Flash News:
ದಾದಾಪೀರ್ ಜೈಮನ್‌, ತಮ್ಮಣ್ಣ ಬೀಗಾರಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ದಾದಾಪೀರ್ ಜೈಮನ್‌, ತಮ್ಮಣ್ಣ ಬೀಗಾರಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Updated : 24.08.2022

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್‌ ಜೈಮನ್‌ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಯುವ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿರಸಿಯ ಸಿದ್ದಾಪುರದ ತಮ್ಮಣ್ಣ ಅವರು ಬಾಲ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಈ ಪ್ರಶಸ್ತಿಯು 50,000 ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ.
ದಾದಾಪೀರ್‌ ಅವರಿಗೆ ನೀಲಕುರಿಂಜಿ ಕಥಾ ಸಂಕಲನಕ್ಕೆ ಹಾಗೂ ತಮ್ಮಣ್ಣ ಬೀಗಾರ ಅವರಿಗೆ ಬಾವಲಿ ಗುಹೆ ಮಕ್ಕಳ ಕಾದಂಬರಿಗಾಗಿ ಪ್ರಶಸ್ತಿ ದೊರೆತಿದೆ.


© Copyright 2022, All Rights Reserved Kannada One News