಲ್ಲಕ ಘಟನೆಗಳನ್ನು ಆರೆಸ್ಸೆಸ್ ಮತ್ತು ಸಂಘಪರಿವಾರ ಬಿಟ್ಟು ಕೊಡುವುದಿಲ್ಲ. ಎಲ್ಲದಕ್ಕೂ ಬಣ್ಣ ಹಚ್ಚಿ, ಸುಳ್ಳು ಸುದ್ದಿ ಹರಡುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತದೆ. ಯಾವುದೇ ವಿಚಾರದಲ್ಲಾಗಲಿ ಸುಳ್ಳುಗಳನ್ನು ಸೃಷ್ಟಿಸುವ ಕಲೆಯಲ್ಲಿ ಸಂಘಪರಿವಾರದವರನ್ನು ಮೀರಿಸಲು ಬೇರೆ ಯಾವ ಸಂಘಟನೆಗಳಿಗೂ ಸಾಧ್ಯವಿಲ್ಲ ಬಿಡಿ. ಅಂತಹ ನಿಸ್ಸೀಮರು ಅವರು. ಘಳಿಗೆಯಲ್ಲಿಯೇ ಶಮನವಾಗುವ ಘಟನೆಯನ್ನು ಭೂತಾಕಾರವಾಗಿ ಬೆಳೆಸಿ ಜನಜೀವನಕ್ಕೆ ಬೆಂಕಿ ಹಚ್ಚಬಲ್ಲರು. ಕಡ್ಡಿಯನ್ನ ಗುಡ್ಡವನ್ನಾಗಿಸಬಲ್ಲರು. ಇದು ಇವರ ತೆರೆಮರೆಯ ಭಯೋತ್ಪಾದನೆ.

ಇನ್ನೂ ಇವರು ನೇರವಾಗಿ ನಡೆಸುವ ಭಯೋತ್ಪಾದನೆಯ ಬಗ್ಗೆಯಂತೂ ಖುದ್ದು ಅವರೇ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಹೈದ್ರಾಬಾದಿನ ಮಕ್ಕಾ ಮಸೀದಿ ಬ್ಲಾಸ್ಟ್, ಮಾಲೆಗಾಂವ್ ಬ್ಲಾಸ್ಟ್, ಸಂಜೋತಾ ಬ್ಲಾಸ್ಟ್ ಮತ್ತು ಅಜ್ಮೀರ್ ದರ್ಗಾದಲ್ಲಿ ಸರಣಿ ಬಾಂಬ್ಗಳು ಸ್ಫೋಟಗೊಂಡಾಗ ಪೂರ್ವಾಗ್ರಹ ಪೀಡಿತ ಪೊಲೀಸರು, ಆ ಬಾಂಬ್ ಸ್ಫೋಟದ ಸದ್ದಡಗುವುದಕ್ಕೂ ಮೊದಲೇ ಮುಸ್ಲಿಂ ಯುವಕರ ಮೇಲೆ ಸಂಶಯಿಸಿ ಅವರನ್ನು ಎಳೆದುಕೊಂಡು ಹೋಗಿ, ಜೈಲಿನಲ್ಲಿ ಕೂಡಿಹಾಕಿ, ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟು ಅವರ ಬದುಕನ್ನು ಮೂರಾಬಟ್ಟೆ ಮಾಡಿ ಹಾಕಿದ್ದರು. ನಂತರ ಆ ಪ್ರಕರಣಗಳನ್ನು ಹೇಮಂತ್ ಕರ್ಕರೆ ಎಂಬ ಧರ್ಮಬೀರು ದಿಟ್ಟ ಪೊಲೀಸ್ ಅಧಿಕಾರಿ ಕೈಗೆತ್ತಿಕೊಂಡಾಗ, ಭಯೋತ್ಪಾದನೆಯ ಜಾಲಗಳೆಲ್ಲ ಆರೆಸ್ಸೆಸ್ ಮನೆ ಬಾಗಿಲಿನ ಮುಂದೆ ಹೋಗಿ ನಿಂತಿದ್ದವು. ಸಾಧ್ವಿ ಪ್ರಜ್ಞಾಸಿಂಗ್, ಆಸೀಮಾನಂದ, ಕರ್ನಲ್ ಪುರೋಹಿತನಂತವರು ಜೈಲು ಪಾಲಾಗಿದ್ದರೆ, ಸುನೀಲ್ ಜೋಷಿ, ಸಂದೀಪ್ ಜೋಷಿ, ರಾಮ್ಜಿ ಕಲ್ಸಂಗ್ರ, ಲೋಕೇಶ್ ಶರ್ಮಾ, ದೇವೇಂದ್ರ ಗುಪ್ತಾ, ಅಮಿತ್ ಚೌಹಾಣ್, ಹರ್ಷದ್ ಸೋಲಂಕಿ, ಮುಕೇಶ್ ವಾಸನಿ, ಭರತ್ ರಾತೀಶ್ವರ್, ಭಾವೇಶ್ ಪಟೇಲ್, ಸುರೇಶ್ ನಾಯರ್, ಮಹೇಶ್ ಗೋಹಿಲ್, ಚಂದ್ರಕಾಂತ, ರಮೇಶ್ ಉಪಾಧ್ಯಾಯ ಸೇರಿದಂತೆ ಸಂಘ ಪರಿವಾರದ ಇನ್ನು ಹಲವು ಭಯೋತ್ಪಾದಕರ ಹೆಸರುಗಳು ಎನ್ಐಎ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿತ್ತು. ಇದೀಗ ಮತ್ತೊಬ್ಬ ಆರೆಸ್ಸೆಸ್ನ ಮುಖಂಡ ಭಯೋತ್ಪಾದನೆ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಹೌದು ಯಶವಂತ್‌ ಶಿಂಧೆ ಅನ್ನೋ ಆರೆಸ್ಸೆಸ್ಸಿನ ಮುಖಂಡ ನಾಂದೇಡ್‌ ಕೋರ್ಟಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆರೆಸ್ಸೆಸ್ಸಿನ ಎಲ್ಲಾ ವಿಧ್ವಂಸಕ ಕೃತ್ಯಗಳನ್ನು ಬಾಯಿ ಬಿಟ್ಟಿದ್ದಾನೆ. ಭಾರತದ ನಾನಾ ಕಡೆ ನಡೆದ ಬಾಂಬು ಸ್ಫೋಟಕ್ಕೆ ಆರೆಸ್ಸೆಸ್ ಕಾರಣವಾಗಿದೆ. ಅಂತಹ ಆರೆಸ್ಸೆಸ್ ತರಬೇತಿ ಶಿಬಿರಗಳಲ್ಲಿ ನಾನು ನೇರವಾಗಿ ಭಾಗವಹಿಸಿದ್ದೆ ಅಂತ ನಾಂದೇಡ್ ಕೋರ್ಟಿಗೆ ಯಶವಂತ್‌ ಶಿಂಧೆ ಸ್ಪಷ್ಟಪಡಿಸಿದ್ದಾನೆ. ತಾನು ಆರೆಸ್ಸೆಸ್ ಕಾರ್ಯಕಾರಿ ಸದಸ್ಯ ಎಂದು ಹೇಳಿಕೊಂಡಿರುವ ಶಿಂಧೆ, ಬಾಂಬು ಸ್ಫೋಟಕ್ಕೆ ಪ್ಲಾನ್ ನಡೆಸಿದ ಮತ್ತು ಹಲವು ಹಂತಗಳಲ್ಲಿ ವ್ಯವಹರಿಸಿದ ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರ ಹೆಸರುಗಳನ್ನು ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿದ್ದಾನೆ. ಸಂಚು, ಯೋಜನೆ, ಆಯ್ಕೆ, ಸ್ಫೋಟ ಇವೆಲ್ಲ ನಡೆಯುವುದರ ವಿವರವನ್ನೂ ಅದರಲ್ಲಿ ದಾಖಲಿಸಿದ್ದಾನೆ. ನಾನು ಹಿಂದುತ್ವದಲ್ಲಿ ನಂಬಿಕೆ ಇಟ್ಟವನಾಗಿದ್ದು, ಹಿಂದೂ ಧರ್ಮವೇ ಗಣ್ಯ ಅಂತ ಅಂದುಕೊಂಡಿದ್ದೇನೆ. ಆದರೆ ಈ ಉಗ್ರ ಕೃತ್ಯ ಖಂಡಿಸುತ್ತೇನೆ ಎಂದು ಹೇಳಿರುವ ಶಿಂಧೆ, ಇಲ್ಲಿಯವರೆಗೆ ಆರೆಸ್ಸೆಸ್‌ ನಡೆಸಿದ ಬಾಂಬ್‌ ಸ್ಫೋಟದಂತಹ ದುಷ್ಕೃತ್ಯಗಳ ಹಿಂದಿರುವ ಮೂವರು ಆರೆಸ್ಸೆಸ್ ಹಾಗೂ ವಿಶ್ವ ಹಿಂದೂ ಪರಿಷತ್ ನಾಯಕರ ಹೆಸರನ್ನು ಸಹ ಅಫಿಡವಿಟ್‌ನಲ್ಲಿ ಸೇರಿಸಿದ್ದಾನೆ.

ಆರೆಸ್ಸೆಸ್ ಮುಖಂಡರಾದ ಇಂದ್ರೇಶ್ ಕುಮಾರ್, ಹಿಮಾಂಶು ಪಾಂಡೆ, ಮಿಲಿಂದ್ ಪರಾಂದೆ, ರಾಕೇಶ್ ದಾವಡೆ, ರವಿ ದೇವ್ ಅಲಿಯಾಸ್‌ ಮಿಥುನ್ ಚಕ್ರವರ್ತಿ ಇವರೆಲ್ಲ ಬಾಂಬ್‌ ಸ್ಫೋಟಕ್ಕೆ ಪ್ರಮುಖ ಸಂಚುಗಾರರು ಅಂತ ಹೇಳಲಾಗಿದೆ. ಅದರಲ್ಲಿ ಮುಖ್ಯವಾಗಿ ಮೂವರು, ಮಿಲಿಂದ್ ಪರಾಂದೆ ಮತ್ತು ರಾಕೇಶ್ ದಾವಾದ್ ಶಿಬಿರಗಳಲ್ಲಿ ಬಾಂಬ್ ಸ್ಫೋಟಿಸುವದು ಹೇಗೆ ಅಂತ ತರಬೇತಿ ನೀಡಿದರೆ, ರವಿ ದೇವ್ ಬಾಂಬು ತಯಾರಿಸುವುದನ್ನು ಹೇಳಿ ಕೊಡುತ್ತಿದ್ದ ಅಂತ ಯಶವಂತ್‌ ಶಿಂಧೆ ಬಾಯಿ ಬಿಟ್ಟಿದ್ದಾನೆ. ನಾನು ತರಬೇತಿಗೆ ಹೋಗಿದ್ದರೂ ಇಂಥ ಹೀನ ಕುಕೃತ್ಯದಲ್ಲಿ ಭಾಗವಹಿಸಲು ಮನಸ್ಸು ಬಾರದೆ ಬಾಂಬ್ ಸ್ಫೋಟಿಸುವುದಕ್ಕೆ ಹೋಗಿಲ್ಲ. ಅಲ್ಲದೆ ಬಾಂಬು ಹಾಕುವುದೆಲ್ಲ ಒಳ್ಳೆಯದಲ್ಲ, ಅದು ಹೇಯ ಕೃತ್ಯ ಅಂತ ನನ್ನ ಜೊತೆಗೆ ಹೆಚ್ಚಿನ ಸಂಪರ್ಕದಲ್ಲಿದ್ದವರಿಗೆ ಬುದ್ಧಿ ಹೇಳಿದ್ದೆ. ಈ ಮೂಲಕ ಸಾಕಷ್ಟು ಅಮಾಯಕರ ಪ್ರಾಣವನ್ನು ಉಳಿಸಿದ್ದೇನೆ ಅಂತ ಶಿಂಧೆ ಅಫಿಡವಿಟ್ನಲ್ಲಿ ಹೇಳಿದ್ದಾನೆ. ಆದರೆ ಆರೆಸ್ಸೆಸ್, ಬಿಜೆಪಿಯ ಬಾಂಬ್ ಸ್ಫೋಟಗಳು ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಅಲ್ಲದೆ ಬಿಜೆಪಿಗೆ ಭಾರೀ ಲಾಭವನ್ನೇನೂ ತಂದುಕೊಡಲಿಲ್ಲ. ಬೃಹತ್ ಬಾಂಬು ಸ್ಫೋಟ ನಡೆಸಿದ ಸಂದರ್ಭದಲ್ಲಿ ಅಂದರೆ 2004ರಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು.

ಪ್ರಮುಖ ಸ್ಫೋಟ ಸಂಚುಕೋರರಾದ ಮಿಲಿಂದ್ ಪರಾಂದೆಯಂಥವರು ಇದರಿಂದ ಬೆದರಿ ಭೂಗತರಾದರು. ಆದರೆ ಅಲ್ಲಿಂದಲೂ ಗುಪ್ತವಾಗಿ ಸಂಚು ಮುಂದುವರಿಸಿದ್ದಾರೆ. ಅವರು ಭೂಗತರಾಗಿದ್ದರೂ ದೇಶದ ನಾನಾ ಕಡೆ ಬಾಂಬು ಸ್ಫೋಟ ನಡೆಸಿದ್ದಾರೆ. ಕೆಲವೆಡೆ ಪೊಲೀಸರ ವೇಷದಲ್ಲೂ ತಿರುಗಾಡುತ್ತಾರೆ. ಅದೇ ವೇಳೆಗೆ ಬಾಂಬು ಸ್ಫೋಟಿಸಿದ್ದು ಮುಸ್ಲಿಮರು ಎಂದು ಮಾಧ್ಯಮಗಳಲ್ಲಿ ವರದಿ ಬರುವಂತೆ ಮಾಡುತ್ತಾರೆ. ಈ ಎಲ್ಲಾ ದುಷ್ಕೃತ್ಯಗಳಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಯಿತು ಅಂತ ಅಫಿಡವಿಟ್‌ನಲ್ಲಿ ವಿವರಿಸಿ ಹೇಳಿದ್ದಾನೆ. 2014ರಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೋದಿಯವರು ಪ್ರಧಾನಿಯಾದರು. ಇದಾಗುತ್ತಲೇ ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್‌ನ ಭೂಗತ ಪಾತಕಿಗಳೆಲ್ಲ ಮುನ್ನೆಲೆಗೆ ಬಂದರು. 2006ರ ನಾಂದೇಡ್ ಸ್ಫೋಟದಲ್ಲಿ ಮೇಲೆ ಹೇಳಿದ ಮೂವರು ಪ್ರಮುಖ ಸಂಚುಗಾರರಾಗಿದ್ದು, ಅವರನ್ನು ಕಾನೂನು ಕಟಕಟೆಗೆ ಎಳೆಯಬೇಕು ಎಂದು ಯಶವಂತ್ ಶಿಂಧೆ ನಾಂದೇಡ್ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಹೇಳಿದ್ದಾನೆ.

ಗೊತ್ತಾಯ್ತಲ್ಲ... ದೇಶಭಕ್ತರ ದೇಶಪ್ರೇಮದ ವರಸೆ ಹೇಗಿದೆ ಅಂತ. ಈ ಆರೆಸ್ಸೆಸ್ಸಿಗರ ಭಯೋತ್ಪಾದನೆ ಪ್ರಸ್ತುತ ಭಾರತ ಎದುರಿಸುತ್ತಿರುವ ಜ್ವಲಂತ ಸಾಮಾಜಿಕ ಪಿಡುಗಾಗಿ ಬಿಟ್ಟಿದೆ. ಇದು ಈಗಾಗಲೇ ಕಾಳ್ಗಿಚ್ಚಿನಂತೆ ವ್ಯಾಪಿಸಿಕೊಳ್ಳುತ್ತಾ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಬಿಟ್ಟಿದೆ. ವ್ಯವಸ್ಥಿತ ಬೆದರಿಕೆ ಮತ್ತು ಹಿಂಸಾತ್ಮಕ ಕೃತ್ಯಗಳ ಮೂಲಕ ಸಮಾಜದಲ್ಲಿ ಆತಂಕ ಮೂಡಿಸುವ ಭಯೋತ್ಪಾದನೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ತಿದೆ. ಈಗಂತೂ ಆರೆಸ್ಸೆಸ್ಸಿನ ಅಸಲಿ ಮುಖ ಮತ್ತು ಭಯೋತ್ಪಾದನೆಯ ನೈಜ ಉದ್ದೇಶ ಏನು ಅನ್ನೋದು ಬಯಲಿಗೆ ಬಂದಿದೆ. ಅಲ್ಲೆಲ್ಲೋ, ಎಲ್ಲೆಲ್ಲೋ ಬಾಂಬ್‌ ಸ್ಫೋಟಿಸಿ ಅಮಾಯಕ ಮುಸ್ಲಿಮರ ತಲೆಗೆ ಕಟ್ಟುತ್ತಿದ್ದ ಮನುವಾದಿಗಳ ಜಾತಕ ಬಯಲಾಗಿದೆ.

ನೀವೆ ಸ್ವಲ್ಪ ಗಮನಿಸಿ ನೋಡಿ, ಈ ಹಿಂದೆ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಹೇಮಂತ್‌ ಕರ್ಕರೆ ಸಿದ್ಧಪಡಿಸಿದ ಚಾರ್ಜ್‌ಶೀಟ್‌ನಲ್ಲಿದ್ದ ಹೆಸರುಗಳಾಗಲೀ, ಇದೀಗ ಯಶವಂತ್‌ ಶಿಂಧೆ ನಾಂದೇಡ್‌ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿರುವ ಹೆಸರುಗಳಾಗಲಿ- ಅವೆಲ್ಲಾ ಬ್ರಾಹ್ಮಣರದ್ದೇ. ಅದಕ್ಕೆ ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ನಾವು ಹೇಳುತ್ತೇವೆ - ʼಬ್ರಾಹ್ಮಣರೆಲ್ಲ ಭಯೋತ್ಪಾದಕರಲ್ಲ ಆದರೆ ಭಯೋತ್ಪಾದಕರೆಲ್ಲ ಬ್ರಾಹ್ಮಣರೇʼ ಯಾಕಂದ್ರೆ ಶತಮಾನಗಳ ಕಾಲ ಇಲ್ಲಿನ ದಲಿತ ಮತ್ತು ಮಹಿಳೆಯರ ಮೇಲೆ ಮಾನಸಿಕ ಭಯೋತ್ಪಾದನೆಯನ್ನು ನಡೆಸಿದ ಇದೇ ಬ್ರಾಹ್ಮಣವಾದಿಗಳು ಇದೀಗ ಬಿಜೆಪಿಗಾಗಿ, ಅಲ್ಪ ಸಂಖ್ಯಾತರ ಮೇಲಿನ ದ್ವೇಷಕ್ಕಾಗಿ ಬಾಂಬಿಕ್ಕುವಂತಹ ಸಮಾಜಘಾತುಕ ದುಷ್ಕೃತ್ಯಗಳನ್ನ ಯಾವ ಹಿಂಜರಿಕೆಯೂ ಇಲ್ಲದೇ ಮಾಡುತ್ತಿದ್ದಾರೆ. ದಯವಿಟ್ಟು ಈ ನೆಲದ ಮೂಲ ನಿವಾಸಿಗಳಾದ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತರು ಇವರ ಕುತಂತ್ರವನ್ನು ಅರಿಯಲು ಪ್ರಯತ್ನಿಸಿ. ಜಾಗೃತಗೊಂಡು ಇವರ ಮಾನಸಿಕ, ಸಾಮಾಜಿಕ, ರಾಜಕೀಯ ಮತ್ತು ದೈಹಿಕ ಭಯೋತ್ಪಾದನೆಯನ್ನು ನಿಮ್ಮ ಕಾಲಿನಿಂದಲೇ ತುಳಿದು ಹುಟ್ಟಡಗಿಸಿ ಹೊಸಕಿ ಹಾಕಿ, ಪ್ರಬುದ್ಧ ಭಾರತವನ್ನು ನಿರ್ಮಿಸಬೇಕೆಂಬುದೆ ನಮ್ಮ ಆಶಯ. 

-ಕನ್ನಡ ಒನ್‌ ನ್ಯೂಸ್ ಬಳಗ

© Copyright 2022, All Rights Reserved Kannada One News